ಮಡಿಕೇರಿ, ಜ. 31: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ರಾಷ್ಟ್ರಾದ್ಯಂತ ಹಲವು ಪಬ್ಲಿಕ್ ಸೆಕ್ಟರ್ ಬ್ಯಾಂಕ್‍ಗಳು ಮುಚ್ಚಲ್ಪಟ್ಟಿದ್ದವು. ಜಿಲ್ಲೆಯಲ್ಲೂ ಕೂಡ ವಿವಿಧೆಡೆ ಬ್ಯಾಂಕ್‍ಗಳು ಮುಚ್ಚಿದ್ದು ಕಂಡು ಬಂದಿತು. ಬ್ಯಾಂಕ್ ಉದ್ಯೋಗಿಗಳಿಗೆ 2017 ರ ನವೆಂಬರ್ ತಿಂಗಳಿನಿಂದ ವೇತನ ಹೆಚ್ಚುಗೊಳಿಸಿಲ್ಲ. ಮೂಲ ವೇತನದೊಂದಿಗೆ ವಿಶೇಷ ಭತ್ಯೆ ಸೇರಿಸಬೇಕೆಂಬುದರ ಜೊತೆಗೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ.

ಮಡಿಕೇರಿಯ ಎಸ್.ಬಿ.ಐ, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯ, ಕಾರ್ಪೋರೇಷನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಮುಚ್ಚಲ್ಪಟ್ಟಿದ್ದವು. ಕೆಲವೆಡೆ ಎ.ಟಿ.ಎಂ. ಕೂಡ ಮುಚ್ಚಲ್ಪಟ್ಟಿತ್ತು. ಸಾರ್ವಜನಿಕರಿಗೆ ಸಮಸ್ಯೆ ಉಂಟಾಯಿತು.

ಕೂಡಿಗೆ ವ್ಯಾಪ್ತಿಯ ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ , ಸಿದ್ದಾಪುರದ ಕೆನರಾ ಬ್ಯಾಂಕ್ ಹಾಗೂ ವಿಜಯ ಬ್ಯಾಂಕ್,

ನಾಪೆÇೀಕ್ಲು ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್, ಇಂಡಿಯನ್ ಓವರ್‍ಸೀಸ್ ಬ್ಯಾಂಕ್, ಕಕ್ಕಬ್ಬೆಯ ಕಾಪೆರ್Çೀರೇಷನ್ ಬ್ಯಾಂಕ್, ಬಲ್ಲಮಾವಟಿಯ ಕೆನರಾ ಬ್ಯಾಂಕ್ ಶಾಖೆಗಳು ಮುಚ್ಚಲ್ಪಟ್ಟಿದ್ದವು. ಕುಶಾಲನಗರದಲ್ಲೂ ರಾಷ್ಟ್ರೀಕೃತ ಬ್ಯಾಂಕ್‍ಗಳ ವಹಿವಾಟು ಸ್ಥಗಿತಗೊಂಡಿತ್ತು.

ತಾ.1 ರಂದು (ಇಂದು) ಕೂಡ ಬ್ಯಾಂಕ್‍ಗಳು ಮುಚ್ಚಲ್ಪಟ್ಟಿರುತ್ತವೆ. ತಾ.2ರಂದು ಭಾನುವಾರವಾದ ಕಾರಣ ತಾ.3 ಕ್ಕೆ ಮುಷ್ಕರ ಅಂತ್ಯ ಕಾಣಲಿದೆ. 3 ದಿನಗಳ ಕಾಲ ನಿರಂತರವಾಗಿ ಬ್ಯಾಂಕ್‍ಗಳು ಮುಚ್ಚಿರುವುದರಿಂದ ಎ.ಟಿ.ಯಂ.ಗಳಲ್ಲಿ ಹಣದ ಕೊರತೆಯೊಂದಿಗೆ ಗ್ರಾಹಕರಿಗೆ ಬಹಳಷ್ಟು ತೊಂದರೆಯಾಗುವ ಸಾಧ್ಯತೆಯಿದೆ.