ಮಡಿಕೇರಿ, ಜ.31: ಅರೆಭಾಷೆ ಸಂಸ್ಕøತಿಗಳ ಬಗ್ಗೆ ದಾಖಲೀಕರಿಸುವ ಸಲುವಾಗಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.
ಅರೆಭಾಷೆ ಜನಾಂಗದ ಪುರಾತನ ಕಾಲದ ಪದ್ಧತಿ, ಆಚಾರ- ವಿಚಾರಗಳ ಐನ್‍ಮನೆ, ಸಾಂಪ್ರದಾಯಿಕ ಶೈಲಿಗಳು, ಕೃಷಿ ಪದ್ಧತಿಗಳು, ಅರೆÀಭಾಷಿಕರ ಪರಿಸರ ಚಿತ್ರಗಳು (ಲ್ಯಾಂಡ್‍ಸ್ಕೇಪ್) ಹೀಗೆ ಅರೆಭಾಷೆ ಸಂಸ್ಕøತಿಯನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಸಂಗ್ರಹಿಸಿ ದಾಖಲೀಕರಣ ಮಾಡುವ ಯೋಜನೆಯ ಸಲುವಾಗಿ ಛಾಯಾಚಿತ್ರಗಳನ್ನು ಅಹ್ವಾನಿಸಲಾಗಿದ್ದು, ಛಾಯಾಚಿತ್ರಗಳು ಇದ್ದಲ್ಲಿ ಅಕಾಡೆಮಿ ಕಚೇರಿಗೆ ತಲುಪಿಸಬಹುದು ಅಥವಾ ಛಾಯಾಚಿತ್ರಗಳ ಸಾಪ್ಟ್ ಕಾಫಿಯನ್ನು ಚಿಡಿebಚಿseಠಿhoಣos@gmಚಿiಟ.ಛಿomಗೆ ಇ-ಮೇಲ್ ಮಾಡಬಹುದಾಗಿದೆ. ಸಮಿತಿಯಲ್ಲಿ ಆಯ್ಕೆಯಾದ ಛಾಯಾಚಿತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಯನ್ನು ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ ದೂ: 08272-223055 ಇಲ್ಲಿಂದ ಪಡೆದುಕೊಳ್ಳಬಹುದು ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.