ಮಡಿಕೇರಿ, ಜ. 31: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು.

ಗೋಣಿಕೊಪ್ಪಲು ಕಾವೇರಿ ಕಾಲೇಜು: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ 71ನೇ ವರ್ಷದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಕಾವೇರಿ ಎಜುಕೇಷನ್ ಸೊಸೈಟಿ ನಿರ್ದೇಶಕ ಪ್ರೊ. ಇಟ್ಟಿರ ಕೆ. ಬಿದ್ದಪ್ಪ ಡಾ. ಬಿ.ಆರ್. ಅಂಬೇಡ್ಕರ್ ನಮಗೆ ಅತ್ಯಂತ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಯುವಜನತೆ ದೇಶದಲ್ಲಿ ಅಶಾಂತಿ ಉಂಟು ಮಾಡುವ, ಹಿಂಸೆಯನ್ನು ಪ್ರಚೋದಿಸುವಂತಹ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದೆ, ಪ್ರಜ್ಞಾವಂತಿಕೆ ಹಾಗೂ ರಾಷ್ಟ್ರಭಕ್ತಿಯನ್ನು ಬೆಳೆಸಿಕೊಂಡು ದೇಶದ ಏಕತೆಗೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂದರು.

ಈ ಸಂದರ್ಭ ಎನ್‍ಸಿಸಿ, ಎನ್‍ಎಸ್‍ಎಸ್, ರೋವರ್ ರೇಂಜರ್ ವಿದ್ಯಾರ್ಥಿಗಳು ದೇಶ ಭಕ್ತಿಗೀತೆಗಳನ್ನು ಹಾಡಿದರು. ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕಿ ಸಿ.ಪಿ. ಸುಜಯ, ಎನ್‍ಎಸ್‍ಎಸ್ ಅಧಿಕಾರಿಗಳಾದ ಎನ್.ಪಿ. ರೀತಾ, ಎಂ.ಎನ್. ವನಿತ್‍ಕುಮಾರ್, ಎನ್‍ಸಿಸಿ ಅಧಿಕಾರಿ ಐ.ಡಿ. ಲೇಪಾಕ್ಷಿ, ರೋವರ್ಸ್ ರೇಂಜರ್ಸ್ ಅಧಿಕಾರಿಗಳಾದ ಯು.ಟಿ. ಪೆಮ್ಮಯ್ಯ, ಮುರಳಿ, ಪವಿತ್ರ, ಸೀಮಾ ಇನ್ನಿತರರು ಉಪಸ್ಥಿತರಿದ್ದರು.ಕೊಡಗರಹಳ್ಳಿ: ಗ್ರಾಮ ಪಂಚಾಯಿತಿಯಲ್ಲಿ 71ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮಾ ಧ್ವಜಾರೋಹಣ ನೆರವೇರಿಸಿದರು.

ಪಂಚಾಯಿತಿ ಸದಸ್ಯರಾದ ಎಂ.ಎಂ. ಉಸ್ಮಾನ್, ಕಾರ್ಯದರ್ಶಿ ಸುಕುಮಾರ, ಪಂಚಾಯಿತಿ ನೌಕರರು ಅಣ್ಣಪ್ಪ, ಧನಂಜಯ, ಮಂಜು, ಸುನಿಲ್ ಶಾಲಾ ಶಿಕ್ಷಕರು ಸಾರ್ವಜನಿಕರು ಭಾಗವಹಿಸಿದ್ದರು.ಚೆಟ್ಟಿಮಾನಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆಟ್ಟಿಮಾನಿಯಲ್ಲಿ 71ನೇ ಗಣರಾಜ್ಯೋತ್ಸವವನ್ನು ಆಚರಿಸುವುದರೊಂದಿಗೆ ಕ್ರೀಡಾಕೂಟದಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ದತ್ತಿನಿಧಿಗಳ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಹಾಗೂ ಪೋಷಕರು ಹಾಜರಿದ್ದರು.ಕುಶಾಲನಗರ: ಹೆಬ್ಬಾಲೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 71ನೇ ವರ್ಷದ ಗಣರಾಜ್ಯೋತ್ಸವ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಕುಶಾಲನಗರ ಸರಕಾರಿ ಪದವಿಪೂರ್ವ ಕಾಲೇಜಿನ ಶಿಕ್ಷಕ ಊ.ರಾ. ನಾಗೇಶ್ ಮಾತನಾಡಿ, ದೇಶವನ್ನು ಯಾವ ರೀತಿ ಮುನ್ನಡೆಸಬೇಕು ಎಂದು ಅಂಬೇಡ್ಕರ್ ಅವರಿಂದ ಅಂಗೀಕರಿಸಿದ ಈ ಸಂವಿಧಾನವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭ ಗ್ರಾಮಸ್ಥರು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಹ ಶಿಕ್ಷಕ ದಿನೇಶ್ ಅವರು ಶಾಲೆಗೆ ಮಕ್ಕಳಿಗೆ ಮಧ್ಯಾಹ್ನದ ಉಪಹಾರ ಸೇವಿಸಲು 110 ಪ್ಲೇಟ್ ಮತ್ತು 110 ಗ್ಲಾಸ್‍ಗಳನ್ನು ಉಚಿತವಾಗಿ ದಾನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀಧರ್ ಹೆಚ್.ಎಸ್. ವಹಿಸಿದ್ದರು. ಕಾರ್ಯಕ್ರಮದ ಮೊದಲಿಗೆ ನಿವೃತ್ತ ಅಭಿಯಂತರ ಜಿ.ಎಲ್. ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಬನಶಂಕರಿ ದೇವಾಲಯ ಸಮಿತಿ ಅಧ್ಯಕ್ಷ ಬಸವರಾಜು, ಶಾಲಾ ಮುಂಭಾಗದ ಕಮಾನು ದಾನಿ ಹೆಚ್.ಬಿ. ನಿಂಗಪ್ಪ, ಶಾಲಾ ಜಾಗದ ದಾನಿ ನಿವೃತ್ತ ಶಿಕ್ಷಕ ನಿಂಗಪ್ಪ, ಶಾಲಾ ಹಿರಿಯ ಶಿಕ್ಷಕಿ ಟಿ.ಎ. ಮೀನಾಕ್ಷಿ, ಶಾಲಾ ಜಾಗದ ದಾನಿ ನಾಗಮ್ಮ, ಕಟ್ಟಡ ದಾನಿಗಳು ಮತ್ತು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೆಚ್.ಎಲ್. ರಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ಮಧುಸೂದನ, ಸಂಗಮವಾಹಿನಿಯ ಪ್ರಧಾನ ಸಂಪಾದಕ ಹೆಚ್.ಎಂ. ರಘು. ಸದಸ್ಯರಾದ ಹೆಚ್.ಪಿ. ಮಂಜುನಾಥ್ ಕೆಳಹಟ್ಟಿ ಮತ್ತು ಹೆಚ್.ಆರ್. ಮಂಜುನಾಥ್, ಶಾಲಾ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರು ಮತ್ತು ಸದಸ್ಯರು ಹಾಜರಿದ್ದರು. ಮೊದಲಿಗೆ ಎಲ್ಲರನ್ನು ಶಾಲಾ ಸಹ ಶಿಕ್ಷಕಿಯಾದ ಪುಷ್ಪಾವತಿ ಕಾರ್ಯಕ್ರಮದ ವೇದಿಕೆಗೆ ಗಣ್ಯರನ್ನು ಆಹ್ವಾನಿಸಿದರು. ಶಾಲಾ ಮುಖ್ಯ ಶಿಕ್ಷಕ ಹೆಚ್.ಎಂ. ವೆಂಕಟೇಶ್ ಸ್ವಾಗತಿಸಿದರು. ಸಿ.ಆರ್.ಪಿ. ಗಿರೀಶ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹ ಶಿಕ್ಷಕ ರಮೇಶ್ ವಂದಿಸಿದರು.

ಶಿಕ್ಷಕಿ ಬಬಿತ ಮತ್ತು ಜಾನಕಿಯವರು ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು. ದೈಹಿಕ ಶಿಕ್ಷಕ ಗಣೇಶ್ ಮಕ್ಕಳ ಮತ್ತು ಪೋಷಕರ ಕ್ರೀಡಾಕೂಟವನ್ನು ನಿರ್ವಹಿಸಿದರು. ಶಾಲೆಗಾಗಿ ಶ್ರಮಿಸಿದ ಗಣ್ಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ನಿವೃತ್ತ ಸೈನಿಕ ಹೆಚ್.ವಿ. ಯೋಗೇಶ್ ಧ್ವಜಾರೋಹಣ ಮಾಡಿ ಮಕ್ಕಳಿಗೆ ಗಣರಾಜ್ಯೋತ್ಸವ ಸಂದೇಶವನ್ನು ಸಾರಿದರು.