ಮಡಿಕೇರಿ, ಫೆ. 3: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಾವಣೆಯಾದ ವಕ್ಫ್ ಸಂಸ್ಥೆಗಳಲ್ಲಿ ಪೇಶ್ ಇಮಾಮ್ ಅಥವಾ ಮೌಜನ್ ಆಗಿ 10 ವರ್ಷಕ್ಕೂ ಅಧಿಕ ಧಾರ್ಮಿಕ ಸೇವೆ ಸಲ್ಲಿಸಿ ತಮ್ಮ ಉಪಜೀವನ ನಡೆಸಿಕೊಂಡು ಹೋಗಲು ಯಾವುದೇ ರೀತಿಯ ಆದಾಯ ಇಲ್ಲದೆ ಇರುವಂತಹ, 65 ವರ್ಷ ಮೇಲ್ಪಟ್ಟ ಪೇಶ್ ಇಮಾಮ್‍ಗಳಿಗೆ ಸರ್ಕಾರದಿಂದ ಗೌರವ ಧನವಾಗಿ ರೂ. 2 ಸಾವಿರ ಮತ್ತು ಮೌಜನ್ ಅವರಿಗೆ ರೂ. 1500 ನೀಡುವಂತೆ ಆದೇಶಿಸಿದೆ. ಈ ಯೋಜನೆ ಪಡೆಯಲು ಇಚ್ಚಿಸುವ ಪೇಶ್ ಇಮಾಮ್ ಮತ್ತು ಮೌಜನ್ ಅವರು ಜಿಲ್ಲಾ ವಕ್ಫ್ ಕಚೇರಿಯನ್ನು ಸಂಪರ್ಕಿಸುವಂತೆ ಮಂಡಳಿಯ ಅಧ್ಯಕ್ಷ ಎಂ.ಜಿ. ಜಹೀರ್ ತಿಳಿಸಿದ್ದಾರೆ.