ನಿಡ್ತ-ಸೋಮವಾರಪೇಟೆ,ಜ.31: ಕನ್ನಡ ಭಾಷೆ, ಸಂಸ್ಕøತಿ, ಆಚಾರ ವಿಚಾರಗಳೊಂದಿಗೆ ಕೊಡಗಿನ ನೆಲ, ಜಲ, ಕೃಷಿಯನ್ನು ಸಂರಕ್ಷಿಸುವ ಬಗ್ಗೆ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ನಾಗೇಶ್ ಕಾಲೂರು ಅವರು ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಕಾಳಜಿ ತೋರ್ಪಡಿಸಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿಡ್ತ ಗ್ರಾಮದಲ್ಲಿ ಆಯೋಜಿಸಿರುವ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಡ್ತ-ಸೋಮವಾರಪೇಟೆ,ಜ.31: ಕನ್ನಡ ಭಾಷೆ, ಸಂಸ್ಕøತಿ, ಆಚಾರ ವಿಚಾರಗಳೊಂದಿಗೆ ಕೊಡಗಿನ ನೆಲ, ಜಲ, ಕೃಷಿಯನ್ನು ಸಂರಕ್ಷಿಸುವ ಬಗ್ಗೆ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ನಾಗೇಶ್ ಕಾಲೂರು ಅವರು ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಕಾಳಜಿ ತೋರ್ಪಡಿಸಿದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಿಡ್ತ ಗ್ರಾಮದಲ್ಲಿ ಆಯೋಜಿಸಿರುವ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅರೆಭಾಷೆ, ತುಳು, ಬ್ಯಾರಿ, ಮಲಯಾಳಂ, ತಮಿಳು, ಹವ್ಯಕ, ಉರ್ದು ಹೀಗೆ ಅನೇಕ ಭಾಷಿಕರಿದ್ದರೂ, ಕೆಲವು ಭಾಷೆಗಳಿಗೆ ಲಿಪಿ ಇಲ್ಲವಾಗಿದೆ. ಇದರಿಂದಾಗಿ ಪರೋಕ್ಷವಾಗಿ ಕನ್ನಡದ ಪೋಷಣೆಯೂ ಆಗುತ್ತಿದೆ ಎಂದ ಅವರು, ಕನ್ನಡ ಹಿರಿಯಣ್ಣನ ಸ್ಥಾನದಲ್ಲಿದ್ದು, ಈ ಭಾಷೆಗಳ ಬೆಳವಣಿಗೆಗೆ ಒತ್ತುಕೊಡಬೇಕಿದೆ ಎಂದೂ ಅಭಿಪ್ರಾಯಿಸಿದರು.
ಭಾಷಾ ಕಲಿಕೆ ಒಂದು ಕೌಶಲ್ಯ. ಭಾಷೆಯು
(ಮೊದಲ ಪುಟದಿಂದ) ಬಾಂಧವ್ಯವನ್ನು ಹೆಚ್ಚಿಸುತ್ತದೆ. ಕನ್ನಡ ಎಂದರೆ ಕೇವಲ ಒಂದು ಭಾಷೆಯಲ್ಲ, ಅದೊಂದು ಬಾಂಧವ್ಯ-ಜೀವನ ವಿಧಾನ. ಕನ್ನಡವು ಸಂಸ್ಕøತದಿಂದ ಪ್ರಭಾವಿಸಲ್ಪಟ್ಟು ಕ್ರಿ.ಶ. 450ಕ್ಕೂ ಮೊದಲೇ ಜನಪದರ ಬಾಯಲ್ಲಿ ಹರಿದಾಡುತ್ತಿತ್ತು ಎಂದ ಸಮ್ಮೇಳನಾಧ್ಯಕ್ಷರು, ಒಂದು ಭಾಷೆ ಎಷ್ಟರಮಟ್ಟಿಗೆ ಸಂವಹನ ಪೂರಕ ಎಂಬದರ ಮೇಲೆ ಅದರ ತಳಹದಿ ನಿರ್ಮಾಣವಾಗುತ್ತದೆ. ಆ ದೃಷ್ಟಿಯಲ್ಲಿ ಕನ್ನಡಕ್ಕೆ ತನ್ನದೇ ಆದ ಆಂತರಿಕ ಗಟ್ಟಿತನ ಇರುವದರಿಂದಲೇ ಇದು ಶಾಸ್ತ್ರೀಯ ಭಾಷೆ ಎನಿಸಿದೆ. ಅತ್ಯಂತ ಸುಂದರ ಲಿಪಿಯೂ ಕನ್ನಡಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2 ಸಾವಿರ ವರ್ಷಗಳಿಗೂ ಹಿಂದೆಯೇ ಕಾವೇರಿಯ ಮಡಿಲಲ್ಲಿ ಕನ್ನಡ ಇತ್ತು ಎಂಬದಕ್ಕೆ ನಿದರ್ಶನಗಳಿವೆ. ಕೊಡವ ಭಾಷೆಯೂ ಸಹ ಕನ್ನಡ ಲಿಪಿಯನ್ನೇ ಆಶ್ರಯಿಸಿರುವದರಿಂದ ಕೊಡವ ಭಾಷೆಯ ಬೆಳವಣಿಗೆ ಎಂದರೆ ಅದು ಕನ್ನಡ ಲಿಪಿಯ ಬೆಳವಣಿಗೆಯೂ ಹೌದು ಎಂದರು.
ಕೊಡಗಿನ ಪರಿಸರದ ಮೇಲೆ ಒತ್ತಡ ಹೆಚ್ಚುತ್ತಿದೆ. ಹೈಟೆನ್‍ಷನ್ ವಿದ್ಯುತ್ ಮಾರ್ಗ, ಸಂಪರ್ಕ ಮಾರ್ಗ, ರೆಸಾರ್ಟ್ ಸಂಸ್ಕøತಿಗಳಿಂದಾಗಿ ಮರಕಾಡು ಖಾಲಿಯಾಗುತ್ತಿವೆ. ಅರಣ್ಯ ನಾಶದಿಂದ ವನ್ಯಪ್ರಾಣಿ ನಾಡಿಗೆ ಬರುತ್ತಿವೆ. ಕೃಷಿ ಪರಂಪರೆ ನಾಶವಾಗುತ್ತಿದೆ. ಭತ್ತದ ಗದ್ದೆಗಳು ಹಾಳು ಬೀಳುತ್ತಿವೆ. ಜಲಮೂಲಗಳು ಬತ್ತುತ್ತಿವೆ. ಪ್ರಾಕೃತಿಕ ವಿಕೋಪಗಳೂ ನಡೆಯುತ್ತಿದ್ದು, ಪರಿಸರದ ಕೊಂಡಿಗಳನ್ನು ಉಳಿಸಿಕೊಳ್ಳದಿದ್ದರೆ ಅನಾಹುತಕ್ಕೆ ದಾರಿಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊಡಗಿನ ಮೂಲ ಸಂಸ್ಕøತಿಯ ಪೋಷಕ ಜನಾಂಗದವರು ತಮ್ಮ ಮೂಲ ನೆಲವನ್ನು ಪರರಾಜ್ಯದವರಿಗೆ ಮಾರುತ್ತಿರುವದು ದುರಂತ ಎಂದ ನಾಗೇಶ್ ಕಾಲೂರು, ಕೊಡಗಿನ ಅರಣ್ಯ ಪ್ರದೇಶದಲ್ಲಿ ಪ್ರತಿ ವರ್ಷ ಕಂಡುಬರುವ ಕೃತಕ ಕಾಡ್ಗಿಚ್ಚಿಗೆ ತಡೆಯೊಡ್ಡಬೇಕಿದೆ ಎಂದು ಆಗ್ರಹಿಸಿದರು. ಕೊಡಗಿನ ತೋಟಗಳಲ್ಲಿ ಕೆಲಸಗಾರರ ಹೆಸರಲ್ಲಿ ದುಷ್ಕರ್ಮಿಗಳು ಬೀಡುಬಿಟ್ಟಿರುವ ವರದಿಗಳು ಜಿಲ್ಲೆಯ ಭವಿಷ್ಯದ ದೃಷ್ಟಿಯಲ್ಲಿ ಆತಂಕಕಾರಿ ಎಂದರು.
ಜಿಲ್ಲೆಯಲ್ಲಿ ಇನ್ನೂ ಬೆಳಕಿಗೆ ಬಾರದಿರುವ ಐತಿಹ್ಯಗಳು, ಆಚರಣೆಗಳ ಬಗ್ಗೆ ಸಂಶೋಧನೆಗೆ ಅವಕಾಶವಿದೆ. ಪ್ರಾಕೃತಿಕ ವಿಕೋಪಗಳಿಗೆ ಮಾನವ ನಿರ್ಮಿತ ಕಾರಣಗಳ ಬಗ್ಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಯುವ ಜನಾಂಗ ಮಾದಕ ವಸ್ತುಗಳಿಗೆ ದಾಸರಾಗದಂತೆ ಎಚ್ಚರ ವಹಿಸಬೇಕಿದೆ ಎಂದು ಸಮ್ಮೇಳನಾಧ್ಯಕ್ಷರಾದ ನಾಗೇಶ್ ಕಾಲೂರು ಅವರು ಅಭಿಪ್ರಾಯಿಸಿದರು.