ಗೋಣಿಕೊಪ್ಪಲು, ಫೆ. 3: ರೈತ ಮಹಿಳೆಗೆ ಸಾಲ ಮಂಜೂರಾತಿಯಲ್ಲಿ ಅನ್ಯಾಯವನ್ನು ಖಂಡಿಸುವ ಮೂಲಕ ಬ್ಯಾಂಕ್ ಮ್ಯಾನೇಜರ್ ಅವರಿಂದ ರೈತ ಮಹಿಳೆಗೆ ಸೇರಬೇಕಾದ ಹಣವನ್ನು ಕೊಡಿಸಿದ ಅಪರೂಪ ಪ್ರಸಂಗ ಗೋಣಿಕೊಪ್ಪ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ನಡೆದಿದೆ. ರೈತರು ಮಹಿಳೆಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದರು.

ಹುದಿಕೇರಿ ಹೋಬಳಿಯ ರೈತ ಮಹಿಳೆ ಕಳೆದ ಮಾರ್ಚ್ ತಿಂಗಳಿನಲ್ಲಿ ಗೃಹ ಸಾಲ ಪಡೆಯಲು ಗೋಣಿಕೊಪ್ಪ ಕರ್ನಾಟಕ ಬ್ಯಾಂಕ್ ಮ್ಯಾನೇಜರ್‍ರೊಂದಿಗೆ ಪತ್ರ ವ್ಯವಹಾರ ನಡೆಸಿದ್ದರು. ಆರಂಭದಲ್ಲಿ 30 ಲಕ್ಷ ಸಾಲಕ್ಕೆ ಮಹಿಳೆ ಬ್ಯಾಂಕಿಗೆ ಬೇಕಾದ ದಾಖಲೆಯನ್ನು ಸಲ್ಲಿಸಿದರು. ತದನಂತರದಲ್ಲಿ ವಿವಿಧ ಬ್ಯಾಂಕ್‍ಗಳಿಂದ ಸಾಲ ಇರುವುದಿಲ್ಲ ಎಂಬ ದೃಡೀಕರಣನ್ನು ಕೂಡ ಇದ್ದ ಸಾಲವನ್ನು ಬಂಗಾರ ಅಡವಿಟ್ಟು ತೀರಿಸಿದ್ದರು. ಅಂತಿಮವಾಗಿ ಸಾಲ ಮಂಜೂರು ಮಾಡಬೇಕಾದ ಮ್ಯಾನೇಜರ್ ಸಮಯಕ್ಕೊಂದು ನೆಪ ಹೇಳುತ್ತಾ ತಿಂಗಳುಗಳೆ ಕಳೆದಿದೆ. ಆದರೆ ಸಾಲ ಮಂಜೂರಾತಿ ಆಗಲೇ ಇಲ್ಲ. ಇದರಿಂದ ನೊಂದ ಮಹಿಳೆ ಆಗುತ್ತಿರುವ ಅನ್ಯಾಯದ ಬಗ್ಗೆ ರೈತ ಸಂಘದ ಜಿಲ್ಲಾ ಅಧÀ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಗಮನಕ್ಕೆ ತರುವ ಮೂಲಕ ನ್ಯಾಯ ಹೇಳಿದ್ದಾರೆ. ಮಹಿಳೆಯ ಅಹವಾಲು ಸ್ವೀಕರಿಸಿದ ಅಧ್ಯಕ್ಷರು ಬ್ಯಾಂಕ್ ಮ್ಯಾನೇಜರ್ ಅವರನ್ನು ಕಚೇರಿಗೆ ಕರೆಸಿ ಕೂಡಲೇ ಸಮಸ್ಯೆ ಬಗೆಹರಿಸಲು ಮನವಿಮಾಡಿದ್ದರು.

ರೈತ ಮುಖಂಡರ ಮಾತಿಗೆ ಮನ್ನಣೆ ನೀಡಿದ ಮ್ಯಾನೇಜರ್ ಬೇಗನೆ ಸಾಲ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿ ತೆರಳಿದ್ದು, ಮೂರು ತಿಂಗಳು ಕಳೆದರೂ ಸಾಲ ಮಾತ್ರ ಮಂಜೂರು ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರು. ಇದರಿಂದ ನೊಂದ ಮಹಿಳೆ ಮತ್ತೆ ರೈತ ಸಂಘದ ಗಮನಕ್ಕೆ ಈ ವಿಷಯವನ್ನು ತಂದಿದ್ದರು. ಮನುಸೋಮಯ್ಯ ಮುಂದಾಳತ್ವದಲ್ಲಿ ಸೋಮವಾರ ಹಲವಾರು ರೈತರು ಬ್ಯಾಂಕ್‍ಗೆ ತೆರಳಿ ಪ್ರತಿಭಟನೆ ನಡೆಸಿದರು.

ಮ್ಯಾನೇಜರ್ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮಡಿಕೇರಿಯ ಸಭೆಯಲ್ಲಿ ಭಾಗವಹಿಸಿದ್ದ ಇಲ್ಲಿನ ಮ್ಯಾನೇಜರ್ ಅವರನ್ನು ಪೆÇಲೀಸ್ ಠಾಣಾಧಿಕಾರಿ ಸುರೇಶ್ ಬೋಪಣ್ಣ ಅವರ ಮೂಲಕ ಕರೆಸಿ ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಹಲವಾರು ರೈತ ಮುಖಂಡರು ಧಿಕ್ಕಾರ ಕೂಗುವ ಮೂಲಕ ತಮ್ಮಲ್ಲಿದ್ದ ಅಸಮಾಧಾನ ಹೊರಹಾಕಿದರು.

ಅಂತಿಮವಾಗಿ ಆಗಿರುವ ಪ್ರಮಾದಕ್ಕೆ ಮ್ಯಾನೇಜರ್ ಕ್ಷಮೆ ಕೋರಿ ಕೂಡಲೇ ಸಾಲ ಮಂಜೂರು ಮಾಡುತ್ತೇನೆ ಎಂದು ಹೇಳಿದರು. ಆದರೆ ಇದಕ್ಕೆ ಮಹಿಳೆ ನಿರಾಕರಣೆ ಮಾಡುವ ಮೂಲಕ ಇಲ್ಲಿ ತನಕ ಆಗಿರುವ ನಷ್ಟ ಪರಿಹಾರ ನೀಡುವಂತೆಯೂ ಬ್ಯಾಂಕಿಗೆ ನೀಡಿರುವ ದಾಖಲೆಗಳನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದರು. ಅಂತಿಮವಾಗಿ ಠಾಣಾಧಿಕಾರಿಯ ಸಮ್ಮುಖದಲ್ಲಿ ಮಹಿಳೆಗೆ ಆದ ನಷ್ಟ ಪರಿಹಾರ ನೀಡುವ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲಾಯಿತು. ರೈತ ಮುಖಂಡರ ಸಮ್ಮುಖದಲ್ಲಿ ಮ್ಯಾನೇಜರ್ 40 ಸಾವಿರ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಹೇಳಿ ಚೆಕ್ ನೀಡಿದರು. ಪ್ರತಿಭಟನೆ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4.30ರವರೆಗೆ ನಡೆಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರ.ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಖಜಾಂಚಿ ಸಬಿತಾ ಪೆÇನ್ನಂಪೇಟೆ ಹೋಬಳಿ ಸಂಚಾಲಕ ಮಲೆನಾಡ ಮಂಜುನಾಥ್, ಹುದಿಕೇರಿ ಹೋಬಳಿ ಸಂಚಾಲಕ ಚೆಂಗುಲಂಡ ಸೂರಚ್, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೆಪಂಡ ಪ್ರವೀಣ್, ಶ್ರೀಮಂಗಲ ಹೋಬಳಿ ಸಂಚಾಲಕ ಕಂಬ ಕಾರ್ಯಪ್ಪ, ರೈತ ಮುಖಂಡರಾದ ಚಂಗುಲಂಡ ತಮ್ಮಯ್ಯ ಕೊಟ್ಟಂಗಡ ರಾಜ ಸುಬ್ಬಯ್ಯ ಬೊಟ್ಟಂಗಡ ಪ್ರತಾಪ್, ತಿಲಕ್, ರವಿ, ಕಿರಿಯಮಾಡ ಮಂದಣ್ಣ, ಈಶ, ಮತ್ರಂಡ ಮನು, ಪ್ಯಾನ್ಸಿ, ಮೀದೇರಿರ ಕವಿತಾ, ಪುಚ್ಚಿಮಾಡ ರಾಯ್, ಬಿರುನಾಣಿಯ ಕರ್ತಮಾಡ ಸುಜು ಪೆÇನ್ನಪ್ಪ, ಕಾಯಪಂಡ ಮಧು, ಅಣ್ಣಳಮಾಡ ಸುರೇಶ್, ತೀತರಮಾಡ ರಾಜ, ಕಿರುಗೂರು, ಅಶೋಕ್, ಅರ್ಜುನ್, ಮುಂತಾದವರು ಹಾಜರಿದ್ದರು.

-ಹೆಚ್.ಕೆ.ಜಗದೀಶ್.