ಮಡಿಕೇರಿ, ಫೆ. 2: ಭಾರತೀಯ ಸೇನೆಯಲ್ಲಿ ವಿವಿಧ ರೆಜಿಮೆಂಟ್‍ಗಳ ನಡುವೆ ಜರುಗುವ ವಾರ್ಷಿಕ ಹಾಕಿ ಪಂದ್ಯಾಟದ ಡಿವಿಜನಲ್ ವಿಭಾಗದಲ್ಲಿ ಕೂರ್ಗ್ ರೆಜಿಮೆಂಟ್ ತಂಡ ಚಾಂಪಿಯನ್ ಆಗಿದೆ.ಪಂಜಾಬ್‍ನ ಫಿರೋಜ್‍ಪುರದಲ್ಲಿ ನಡೆದ ಪಂದ್ಯದಲ್ಲಿ 37 ಕೂರ್ಗ್ ರೆಜಿಮೆಂಟ್ ತಂಡ ವಿಜಯಶಾಲಿ ಯಾಗಿದ್ದು, ಮುಂದೆ ಇಲವೆನ್ ಕೋರ್‍ನ ಪಂದ್ಯಾಟಗಳಲ್ಲಿ ಭಾಗವಹಿಸಲಿದೆ.37 ಕೂರ್ಗ್ ರೆಜಿಮೆಂಟ್ ಬೆಟಾಲಿಯನ್ ಪ್ರಸ್ತುತ ಭಾರತೀಯ ಸೇನೆಯಲ್ಲಿ ಮತ್ತೆ ಒಂದು ಉತ್ತಮ ರೆಜಿಮೆಂಟ್ ಆಗಿ ಪರಿವರ್ತನೆಯಾಗುತ್ತಿದೆ. ಈ ಹಿಂದೆ ಕೂರ್ಗ್ ರೆಜಿಮೆಂಟ್‍ನಲ್ಲಿ ಕೇವಲ ಕೊಡಗು ಮೂಲದ ಯೋಧರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಸೈನಿಕರಾಗಿ ಸೇರ್ಪಡೆಗೊಳ್ಳುತ್ತಿರುವ ಕೊಡಗಿನವರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೂರ್ಗ್ ರೆಜಿಮೆಂಟ್‍ನಲ್ಲಿ ಕೊಡಗಿನವರೊಂದಿಗೆ ಇತರೆಡೆಯ ಯೋಧರೂ ಸೇರ್ಪಡೆಯಾಗಿದ್ದಾರೆ. ಆದರೂ ಕೆಲವು ಹಿರಿಯ ಸೇನಾಧಿಕಾರಿಗಳು, ನಿವೃತ್ತ ಅಧಿಕಾರಿ ಗಳು ಸೇರಿ ಕೂರ್ಗ್ ರೆಜಿಮೆಂಟ್ ಅನ್ನು ಈ ಹಿಂದಿನಂತೆ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.(ಮೊದಲ ಪುಟದಿಂದ) ಇದರಂತೆ ಸೇನೆಗೆ ಸೇರ್ಪಡೆಯಾಗುತ್ತಿರುವ ವಿವಿಧ ವಿಭಾಗದ ಯೋಧರನ್ನು ಈ ರೆಜಿಮೆಂಟ್‍ಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ.
ಡಿವಿಜನಲ್ ಹಾಕಿಯಲ್ಲಿ ವಿಜೇತರಾದ ಬಳಿಕ ತಂಡದ ಸದಸ್ಯರು ಇತರರು ರೆಜಿಮೆಂಟ್‍ನಲ್ಲಿ ಬಳಸುವ ಒಡಿಕತ್ತಿ ಪೀಚೆಕತ್ತಿಯ ಚಿಹ್ನೆ ಇರುವ ಬಾವುಟ, ಕೊಡವ ವಾದ್ಯದೊಂದಿಗೆ ಪಂಜಾಬ್‍ನ ಫಿರೋಜ್‍ಪುರ ಮೈದಾನದಲ್ಲಿ ಹೆಜ್ಜೆಹಾಕಿ ಸಂಭ್ರಮಿಸಿದ್ದು ವಿಶೇಷವಾಗಿದೆ.