ಗೋಣಿಕೊಪ್ಪ ವರದಿ, ಫೆ. 4: ಕೊಡಗು ಜಿಲ್ಲಾ ಆದಿಜಾಂಭವ ಸಂಘ ಉದ್ಘಾಟನೆ ಹಾಗೂ ಹಲವು ಕಾರ್ಯಕ್ರಮ ತಾ.21 ರಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಆದಿಜಾಂಭವ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಸಿಂಗಿ ತಿಳಿಸಿದ್ದಾರೆ.

ತಾ. 21 ರಿಂದ ತಾ.23 ರವರೆಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಕ್ರಿಕೆಟ್ ಟೂರ್ನಿ, ಸನ್ಮಾನ, ಮೆರವಣಿಗೆ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದಲ್ಲಿ ದಲಿತ ವರ್ಗದ ಪ್ರಮುಖ ನಾಯಕರುಗಳು, ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಶಾಸಕ ಕೆ.ಜಿ. ಬೋಪಯ್ಯ, ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ಆಹ್ವಾನಿಸಲಾಗುವುದು ಎಂದರು.

ತಾ. 21ರಂದು ಸಂಘದ ಉದ್ಘಾಟನೆ ನಡೆಯಲಿದೆ. ಅಂದು ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿ ಕಾರ್ಯಕ್ರಮ ನಡೆಯಲಿದೆ. ಇದರ ಪ್ರಯುಕ್ತ ಪೊನ್ನಂಪೇಟೆ ವ್ಯಾಪ್ತಿಯ 15 ಕಿ.ಮೀ. ಒಳಪಡುವ ಆಟಗಾರರಿಗೆ ಟೆನ್ನಿಸ್‍ಬಾಲ್ ಕ್ರಿಕೆಟ್ ಟೂರ್ನಿ ನಡೆಸಲಾಗುವುದು. ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು ಎಂದರು.

14 ತಂಡಗಳು ಟೂರ್ನಿಯಲ್ಲಿ ಸೆಣೆಸಾಟ ನಡೆಸಲಿವೆ. ತಾ. 10ರಂದು ಗೋಣಿಕೊಪ್ಪ ಸಿಲ್ವರ್‍ಸ್ಕೈ ಸಭಾಂಗಣದಲ್ಲಿ ಆಯ್ಕೆ ನಡೆಯಲಿದೆ. ಆಟಗಾರರು ಹೆಸರು ನೋಂದಾಯಿಸಿಕೊಳ್ಳಬಹುದು. ಆಟಗಾರರನ್ನು ಬಿಡ್ಡಿಂಗ್ ಮೂಲಕ ಖರೀದಿಸಿ ಗುಣಮಟ್ಟದ ಕ್ರಿಕೆಟ್‍ಗೆ ಆದ್ಯತೆ ನೀಡಲಾಗುವುದು. ಪಾರಿತೋಷಕ, ನಗದು ಬಹುಮಾನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 9945265383 ಸಂಪರ್ಕಿಸ ಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಎಚ್.ಎನ್. ರವಿ, ಉಪಾಧ್ಯಕ್ಷ ಸಂತೋಷ್, ಕ್ರೀಡಾ ಸಮಿತಿ ಸಲಹೆಗಾರರಾದ ಅರುಣ್, ಪ್ರವೀಣ್ ಇದ್ದರು.