ಸೋಮವಾರಪೇಟೆ, ಫೆ. 4: ಜಿಲ್ಲೆಯ ವಿವಿಧ ಚಾಲನಾ ತರಬೇತಿ ಶಾಲೆಗಳ ಪ್ರಾಯೋಜಕತ್ವದಲ್ಲಿ ಮಡಿಕೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಅಪಘಾತ ರಹಿತವಾಗಿ ಸಾರಿಗೆ ವಾಹನವನ್ನು ಚಾಲನೆ ಮಾಡಿದ 9 ಮಂದಿ ಚಾಲಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಂಜುನಾಥ್ ಎಸ್. ಶಿರಾಲಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ 20 ವರ್ಷ ಗಳಿಗೂ ಅಧಿಕ ಕಾಲ ಅಪಘಾತ ರಹಿತವಾಗಿ ಸಾರಿಗೆ ವಾಹನಗಳನ್ನು ಚಾಲನೆ ಮಾಡಿದ ಬಸ್ ಚಾಲಕರಾದ ವಿ. ರಾಮು, ಎಂ.ಕೆ. ಅಬ್ದುಲ್ಲ, ಮೋಟಾರ್ ಕ್ಯಾಬ್ ಚಾಲಕರಾದ ರಾಮಚಂದ್ರ, ಮೊಹಮ್ಮದ್ ಇಸ್ಮಾಯಿಲ್, ಮ್ಯಾಕ್ಸಿ ಕ್ಯಾಬ್‍ನ ಎಸ್. ನಾಗೇಶ್, ಭಾರಿ ಗೂಡ್ಸ್ ವಾಹನದ ಚಾಲಕರಾದ ಕೆ.ಕೆ. ಈರಪ್ಪ, ವಿಕ್ಟರ್ ಡಿಸೋಜ, ಆಟೋ ಚಾಲಕರಾದ ಎಂ.ಎಂ. ರವಿ, ಸಿ. ವಿರೂಪಾಕ್ಷ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಮೋಟಾರು ವಾಹನ ನಿರೀಕ್ಷಕರಾದ ಶಿವಕುಮಾರ್, ಪ್ರಭಾಕರ್, ಅಧೀಕ್ಷಕರುಗಳಾದ ಸಲೀಮಾ, ಮೋಹನ್‍ಕುಮಾರ್, ಇಲಾಖೆಯ ರೀಟಾ, ಚಾಲನಾ ತರಬೇತಿ ಶಾಲೆಗಳ ಮುಖ್ಯಸ್ಥ ಗಿಲ್ಬರ್ಟ್ ಲೋಬೋ, ಉಸ್ಮಾನ್ ಸೇರಿದಂತೆ ಇತರರು ಹಾಜರಿದ್ದರು.