ವೀರಾಜಪೇಟೆ, ಫೆ. 4: ಕಳೆದ 2012ರಲ್ಲಿ ವೀರಾಜಪೇಟೆಯಲ್ಲಿ ಖೋಟಾ ನೋಟು ಚಲಾವಣೆ ಪ್ರಕರಣದಲ್ಲಿ ಇಲ್ಲಿನ ನಗರ ಪೊಲೀಸರಿಗೆ ಸಿಕ್ಕಿ ಬಿದ್ದು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದ, ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಹಾಸನದ ನಾಗರಾಜ್, ಶೋಯೆಬ್ ಪಾಶಾ ಹಾಗೂ ಚಿಕ್ಕ ಮಗಳೂರಿನ ಸಾಧಿಕ್ ಪಾಶಾ ಎಂಬ ಮೂವರನ್ನು ನಗರ ಪೊಲೀಸರು ಬಂಧಿಸಿ ಇಂದು ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಮೇರೆ ಮೂವರನ್ನು ಹದಿನೈದು ದಿನಗಳ ತನಕ ನ್ಯಾಯಾಂಗ ಬಂಧನಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.