ವೀರಾಜಪೇಟೆ, ಫೆ.4: ಭಾರತೀಯ ಜೀವವಿಮಾ ನಿಗಮದಲ್ಲಿ ಅಂಶಿಕ ಪಾಲನ್ನು ಸಾರ್ವಜನಿಕ ಷೇರುಗಳ ಮೂಲಕ ಮಾರಾಟ ಮಾಡುವ ಮತ್ತು ಕೇಂದ್ರ ಸರಕಾರದ ಖಾಸಗೀಕರಣ ನಿರ್ಧಾರದ ವಿರುದ್ಧ ವೀರಾಜಪೇಟೆಯ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಎಲ್.ಐ.ಸಿ.ಶಾಖಾ ಕಛೇರಿ ಮುಂದೆ ನೌಕರರು ಕೆಲಸ ಸ್ಥಗಿತಗೊಳಿಸಿ ಒಂದು ಗಂಟೆಯ ಕಾಲ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಎಲ್.ಐ.ಸಿ.ನೌಕರರ ಯೂನಿಯನ್ ಪದಾಧಿಕಾರಿಗಳಾದ ಕಾಳಪ್ಪ, ಸಂತೋಷ್, ಶಾರದ, ದಿನೇಶ್, ಕೃಷ್ಣಭಟ್, ಎಲ್ಸಿ ಮೆನೇÀಜೆಸ್, ಇಂದಿರಾ, ಆರ್.ಬಿ.ನಾಯಕ್ ಹಾಗೂ ಅಭಿವೃದ್ಧಿ ಅಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.