ಭಾರತೀಯ ಸೇನೆಯಲ್ಲಿ 30 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿರ್ವತ್ತರಾದ ಸೈನಿಕನನ್ನು ಸನ್ಮಾನಿಸಿ ಗೌರವಿಸಿದ ಭಾವನಾತ್ಮಕ ಕ್ಷಣಗಳಿಗೆ ನಗರದಲ್ಲಿ ನಡೆದ ವಿವಾಹ ಆರತಕ್ಷತೆ ಕಾರ್ಯಕ್ರಮ ಸಾಕ್ಷಿಯಾಯಿತು.
ಕೊಡಗಿನ ಖ್ಯಾತ ಇತಿಹಾಸಕಾರ ದಿ. ಡಿ. ಎನ್. ಕೃಷ್ಣಯ್ಯ ಅವರ ಪುತ್ರಿ ಕುಂಬೂರು ಗ್ರಾಮ ನಿವಾಸಿ ಇಂದಿರಾ ಮತ್ತು ಸತ್ಯನಾರಾಯಣ ದಂಪತಿ ಪುತ್ರ ಕ್ಯಾಪ್ಟನ್ ಜಿ. ಎಸ್. ರಾಜಾರಾಮ್ ಭಾರತೀಯ ಸೇನೆಯ ಸಿಗ್ನಲ್ಸ್ ವಿಭಾಗದಲ್ಲಿ ದೇಶದ ವಿವಿಧೆಡೆ 30 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚಿಗಷ್ಟೇ ರಾಜಾರಾಮ್ ನಿರ್ವತ್ತರಾಗಿ ಸ್ವಗ್ರಾಮಕ್ಕೆ ಹಿಂದಿರುಗಿದರು. ಇದೇ ಸಂದರ್ಭ ಮಡಿಕೇರಿಯ ಓಂಕಾರ ಸದನದಲ್ಲಿ ರಾಜಾರಾಮ್ ಸಹೋದರಿ ಸುಂಟಿಕೊಪ್ಪದ ಅಶ್ವಿನಿ ಮೆಡಿಕಲ್ಸ್ನ ತಾರಾ ಮತ್ತು ಗೋಪಾಲ ಭಟ್ ದಂಪತಿಯ ಪುತ್ರ ನಿಖಿಲ್ ಭಟ್ ಹಾಗೂ ಸೌಮ್ಯಶ್ರೀ ವಿವಾಹ ಆರತಕ್ಷತೆ ಏರ್ಪಾಡಾಗಿತ್ತು. ಆರತಕ್ಷತೆ ಕಾರ್ಯಕ್ರಮದಲ್ಲಿ ನಿವೃತ್ತ ಸೇನಾಧಿಕಾರಿ ರಾಜಾರಾಮ್ ಹಾಗೂ ಸೇನೆಗೆ ಮಗನನ್ನು ಸೇರ್ಪಡೆಗೊಳಿಸಿದ್ದ ಇಂದಿರಾ ಸತ್ಯನಾರಾಯಣ, ಪತ್ನಿ ಜಿ. ಆರ್. ಸವಿತಾ ಅವರನ್ನು ರಾಜ್ಯ ಪೆÇಲೀಸ್ ಇಲಾಖೆಯ ನಿವೃತ್ತ ಮಹಾ ನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಳ್, ಸುಂಟಿಕೊಪ್ಪದ ಉದ್ಯಮಿ ಎಸ್. ಜಿ. ಶ್ರೀನಿವಾಸ್ ಬಂಧು, ಬಳಗದವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭ ಮಾತನಾಡಿದ ಕ್ಯಾಪ್ಟನ್ ಜಿ. ಎಸ್. ರಾಜಾರಾಮ್, 3 ದಶಕಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಜೀವನದಲ್ಲಿ ಸಾರ್ಥಕತೆ ಮೂಡಿಸಿದೆ. ಸಾಕಷ್ಟು ಸವಾಲುಗಳನ್ನು ಹಲವಾರು ಹಂತಗಳಲ್ಲಿ ಎದುರಿಸುವ ಭಾರತೀಯ ಯೋಧನಿಗೆ ಸಂಸಾರದ ಸುಖಕ್ಕಿಂತ ದೇಶದ ರಕ್ಷಣೆಯ ಚಿಂತೆಯೇ ಹೆಚ್ಚಾಗಿರುತ್ತದೆ. ಹೀಗಾಗಿ ಸೈನಿಕನು ಕರ್ತವ್ಯ ನಿರ್ವಹಿಸುವ ಸಂದರ್ಭ ಆತನ ಕುಟುಂಬ ವರ್ಗದವರನ್ನು ಕಾಳಜಿಯಿಂದ ಆತನ ಗ್ರಾಮಸ್ಥರು ನೋಡಿಕೊಳ್ಳಬೇಕಾಗಿದೆ. ತನ್ನ ಸ್ವಗ್ರಾಮವಾದ ಕುಂಬೂರು ಗ್ರಾಮಸ್ಥರು ತನ್ನ ಪೆÇೀಷಕರನ್ನು ಅವರ ಹಿರಿ ವಯಸ್ಸಿನಲ್ಲಿ ತನ್ನ ಗೈರುಹಾಜರಿಯಲ್ಲಿ ಅತ್ಯುತ್ತಮವಾಗಿ ನೋಡಿಕೊಂಡದ್ದು ತನಗೆ ಹೆಮ್ಮೆ ತಂದಿದೆ ಎಂದರು. ರಾಜಾರಾಮ್ ಸೇನಾ ಕರ್ತವ್ಯದ ಬಗ್ಗೆ ಪರಿಚಯಿಸಿದ ಈ ಕಾರ್ಯಕ್ರಮ ಸಂಚಾಲಕ ಪತ್ರಕರ್ತ ಅನಿಲ್ ಎಚ್. ಟಿ., ಜಗತ್ತಿನ ಅತ್ಯಂತ ಕಠಿಣ ಹಿಮಶಿಕರದ ಯುದ್ಧಭೂಮಿಯಾದ ಸಿಯಾಚನ್ , ದ್ರಾಸ್, ಕಾರ್ಗಿಲ್, ಟೈಗರ್ಹಿಲ್, ಪುಲ್ವಾಮ ಸೇರಿದಂತೆ ದೇಶದ ಬಹುತೇಕ ಕಡೆ 30 ವರ್ಷಗಳಲ್ಲಿ ರಾಜಾರಾಮ್ ಸೇನಾ ಕರ್ತವ್ಯ ನಿರ್ವಹಿಸಿದ್ದರು. ಅಸ್ಸಾಂನಲ್ಲಿ ಭಯೋತ್ಪಾದಕರ ಧಾಳಿ ಸಂದರ್ಭ ಗಂಭೀರವಾಗಿ ಗಾಯ ಗೊಂಡಿದ್ದರು. ರಾಜಾರಾಮ್ ಸೇನಾ ಸೇವೆಯನ್ನು ಕುಟುಂಬಸ್ಥರೊಂದಿಗೆ ಗೆಳೆಯರೂ ಪರಿಗಣಿಸಿ ಸನ್ಮಾನಿಸುವಂತಾದದ್ದು ಸೇನಾ ಜಿಲ್ಲೆ ಕೊಡಗಿನ ಪಾಲಿಗೆ ಹೆಮ್ಮೆ ತಂದಿದೆ ಎಂದರು. ಈ ಸಂದರ್ಭ ನಿವೃತ್ತ ಮೇಜರ್ ವೆಂಕಟಗಿರಿ, ಏರ್ಫೋರ್ಸ್ನ ನಿವೃತ್ತ ಸಾರ್ಜೆಂಟ್ ಕಿಗ್ಗಾಲು ಗಿರೀಶ್ ಕೂಡಾ ಪಾಲ್ಗೊಂಡಿದ್ದರು.