ಮಡಿಕೇರಿ, ಫೆ. 3: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು.ಸುಂಟಿಕೊಪ್ಪ: ಭಾರತ ದೇಶ ಸಾರ್ವಭೌಮ ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಕನ್ಯಾ ಹೇಳಿದರು.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಜಿ.ಯಂ.ಪಿ. ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು, ಸಂವಿಧಾನದ ಸಂಸದೀಯ ಪದ್ಧತಿ ಪ್ರಜಾಪ್ರಭುತ್ವದ ಹಲವಾರು ನಿರ್ಧಾರಗಳು ವಿವೇಚನೆಯಿಂದ ಕೂಡಿದೆ. ಎಲ್ಲ ಜಾತಿ, ಪಂಗಡ, ಧರ್ಮ, ಜನಾಂಗದವರನ್ನು ಒಳಗೊಂಡ ಭಾರತದ ಸಂವಿಧಾನವನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಇಡೀ ಪ್ರಪಂಚದಲ್ಲಿ ಅತೀ ವಿಸ್ತಾರವಾದ ಶ್ರೇಷ್ಠ ಸಂವಿಧಾನವಾಗಿ ರೂಪುಗೊಂಡಿದೆ ಎಂದು ಅವರು ಹೇಳಿದರು.ಮೊದಲಿಗೆ ರಾಷ್ಟ್ರ ದ್ವಜಾರೋಹಣವನ್ನು ಗ್ರಾ.ಪಂ. ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ನೆರವೇರಿಸಿದರು. ಸುಂಟಿಕೊಪ್ಪ ಪೊಲೀಸ್ ತಂಡ ಧ್ವಜವಂದನೆ ನೆರವೇರಿಸಿದರೆ, ಸಂತ ಅಂತೋಣಿ ಶಾಲೆಯ ಸ್ಕೌಟ್ಸ್, ಗೈಡ್ಸ್ ತಂಡ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಬ್ಯಾಂಡ್ ತಂಡ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಭಾರತ ಸೇವಾ ದಳ, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪೊಲೀಸ್ ತಂಡಗಳು ಅತಿಥಿಗಳಿಗೆ ಗೌರವ ವಂದನೆ ನೀಡಿದರು.
ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಪಿ.ಆರ್. ಸುಕುಮಾರ್, ಪಿಡಿಓ ವೇಣುಗೋಪಾಲ್, ಸದಸ್ಯರಾದ ಕೆ.ಇ. ಕರೀಂ, ಬಿ.ಎಂ. ಸುರೇಶ್, ನಾಗರತ್ನ, ರಜಾಕ್, ಗಿರಿಜಾ ಉದಯಕುಮಾರ್, ರೆಹನಾ ಫೈರೋಜ್, ರತ್ನ, ಮಾಜಿ ಉಪಾಧ್ಯಕ್ಷ ಬಿ.ಕೆ. ಮೋಹನ್, ರಾ.ಹ.ಆ. ಸಮಿತಿ ಉಪಾಧ್ಯಕ್ಷ ಪಿ.ಎಫ್. ಸಬಾಸ್ಟೀನ್, ಸಹ ಕಾರ್ಯದರ್ಶಿ ಎಂ.ಬಿ. ವಿನ್ಸೆಂಟ್, ಖಜಾಂಚಿ ಬಿ.ಎಂ. ಮುಖೇಶ್, ಪ್ರಧಾನ ಕಾರ್ಯದರ್ಶಿ ಸುನಿಲ್, ಸದಸ್ಯರಾದ ಜಯಂತಿ, ತಾಹೀರಾ. ಸೆಲ್ವಿ, ವರ್ಕ್‍ಶಾಪ್ ಸಂಘದ ಅಧ್ಯಕ್ಷ ವಿ.ಎ. ಸಂತೋಷ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಜಿಯಂಪಿ ಶಾಲಾ ಮುಖ್ಯ ಶಿಕ್ಷಕಿ ಗೀತಾ, ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಸೆಲ್ವರಾಜ್, ಸಂತ ಅಂತೋಣಿ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ವೀರಾ, ದೈಹಿಕ ಶಿಕ್ಷಣ ಶಿಕ್ಷಕ ಪಾಸೂರ ನಂದ ಇತರರು ಇದ್ದರು. ನಂತರ ವಿವಿಧ ಶಾಲೆಯ ಮಕ್ಕಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನ ಜನಮೆಚ್ಚುಗೆ ಪಡೆಯಿತು.ಆಟೋ ಚಾಲಕರ ಸಂಘ: ಇಲ್ಲಿನ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಗಣರಾಜ್ಯೋತ್ಸವವನ್ನು ಆಟೋ ನಿಲ್ದಾಣ ದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಮೋಹನ್ ನೆರವೇರಿಸಿದರು. ನಂತರ ಸಂಘದ ಸದಸ್ಯರಿಗೆ ಜೀವಿತ ಹೈಟೆಕ್ ಡಯಗ್ನೋಸ್ಟಿಕ್ ಲ್ಯಾಬ್ ಸಹಕಾರದೊಂದಿಗೆ ಜೇಸಿ ವೇದಿಕೆಯ ಬಳಿಯಲ್ಲಿ ಏರ್ಪಡಿಸಲಾಗಿದ್ದ ಮಧುಮೇಹ ಹಾಗೂ ಬಿ.ಪಿ. ತಪಾಸಣಾ ಶಿಬಿರಕ್ಕೆ ಮಕ್ಕಳ ತಜ್ಞ ಓ.ವಿ. ಕೃಷ್ಣಾನಂದ ಚಾಲನೆ ನೀಡಿದರು. ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಧಾನಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದರು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಎನ್.ಡಿ. ಕೃಷ್ಣಪ್ಪ, ಸಿ.ಡಿ. ನೆಹರು, ಉಪಾಧ್ಯಕ್ಷ ಫಾರೂಕ್, ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಮಹಮ್ಮದ್ ಬೇಟು, ಲ್ಯಾಬ್‍ನ ಸುನಿಲ್ ಸೇರಿದಂತೆ ಸಂಘದ ಸದಸ್ಯರು ಇದ್ದರು.ಆಟೋ ಚಾಲಕರ ಸಂಘ: ಇಲ್ಲಿನ ಆಟೋ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಗಣರಾಜ್ಯೋತ್ಸವವನ್ನು ಆಟೋ ನಿಲ್ದಾಣ ದಲ್ಲಿ ಆಚರಿಸಲಾಯಿತು. ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಮೋಹನ್ ನೆರವೇರಿಸಿದರು. ನಂತರ ಸಂಘದ ಸದಸ್ಯರಿಗೆ ಜೀವಿತ ಹೈಟೆಕ್ ಡಯಗ್ನೋಸ್ಟಿಕ್ ಲ್ಯಾಬ್ ಸಹಕಾರದೊಂದಿಗೆ ಜೇಸಿ ವೇದಿಕೆಯ ಬಳಿಯಲ್ಲಿ ಏರ್ಪಡಿಸಲಾಗಿದ್ದ ಮಧುಮೇಹ ಹಾಗೂ ಬಿ.ಪಿ. ತಪಾಸಣಾ ಶಿಬಿರಕ್ಕೆ ಮಕ್ಕಳ ತಜ್ಞ ಓ.ವಿ. ಕೃಷ್ಣಾನಂದ ಚಾಲನೆ ನೀಡಿದರು. ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಧಾನಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದರು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಎನ್.ಡಿ. ಕೃಷ್ಣಪ್ಪ, ಸಿ.ಡಿ. ನೆಹರು, ಉಪಾಧ್ಯಕ್ಷ ಫಾರೂಕ್, ಕಾರ್ಯದರ್ಶಿ ಗಂಗಾಧರ್, ಖಜಾಂಚಿ ಮಹಮ್ಮದ್ ಬೇಟು, ಲ್ಯಾಬ್‍ನ ಸುನಿಲ್ ಸೇರಿದಂತೆ ಸಂಘದ ಸದಸ್ಯರು ಇದ್ದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸೋಮವಾರಪೇಟೆ: ಪಟ್ಟಣದಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್ ಧ್ವಜಾರೋಹಣ ನೆರವೇರಿಸಿದರು.
ಸಹಕಾರ ಸಂಘ ಹಾಗೂ ಕಾಫಿ ಮಂಡಳಿ ಇವರುಗಳ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರುಗಳು, ಸಿಬ್ಬಂದಿ ವರ್ಗ, ಕಾಫಿ ಮಂಡಳಿ ಅಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್: ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಪರಿಷತ್ ಅಧ್ಯಕ್ಷ ಎಸ್.ಡಿ. ವಿಜೇತ್ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಪರಿಷತ್ ಗೌರವ ಕಾರ್ಯದರ್ಶಿ ಆದಮ್, ಖಜಾಂಚಿ ಎ.ಪಿ. ವೀರರಾಜು, ನಿರ್ದೇಶಕ ನ.ಲ. ವಿಜಯ ಮತ್ತಿತರರು ಪಾಲ್ಗೊಂಡಿದ್ದರು.ವಳಗುಂದ ಅಂಗನವಾಡಿ: ಸೋಮವಾರಪೇಟೆ ಸಮೀಪದ ವಳಗುಂದ ಗ್ರಾಮದಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಗ್ರಾಮದ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಅನುಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಬಾಲವಿಕಾಸ ಸಮಿತಿಯ ಸದಸ್ಯರುಗಳಾದ ಲೀಲಾ, ಶೈಲಾ ದಿನೇಶ್, ಅಂಗನವಾಡಿ ಕಾರ್ಯಕರ್ತೆ ಪಲಿತ ರಮೇಶ್, ಸಹಾಯಕಿ ಸೋಜಾ, ಯುವಕ ಸಂಘದ ಸದಸ್ಯರುಗಳು ಹಾಗೂ ಪೋಷಕರು ಹಾಜರಿದ್ದರು.ನಾಪೆÇೀಕ್ಲು : ಸಮೀಪದ ನೆಲಜಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷೆ ಹೇಮಾವತಿ, ಶಿಕ್ಷಕಿಯರಾದ ದಿವ್ಯಾ, ಶೋಭಾ, ಎಸ್‍ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.ಕೂಡಿಗೆ ಶಾಲೆ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 71ನೇ ಗಣರಾಜ್ಯೊತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಜೆ. ಮೋಹಿನಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಅನುಸೂಯ ಸೇರಿದಂತೆ ಸಮಿತಿಯ ನಿರ್ದೇಶಕರು, ಶಾಲಾ ಮುಖ್ಯ ಶಿಕ್ಷಕಿ ಸಣ್ಣಕ್ಕ, ಸಹ ಶಿಕ್ಷಕಿ ಕಮಲ, ವಿಜಯಲಕ್ಷ್ಮಿ, ರಂಜಿನಿ, ದೀಪಿಕಾ ಹಾಗೂ ಗ್ರಾಮದ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ, ಭಾಷಣ ಕಾರ್ಯಕ್ರಮ ನಡೆದವು.ಸೋಮವಾರಪೇಟೆ ಶಾಸಕರ ಕಚೇರಿ: ಇಲ್ಲಿನ ಶಾಸಕರ ಕಚೇರಿ ಆವರಣದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಧ್ವಜಾರೋಹಣ ನೆರವೇರಿಸಿ, ಜನತೆಗೆ ಗಣರಾಜ್ಯೋತ್ಸವದ ಶುಭ ಕೋರಿದರು. ಈ ಸಂದರ್ಭ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ಪಕ್ಷದ ಪ್ರಮುಖರುಗಳಾದ ಕಿಬ್ಬೆಟ್ಟ ಮಧು, ಎಸ್.ಆರ್. ಸೋಮೇಶ್, ಬಿ.ಜಿ. ಅಭಿಷೇಕ್, ಶರತ್ ಚಂದ್ರ, ಕೆ.ಬಿ. ಆನಂದ್, ಎನ್.ಜಿ. ಜನಾರ್ಧನ್, ಭಾನುಪ್ರಕಾಶ್, ನೆಹರು, ಗಿರಿಧರ್, ಸುರೇಶ್, ಜೀವನ್, ಜಗನ್ನಾಥ್, ಪಿ.ಕೆ. ಚಂದ್ರು, ಶಾಸಕರ ಆಪ್ತ ಸಹಾಯಕ ಆರ್.ಡಿ. ರವಿ ಉಪಸ್ಥಿತರಿದ್ದರು.ಮಾಜಿ ಸೈನಿಕರ ಸಂಘ: ಇಲ್ಲಿನ ಜೈ ಜವಾನ್ ಮಾಜಿ ಸೈನಿಕರ ಸಂಘದಲ್ಲಿ ಅಧ್ಯಕ್ಷ ಈರಪ್ಪ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಉಪಾಧ್ಯಕ್ಷ ಶಿವಪ್ಪ, ಕಾರ್ಯದರ್ಶಿ ಬಸಪ್ಪ, ಖಜಾಂಚಿ ಸುಕುಮಾರ್, ಲೆಕ್ಕಪರಿಶೋಧಕ ಮಾಚಯ್ಯ ಇದ್ದರು.