ಚೆಟ್ಟಳ್ಳಿ, ಜ. 31: ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರದಲ್ಲಿ ಚೆಟ್ಟಳ್ಳಿ ರಿಕ್ರಿಯೇಶನ್À ಕ್ಲಬ್‍ನ ಸದಸ್ಯರಿಗೆ ಕಾಫಿ ಬೇಸಾಯ, ಹೆಚ್ಚಿನ ಇಳುವರಿ, ಮಣ್ಣಿನ ಫಲವತ್ತತೆ ಕಾಪಾಡುವ ಬಗ್ಗೆ, ಕೃಷಿ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರದಲ್ಲಿ ತಿಳಿಸಲಾಯಿತು.

ಚೆಟ್ಟಳ್ಳಿ ಕಾಫಿ ಉಪಸಂಶೋಧನಾ ಕೇಂದ್ರದ ಪ್ರಭಾರ ಉಪನಿರ್ದೇಶಕ ಶಿವಪ್ರಸಾದ್, ಬೇಸಾಯ ವಿಜ್ಞಾನಿ ಗೋವಿಂದಪ್ಪ, ವಿಸ್ತರಣಾಧಿಕಾರಿ ಲಕ್ಷ್ಮಿಕಾಂತ್, ಪದ್ಮಭೂಶಣ್, ಕೀಟ ವಿಜ್ಞಾನಿ ಮಂಜುನಾಥ್ ರೆಡ್ಡಿ ಕಾಫಿ ಬೇಸಾಯದ ಕ್ರಮದ ಬಗ್ಗೆ ವಿವರಿಸಿದರು. ವಿನಾಯಕ ರಿಕ್ರಿಯೇಶನ್ ಕ್ಲಬ್‍ನ ಅಧ್ಯಕ್ಷರಾದ ದಂಬೆಕೋಡಿ ಹರೀಶ್, ಉಪಾಧ್ಯಕ್ಷರಾದ ಮುಳ್ಳಂಡ ಪುಶ್ಯರಂಜನ್, ಕಾರ್ಯದರ್ಶಿ ಪುತ್ತರಿರ ಕರುಣ್‍ಕಾಳಯ್ಯ, ಖಜಾಂಜಿಗಳಾದ ಪರ್ಲಕೋಟಿ ತಿರುಪತಿ, ಕೊಂಗೇಟಿರ ಲೋಕೇಶ್ ಅಚ್ಚಪ್ಪ ನಿರ್ದೇಶಕ ಮುಳ್ಳಂಡ ರತ್ತು ಚಂಗಪ್ಪ, ಚೋಳಪಂಡ ವಿಜಯ, ಪೇರಿಯನ ಶ್ಯಾಂ ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.