ಸೋಮವಾರಪೇಟೆ, ಫೆ.4: ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 13 ಮಂದಿ ನಿರ್ದೇಶಕರಾಗಿ ಆಯ್ಕೆ ಯಾಗಿದ್ದಾರೆ. ಪಟ್ಟಣದ ಸಾಕ್ಷಿ ಕನ್ವೆನ್ಷನ್ ಹಾಲ್ನಲ್ಲಿ ಬೆಳಗ್ಗೆ 9 ಗಂಟೆಯಿಂದ 4 ಗಂಟೆವರೆಗೆ ಶಾಂತಿ ಯುತವಾಗಿ ಮತದಾನ ನಡೆಯಿತು. ನಂತರ ನಡೆದ ಮತ ಎಣಿಕೆಯಲ್ಲಿ 13 ಮಂದಿ ಗೆಲುವು ಸಾಧಿಸಿದರು.
ಸಾಲಗಾರರ ಕ್ಷೇತ್ರದ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ 6 ಸ್ಥಾನಕ್ಕೆ 13 ಮಂದಿ ಸ್ಪರ್ಧಿಸಿದ್ದು, ಇವರಲ್ಲಿ ಹೆಚ್.ಕೆ. ಮಾದಪ್ಪ (1,180 ಮತ), ಜಿ.ಬಿ. ಸೋಮಯ್ಯ(1,120 ಮತ), ಕೆ.ಕೆ. ಚಂದ್ರಿಕಾ (1,095 ಮತ), ಬಿ.ಡಿ. ಮಂಜುನಾಥ್ (992 ಮತ), ಪಿ.ಡಿ. ಮೋಹನ್ದಾಸ್(927 ಮತ), ಹೆಚ್.ಕೆ. ಚಂದ್ರಶೇಖರ್(844 ಮತ) ಅವರುಗಳು ಗೆಲುವು ಸಾಧಿಸಿದರು.
ಹಿಂದುಳಿದ ವರ್ಗ ‘ಎ’ ಗೆ ಮೀಸಲಾಗಿದ್ದ 2 ಸ್ಥಾನಕ್ಕೆ ನಾಲ್ವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರಲ್ಲಿ ಬಿ.ಎಂ. ಈಶ್ವರ್ (1,056 ಮತ) ಹಾಗೂ ಬಿ.ಎಂ. ಸುರೇಶ್ (1,007 ಮತ) ಅವರುಗಳು ವಿಜಯ ಸಾಧಿಸಿದರು. ಮಹಿಳಾ ಮೀಸಲು 2 ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ್ದು, ಅವರುಗಳಲ್ಲಿ ರೂಪ ಸತೀಶ್ (1.167 ಮತ) ಹಾಗೂ ಪಿ.ಎ. ಅನಿತ (1,040 ಮತ) ಜಯ ಸಾಧಿಸಿದರು.
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ 1 ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ಅವರುಗಳಲ್ಲಿ ಬಿ. ಶಿವಪ್ಪ (931 ಮತ), ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ 1 ಸ್ಥಾನ್ಕಕೆ ಈರ್ವರು ಸ್ಪರ್ಧಿಸಿದ್ದು, ಅವರಲ್ಲಿ ಎಂ.ವಿ. ದೇವರಾಜು (1,046 ಮತ), ಸಾಲಗಾರರಲ್ಲದ ವಿಭಾಗದ 1 ಸ್ಥಾನಕ್ಕೆ ಈರ್ವರು ಸ್ಪರ್ಧಿಸಿದ್ದು ಅವರಲ್ಲಿ ಬಿ.ಪಿ. ದಿವಾನ್ (147 ಮತ) ಜಯಗಳಿಸಿದರು.
ರಿಟರ್ನಿಂಗ್ ಅಧಿಕಾರಿಗಳಾಗಿ ಜಿಲ್ಲಾ ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಈ. ಮೋಹನ್ ಕಾರ್ಯ ನಿರ್ವ ಹಿಸಿದರು. ಮತದಾನದ ಸಂದರ್ಭ ಸಂಘದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ರವೀಂದ್ರ ಸೇರಿದಂತೆ ತಾಲೂಕಿನ ವಿವಿಧ ಪ್ರಾ.ಕೃ.ಪ.ಸ. ಸಂಘಗಳ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರು. ಪೊಲೀಸ್ ಉಪ ನಿರೀಕ್ಷಕ ಶಿವಶಂಕರ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.