ಕುಶಾಲನಗರ, ಜ. 31: ಮಕ್ಕಳ ಮನಸಿನಲ್ಲಿ ಸಂಸ್ಕøತಿ, ಆಚಾರ, ವಿಚಾರಗಳನ್ನು ಬಿತ್ತುವ ಮೂಲಕ ಅವರನ್ನು ಸುಸಂಸ್ಕøತರನ್ನಾಗಿಸಬೇಕಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಕುಶಾಲನಗರದ ತಮಿಳ್ ಸಂಘಂ ಆಶ್ರಯದಲ್ಲಿ ಎಪಿಸಿಎಂಎಸ್ ಆವರಣದಲ್ಲಿ ಹಮ್ಮಿಕೊಂಡಿದ್ದ 4ನೇ ವರ್ಷದ ಪೊಂಗಲ್ ಸಂಕ್ರಾಂತಿ ಹಾಗೂ ತಿರುವಳ್ಳುವರ್ ಪತ್ತಿನ ಸಹಕಾರ ಸಂಘಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಯುವ ಸಮೂಹ ದಾರಿ ತಪ್ಪುವುದನ್ನು ತಡೆಯಬೇಕಿದೆ. ಪೋಷಕರು ತಮ್ಮ ಮಕ್ಕಳಿಗಾಗಿ ಆಸ್ತಿ ಸಂಪಾದಿಸದೆ ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸುವಂತಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಉದ್ಯಮಿ ಎಸ್‍ಎಲ್ ಎನ್ ಸಾತಪ್ಪನ್ ಮಾತನಾಡಿ, ಸಂಕ್ರಾಂತಿ ಹಬ್ಬ ಆಚರಣೆ ತನ್ನ ನೈಜ ಮಹತ್ವ ಕಳೆದುಕೊಳ್ಳುತ್ತಿದೆ. ಕೃಷಿ ಪ್ರಧಾನ ಪ್ರದೇಶಗಳು ಕ್ರಮೇಣವಾಗಿ ಕ್ಷೀಣಿಸುತ್ತಿದೆ. ಹೆಚ್ಚಾಗಿ ಕೃಷಿ ಧಾನ್ಯಗಳನ್ನು ಉತ್ಪಾದಿಸುವಂತಾಗ ಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಮಿಳ್ ಸಂಘದ ಅಧ್ಯಕ್ಷ ಎಂ. ಪಳನಿಸ್ವಾಮಿ ಮಾತನಾಡಿ, 4ನೇ ವರ್ಷದ ಪೊಂಗಲ್ ಕಾರ್ಯಕ್ರಮದ ವಿಶೇಷವಾಗಿ ತಿರುವಳ್ಳುವರ್ ಪತ್ತಿನ ಸಹಕಾರ ಸಂಘಕ್ಕೆ ಚಾಲನೆ ನೀಡಲಾಗಿದೆ. ಸಂಕ್ರಾಂತಿ ಹಬ್ಬದ ಅಂಗವಾಗಿ ಕುಶಾಲನಗರ ಕೋಣಮಾರಿಯಮ್ಮ ದೇವಾಲಯ ಆವರಣದಲ್ಲಿ ಸಾಂಪ್ರದಾಯಿಕವಾಗಿ ಪೊಂಗಲ್ ತಯಾರಿಸುವ ಕಾರ್ಯಕ್ರಮ ನಡೆಯಿತು. ಸಮುದಾಯ ಬಾಂಧವರಿಗೆ ರಂಗೋಲಿ ಸ್ಪರ್ಧೆ, ಹಗ್ಗಜಗ್ಗಾಟ, ಮಡಿಕೆ ಒಡೆಯುವುದು ಮತ್ತಿತರ ಸ್ಪರ್ಧಾ ಕಾರ್ಯಕ್ರಮಗಳು ಜರುಗಿದವು. ತಮಿಳು ಚಿತ್ರರಂಗದ ಹಾಸ್ಯನಟ ಗೌಂಡಾಮಣಿ ಅವರಿಂದ ಹಾಸ್ಯ ಚಟಾಕಿ ಕಾರ್ಯಕ್ರಮ ಮೂಡಿಬಂತು. ಮಕ್ಕಳಿಂದ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮ ನೆರೆದಿದ್ದವರ ಮನಸೂರೆಗೊಂಡಿತು.
ಮೈಸೂರು ತಮಿಳ್ ಸಂಘದ ಉಪಾಧ್ಯಕ್ಷ ಕರುಣಾನಿಧಿ, ಕಾರ್ಯದರ್ಶಿ ರಘುಪತಿ, ಉದ್ಯಮಿ ಲಕ್ಷ್ಮಣ, ತಿರುವಳ್ಳುವರ್ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್.ಗಣೇಶ್, ಕುಶಾಲನಗರ ತಮಿಳ್ ಸಂಘದ ಉಪಾಧ್ಯಕ್ಷ ಸಿ. ದೊರೆಸ್ವಾಮಿ, ಪ್ರಧಾನ ಕಾರ್ಯದರ್ಶಿ ಪಿ. ಶಿವಕುಮಾರ್, ಸಹ ಕಾರ್ಯದರ್ಶಿ ಗಳಾದ ಕೆ.ಆರ್. ಮುರುಗೇಶ್, ಕೆ. ಗುಜೇಂದ್ರ, ಖಜಾಂಚಿ ಎ.ಎನ್. ಪ್ರತಾಪ್, ಸಂಘಟನಾ ಕಾರ್ಯದರ್ಶಿ ಡಿ. ಸಂತೋಷ್, ಸಂಘದ ನಿರ್ದೇಶಕರು, ಪತ್ತಿನ ಸಹಕಾರ ಸಂಘ ಪದಾಧಿಕಾರಿಗಳು, ಸಮುದಾಯ ಬಾಂಧವರು ಪಾಲ್ಗೊಂಡಿದ್ದರು.