*ಗೋಣಿಕೊಪ್ಪಲು, ಫೆ. 4: ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿವೇಕಾನಂದರ ಆದರ್ಶ ಮತ್ತು ತತ್ವ ಚಿಂತನೆಗಳನ್ನು ಅಧ್ಯಯನ ಮಾಡಬೇಕು ಎಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಅಧ್ಯಕ್ಷೆ ಮಾಪಂಗಡ ಯಮುನಾ ಚಂಗಪ್ಪ ತಿಳಿಸಿದರು. ಮಡಿಕೇರಿ ಬಿಜೆಪಿ ಕಚೇರಿ ಯಲ್ಲಿ ನಡೆದ ಜನ್ಮ ಸಪ್ತಾಹ ಕಾರ್ಯಕ್ರಮದ ಮತ್ತು ವಿವೇಕಾ ನಂದರ ಸಂದೇಶಗಳ ಪ್ರಚಾರ ಮೆರವಣಿಗೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ಸಮುದಾಯದಲ್ಲಿ ಸ್ಪೂರ್ತಿ ತುಂಬಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಿರ್ವಹಿಸಲು ವಿವೇಕಾನಂದರ ಜೀವನ ಚರಿತ್ರೆ ಲಭಿಸಲಿದೆ. ವಿವೇಕಾನಂದರ ಜೀವನ ಚರಿತ್ರೆ ಭಾರತದ ಸಂಸ್ಕೃತಿಯ ಒಂದು ಚಿತ್ರೀಕರಣವಾಗಿದೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಬಡವರ ಮತ್ತು ದೇಶದ ಏಳಿಗೆಗಾಗಿ ಶ್ರಮಿಸಿದ ವೀರ ವಿವೇಕಾನಂದರು. ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸದ ಅಂದಿನ ಕಾಲಘಟ್ಟದಲ್ಲಿ ಪ್ರಪಂಚ ದಾದ್ಯಂತ ಧಾರ್ಮಿಕ ಮತ್ತು ದೇಶ ಪ್ರೇಮದ ನಾಯಕನಾಗಿ ಬಿಂಬಿತ ವಾಗಿದ್ದು, ಶ್ರೀ ರಾಮಕೃಷ್ಣರ ಕೃಪೆಯಿಂದ ಎಂಬುವುದು ಸತ್ಯ. ಇಂತಹ ಮಹನೀಯರನ್ನು ಅಧ್ಯಯನ ಮಾಡುವುದರಿಂದ ಮನುಷ್ಯತ್ವವನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಹಿಂದೂ ಧರ್ಮದ ಉದ್ದಾರ ಹಾಗೂ ಪ್ರಚಾರಕ್ಕಾಗಿ ತಮ್ಮನ್ನು ತೊಡಗಿಸಿಕೊಂಡ ವಿವೇಕಾನಂದರು ಪ್ರತಿಯೊಂದು ಧರ್ಮವನ್ನು ಗೌರವಿಸುತ್ತಿದ್ದರು. ಇವರ ಈ ಆದರ್ಶ ಜೀವನ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿ. ದೇಶೋದ್ದಾರಕ್ಕಾಗಿ ಶಿಕ್ಷಣ ಮತ್ತು ಯುವ ಶಕ್ತಿ ಎಂಬ ಸೂತ್ರವನ್ನು ನೀಡಿದ ಅವರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೆಮ್ಮಂಡ ಗೀತಾ ಪವಿತ್ರಾ, ಮಡಿಕೇರಿ ತಾಲೂಕು ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ಮಡಿಕೇರಿ ನಗರಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಸಾಮಾಜಿಕ ಜಾಲತಾಣದ ನಗರಾಧ್ಯಕ್ಷೆ ಕನ್ನಿಕಾ, ಜಿ.ಪಂ. ಮಾಜಿ ಸದಸ್ಯೆ ಬೀನಾ ಬೊಳ್ಳಮ್ಮ ಕಾರ್ಯಕರ್ತೆಯರಾದ ರಾಣಿ, ಗೀತಾ, ಪ್ರೇಮ, ಮಂಜುಳಾ, ಹಿರಿಯರಾದ ಕೊಟ್ಟೇರ ಉಮ್ಮವ್ವ ಚಂಗಪ್ಪ ಉಪಸ್ಥಿತರಿದ್ದರು.