ಸೋಮವಾರಪೇಟೆ, ಜ. 31: ಬಾಂಗ್ಲಾ ಹಿಂದೂಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನೊಳಗೊಂಡ ‘ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು’ ಎಂಬ ಕಥಾ ಪುಸ್ತಕವನ್ನು ಶಾಸಕರ ಕಚೇರಿ ಅವರಣದಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರು ಅನಾವರಣಗೊಳಿಸಿದರು.

ಈ ಸಂದರ್ಭ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪಕ್ಷದ ಪ್ರಮುಖರುಗಳಾದ ಕಿಬ್ಬೆಟ್ಟ ಮಧು, ಎಸ್. ಆರ್. ಸೋಮೇಶ್, ಬಿ.ಜಿ. ಅಭಿಷೇಕ್, ಶರತ್ ಚಂದ್ರ, ಕೆ.ಬಿ. ಆನಂದ್, ಎನ್.ಜಿ. ಜನಾರ್ಧನ್, ಜೀವನ್, ಜಗನ್ನಾಥ್, ಪಿ.ಕೆ. ಚಂದ್ರು, ಭಾನುಪ್ರಕಾಶ್, ನೆಹರು, ಗಿರಿಧರ್, ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.