ಮಡಿಕೇರಿ, ಫೆ. 3: ಕೊಡಗು ಗೌಡ ಸಮಾಜ ಬೆಂಗಳೂರಿನ ನೂತನ ಅಧ್ಯಕ್ಷರಾಗಿ ಕೇಕಡ ನಾಣಯ್ಯ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಹಾಸಭೆಯು ಕೊಡಗು ಗೌಡ ಸಮಾಜದ ಉಳ್ಳಾಲ (ಬೆಂಗಳೂರಿನ) ಸಭಾಂಗಣದಲ್ಲಿ ನಡೆಯಿತು. ಕಾರ್ಯದರ್ಶಿ ಚೊಕ್ಕಾಡಿ ಅಪ್ಪಯ್ಯ ಅವರು ಹಿಂದಿನ ಮಹಾಸಭೆಯ ನಡಾವಳಿಯನ್ನು ವಿವರಿಸಿದರು. ಖಜಾಂಚಿ ಗಳಾದ ನಾಟೋಳನ ಸುಜಯ್ 2018-19ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿದರು. ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದರು. ಅಧ್ಯಕ್ಷರಾದ ಅಮೆ ಸೀತಾರಾಮ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಕೇಕಡ ನಾಣಯ್ಯ (ನಿವೃತ್ತ ಡಿವೈಎಸ್ಪಿ) ಅವರನ್ನು ಮುಂದಿನ ಅವಧಿಗೆ ಅಧ್ಯಕ್ಷರಾಗಿ ಆರಿಸಲಾಯಿತು. ಅಮೆ ಸೀತಾರಾಂ ಅವರು ಕೇಕಡ ನಾಣಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭಾಶಯ ಕೋರಿದರು. ಸಭೆಯಲ್ಲಿ ಜಂಟಿ ಕಾರ್ಯದರ್ಶಿ ಗಳಾದ ಕೊಂಬನ ಪ್ರವೀಣ್, ಸಹ ಕಾರ್ಯದರ್ಶಿ ಅಶೋಕ್, ಬಿಟ್ರ ಪ್ರಭಾಕರ್, ಕಾನೂನು ಸಲಹೆಗಾರರಾದ ನಿಡ್ಯಮಲೆ ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷರಾದ ದೇವಜನ ರೂಪದೇವಿಪ್ರಸಾದ್ ಹಾಗೂ ಅಭಿಯಂತರರಾದ ಪೊನ್ನಚ್ಚನ ನವೀನ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚೊಕ್ಕಾಡಿ ಅಪ್ಪಯ್ಯ ವಂದಿಸಿದರು.