ಮಡಿಕೇರಿ, ಫೆ.4: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅವಂದೂರು ಪಟ್ಟಡ ಕುಟುಂಬಸ್ಥರ ಜೀರ್ಣೋದ್ಧಾರ ಸಂಘ ಮತ್ತು ಅವಂದೂರು ಗ್ರಾಮಸ್ಥರ ಸಹಕಾರದೊಂದಿಗೆ ‘ಅರೆಭಾಷೆ ಸಂಸ್ಕøತಿಲಿ ಕಿಡ್ಡಾಸ ಹಬ್ಬ’ ತಾ. 8 ರಂದು ಅವಂದೂರು ಗ್ರಾಮದ ಪಟ್ಟಡ ದೊಡ್ಡಮನೆ ಆವರಣದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಕಿಡ್ಡಾಸ ಹಬ್ಬವನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕÀ ಕೆ.ಜಿ.ಬೋಪಯ್ಯ ಅವರು ಬೆಳಗ್ಗೆ 9.30ಕ್ಕೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ತಾನೇ ವಹಿಸಲಿದ್ದೇನೆ ಎಂದು ತಿಳಿಸಿದರು.

ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ ಅವರು ಕಲಾವಿದರಿಗೆ ಸಾಂಸ್ಕøತಿಕ ಪರಿಕರ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾ.ಪಂ. ಸದಸ್ಯರುಗಳಾದ ಕೊಡಪಾಲು ಗಪ್ಪು ಗಣಪತಿ, ತುಮ್ತಜ್ಜೀರ ಕುಮುದ, ಮದೆ ಗ್ರಾ.ಪಂ. ಅಧ್ಯಕ್ಷ ಮುದ್ಯನ ಚಂದ್ರಶೇಖರ್, ಸದಸ್ಯರುಗಳಾದ ಕಾಳೇರಮ್ಮನ ಅಶೋಕ ಅಯ್ಯಣ್ಣ, ಸವಿತಾ ಆಚಾರ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್. ಸೋಮಣ್ಣ ಹಾಗೂ ಪಟ್ಟಡ ಕುಟುಂಬದ ಪಟ್ಟೆದಾರ ಪಟ್ಟಡ ಕಾವೇರಪ್ಪ ಪಾಲ್ಗೊಳ್ಳಲಿದ್ದಾರೆ.

ಬೆಳಿಗ್ಗೆ 11 ಗಂಟೆಗೆ ‘ಅರೆಭಾಷೆ ಸಂಸ್ಕøತಿಲಿ ಕಿಡ್ಡಾಸ ಹಬ್ಬದ ಮಹತ್ವ’ ವಿಷಯದ ಕುರಿತು ಮಡಿಕೇರಿ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಪ್ರಕಾಶ್ ಹಾಗೂ ‘ನಮ್ಮ ಊರ್ ನಮ್ಮ ಐನ್‍ಮನೆ’ ವಿಷಯದ ಕುರಿತು ಪಟ್ಟಡ ಉಲ್ಲಾಸ ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬೈತಡ್ಕ ಜಾನಕಿ ಬೆಳ್ಯಪ್ಪ ಮತ್ತು ತಂಡದವರು ಸ್ವಾಗತ ಗೀತೆ ಹಾಡಲಿದ್ದು, ಪಟ್ಟಡ ಹರಿಣಿ ಮತ್ತು ತಂಡ, ದೇವಾಯಿರ ರವಿಕಲ ಮತ್ತು ತಂಡ, ಅಂಚೇರಾ ಕುಶನ್ ಮತ್ತು ತಂಡದಿಂದ ಅರೆಭಾಷೆ ನೃತ್ಯ ಪ್ರದರ್ಶನ, ಕಾಳೇರಮ್ಮನ ಯಶವಂತಿ ಅವರಿಂದ ಅರೆಭಾಷೆ ಜನಪದ ಹಾಡು, ಪಟ್ಟಡ ಮೀನಾಕ್ಷಿ ವೆಂಕಪ್ಪರಿಂದ ಹೆಣ್ಣು ಗಂಡು ವರಿಸುವ ಕಾರ್ಯಕ್ರಮ, ಪಟ್ಟಡ ಹೆವಿತಾ ಹಾಗೂ ತಂಡದಿಂದ ಅರೆಭಾಷೆ ಜನಪದ ನೃತ್ಯ ಮತ್ತು ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿಮೋಹನ್, ಪಟ್ಟಡ ಸುಗುಣ ಕುಮಾರ್, ಕಡ್ಲೇರ ಜಯಲಕ್ಷ್ಮಿ ಅವರಿಂದ ಅರೆಭಾಷೆ ಕವನ ವಾಚನ ನಡೆಯಲಿದೆÉ.

ಬಳಿಕ ಪಟ್ಟಡ ತನ್ಯ ಹಾಗೂ ದೇವಾಯಿರ ಹಿತಾಶ್ರೀ ತಂಡದಿಂದ ಅರೆಭಾಷೆ ನೃತ್ಯ, ಪಟ್ಟಡ ಪ್ರಭಾಕರ್‍ರಿಂದ ಅರೆಭಾಷೆ ಹಾಡು, ಕೊರಿಯನ ಕೆಂಚಪ್ಪ ಮತ್ತು ತಂಡದಿಂದ ಕೋಲಾಟ ಮತ್ತು ಬೆಳ್ಕಾಟ ಕಾರ್ಯಕ್ರಮ, ಪಟ್ಟಡ ಉಲ್ಲಾಸ ಮತ್ತು ಪಟ್ಟಡ ಪೂವಯ್ಯ ತಂಡದಿಂದ ಜೋಗಿ ಕುಣಿತ, ಮಂದೋಡಿ ಭವಾನಿ ಹಾಗೂ ಕಾಳೇರಮ್ಮನ ಶೋಭಾ ಅವರಿಂದ ಸೋಬಾನೆ ಪದ ಕಾರ್ಯಕ್ರಮಗಳು ನಡೆಯಲಿವೆ ಎಂದು ಲಕ್ಷ್ಮೀನಾರಾಯಣ ಕಜೆಗದ್ದೆ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪಟ್ಟಡ ಕುಟುಂಬಸ್ಥರ ಹಿರಿಯರು ಹಾಗೂ ಪಟ್ಟಡ ಕುಟುಂಬಸ್ಥರ ಜೀರ್ಣೋದ್ಧಾರ ಸಂಘದ ಅಧ್ಯಕ್ಷ ಪಟ್ಟಡ ಉಲ್ಲಾಸ, ಕಾರ್ಯದರ್ಶಿ ಪಟ್ಟಡ ಸುಗುಣಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಪಟ್ಟಡ ಪ್ರಭಾಕರ್, ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ ಹಾಗೂ ಮದೆ ಗ್ರಾ.ಪಂ. ಸದಸ್ಯ ಕಾಳೇರಮ್ಮನ ಅಶೋಕ್ ಅಯ್ಯಣ್ಣ ಉಪಸ್ಥಿತರಿದ್ದರು.