ಕೂಡಿಗೆ, ಜ. 31: ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸುವ ವಿಷಯವಾಗಿ ಕೂಡುಮಂಗಳೂರು ಹಿತರಕ್ಷಣಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಕೆ. ವರದ, ಉಪಾಧ್ಯಕ್ಷರುಗಳಾಗಿ ವಾಂಚೀರ ಮನುನಂಜುಂಡ, ಫಿಲೋಮಿನಾ, ಪುಟ್ಟರಾಜು ಅಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿ ವಕೀಲ ಭರತ್ ಮಾಚಯ್ಯ, ಕಾರ್ಯದರ್ಶಿಯಾಗಿ ಕುಮಾರಸ್ವಾಮಿ ಮತ್ತು ಖಜಾಂಚಿಯಾಗಿ ಚಂದ್ರಶೇಖರ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದÀರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.