ಆಲೂರು ಸಿದ್ದಾಪುರ, 3: ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ವತಿಯಿಂದ ಆಲೂರುಸಿದ್ದಾಪುರ ಸಮೀಪದ ಸಂಗಯನಪುರ ಗ್ರಾಮದಲ್ಲಿ ತಾ. 23 ರಂದು 2ನೇ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಯುವ ಹಿನ್ನೆಲೆಯಲ್ಲಿ ಸಮ್ಮೇಳನ ಸಿದ್ದತೆ ಕುರಿತು ಆಲೂರು ಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಸಮ್ಮೇಳನ ಉಪ ಸಮಿತಿ ಪದಾಧಿಕಾರಿಗಳ ಪೂರ್ವಸಭೆ ನಡೆಯಿತು.

ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಅಧ್ಯಕ್ಷತೆ ವಹಿಸಿದ್ದರು. ಅರೆಭಾಷೆ ಹಿರಿಯ ಸಾಹಿತಿ ಅಮ್ಮಜಿರ ಪೊನ್ನಪ್ಪ ಮಾತನಾಡಿ-ಅರೆಭಾಷೆ, ಸಾಹಿತ್ಯ, ಸಂಸ್ಕøತಿ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತದೆ ಎಂದರು. ಅರೆಭಾಷೆಯನ್ನು ಅಭಿವೃದ್ದಿ ಪಡಿಸುವುದರ ಜೊತೆಯಲ್ಲಿ ಅರೆಭಾಷಿಗರ ಸಂಸ್ಕøತಿಗೆ ಉತ್ತೇಜನ ನೀಡುವುದು ಸಮುದಾಯ ಬಾಂಧವರ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ ಮಾತನಾಡಿ-ರಾಜ್ಯದಲ್ಲಿ ಅರೆಭಾಷೆ, ತುಳು ಮುಂತಾದ ಉಪ ಭಾಷೆಗಳಿದ್ದು ಪ್ರತಿಯೊಂದು ಭಾಷೆಯನ್ನು ಇತರ ಉಪ ಭಾಷಿಗರಿಗೆ ಕಲಿಸಿಕೊಡಬೇಕಾಗುತ್ತದೆ ಈ ನಿಟ್ಟಿನಲ್ಲಿ ಅರೆಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ರಾಜ್ಯದ ಕನ್ನಡದ ಉಪ ಭಾಷಿಗರಿಗೆ ಹಾಗೂ ಕನ್ನಡಿಗರಿಗೆ ಪರಿಚಯಿಸಿಕೊಡುವ ಉದ್ದೇಶದಿಂದ ಅರೆಭಾಷೆ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಲಾಗುತ್ತದೆ ಎಂದರು.

ಸಮ್ಮೇಳನದ ಸ್ವಾಗತ, ಆರ್ಥಿಕ, ಆಹಾರ, ಮೆರವಣಿಗೆ, ಪ್ರಚಾರ, ಸಾಂಸ್ಕøತಿಕ ವೇದಿಕೆ ಮುಂತಾದ ಉಪ ಸಮಿತಿ ಪದಾಧಿಕಾರಿಗಳು ಸಮ್ಮೇಳನದ ಸಿದ್ದತೆ ಕುರಿತು ಚರ್ಚಿಸಿದರು. ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್, ಉಪಾಧ್ಯಕ್ಷ ಬಟ್ಟಿರ ಈರಪ್ಪ, ಕಾರ್ಯದರ್ಶಿ ಕುಯ್ಯುಮುಡಿ ಜಯಪ್ರಕಾಶ್, ಹಿರಿಯರಾದ ಕೀಜನ ನಾಣಯ್ಯ ಸಮ್ಮೇಳನದ ಉಪ ಸಮಿತಿ ಪದಾಧಿಕಾರಿಗಳು, ಗೌಡ ಸಮಾಜದ ಪ್ರಮುಖರು ಹಾಜರಿದ್ದರು.