ಬೆಳೆಗಾರರ ಒಕ್ಕೂಟದ ಮನವಿ
ಮಡಿಕೇರಿ, ಜ. 31: ಕಾಫಿ ಬೆಳೆಗಾರರು ಸಾಲಭಾದೆಯಿಂದ ಸಾವಿಗೆ ಶರಣಾಗುತ್ತಿರುವ ಪ್ರಕರಣ ಮುಂದುವರೆದ ಹಿನ್ನೆಲೆಯಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿಯನ್ವಯ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲವನ್ನು ಮರುಹೊಂದಾಣಿಕೆ ಮಾಡಿಕೊಂಡು ಹೊಸ ಸಾಲವನ್ನು ಬೆಳೆಗಾರರಿಗೆ ನೀಡುವಂತೆ ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ.
ಸಕಲೇಶಪುರ ತಾಲೂಕು ಹೆಗ್ಗದ್ದೆ ಗ್ರಾಮದ ಕಾಫಿ ಬೆಳೆಗಾರ ಅನುಕರಣ್ ಸಾಲಭಾದೆಯಿಂದ ಸೋಮವಾರ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಪೆರ್Çೀರೇಷನ್ ಬ್ಯಾಂಕ್‍ನಲ್ಲಿ ಇವರು ಸಾಲ ಪಡೆದಿದ್ದು, ಸಾಲದ ಹೊರೆಯಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳೆಗಾರರು ಸಾಲದಶೂಲೆಯಿಂದ ಸಾವಿಗೀಡಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಬೆಳೆಗಾರರ ಒಕ್ಕೂಟವು, ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಕಾಫಿ ಬೆಳೆಗಾರರು ಬ್ಯಾಂಕ್‍ನಲ್ಲಿ ಪಡೆದಿರುವ ಸಾಲವನ್ನು ಮರುಹೊಂದಾಣಿಕೆಗೊಳಿಸಿ, ಮರುಸಾಲ ನೀಡುವಂತೆ ತಿಳಿಸಿದ್ದರೂ ಕೂಡ ಬ್ಯಾಂಕ್‍ಗಳು ಸಾಲ ಮರುಹೊಂದಾಣಿಕೆ ಮಾಡದೆ ಇರುವುದು ಇಂತಹ ಪ್ರಕರಣಗಳು ನಡೆಯಲು ಕಾರಣವಾಗಿದೆ.
ಎಲ್ಲಾ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್‍ಗಳಲ್ಲಿ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ಬೆಳೆಗಾರರು ಬ್ಯಾಂಕ್‍ನಲ್ಲಿ ಪಡೆದಿರುವ ಸಾಲವನ್ನು ಮರುಹೊಂದಾಣಿಕೆಗೊಳಿಸಿ ಹೊಸಸಾಲ ನೀಡುವ ಮೂಲಕ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಮುಂದಾಗಿ, ಇಂತಹ ಆತ್ಮಹತ್ಯೆ ಪ್ರಕರಣಗಳು ಮರುಕಳಿಸದಂತೆ ಜಾಗೃತರಾಗಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟವು ಒತ್ತಾಯಿಸಿದೆ.
ಕಾಫಿ ಬೆಳೆಗಾರರು ಯಾವುದೇ ಸಮಸ್ಯೆಗಳಿದ್ದರೂ ತಮ್ಮ ವ್ಯಾಪ್ತಿಯ ಬೆಳೆಗಾರರ ಸಂಘಟನೆಗಳ ಗಮನಕ್ಕೆ ತಂದು ಪರಿಹಾರ ಮಾರ್ಗ ಕಂಡುಕೊಳ್ಳುವಲ್ಲಿ ಮುಂದಾಗಬೇಕು. ಬ್ಯಾಂಕ್ ಸಾಲದ ವಿಷಯಕ್ಕೆ ಸಂಬಂಧಪಟ್ಟಂತೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಸಂಘಟನೆಗಳು ಮುಂದಾಗಲಿವೆ. ಯಾವುದೇ ಸಂಕಷ್ಟದ ಪರಿಸ್ಥಿತಿ ಎದುರಾದರೂ ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬಾರದಾಗಿ ಕರ್ನಾಟಕ ಬೆಳೆಗಾರರ ಒಕ್ಕೂಟವು ರಾಜ್ಯದ ಬೆಳೆಗಾರರ ಸಮೂಹದಲ್ಲಿ ಕಳಕಳಿಯಿಂದ ಕೇಳಿಕೊಳ್ಳುತ್ತಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ. ತೀರ್ಥಮಲ್ಲೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಎಸ್.ಬಕ್ಕರವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.