ಪೆÇನ್ನಂಪೇಟೆ, ಫೆ. 4: ವರ್ಷಂಪ್ರತಿ ಜರುಗುವ ವೀರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ಅಂಬಟ್ಟಿ ಮಖಾಂ ಉರೂಸ್ (ನೇರ್ಚೆ) ಕಾರ್ಯಕ್ರಮವು ತಾ. 7ರಿಂದ 11ರವರೆಗೆ ನಡೆಯಲಿದೆ. ಅಂಬಟ್ಟಿ ವಾರ್ಷಿಕ ಉರೂಸ್ ಕಾರ್ಯಕ್ರಮದ ಅಂಗವಾಗಿ ತಾ. 10 ರಂದು ಮಧ್ಯಾಹ್ನ ಸಾರ್ವಜನಿಕ ಮಹಾ ಸಮ್ಮೇಳನ ಮತ್ತು ಸಾಮೂಹಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ಅಂಬಟ್ಟಿ ಮುಸ್ಲಿಂ ಜಮಾಅತ್‍ನ ಆಡಳಿತ ಮಂಡಳಿ ಕಾರ್ಯದರ್ಶಿಗಳಾದ ಎಂ.ಕೆ. ಮುಸ್ತಫಾ ತಿಳಿಸಿದ್ದಾರೆ.

ಈ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಂ.ಕೆ.ಮುಸ್ತಫಾ ಅವರು, 5 ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧ ಅಂಬಟ್ಟಿ ಉರೂಸ್ ಕಾರ್ಯಕ್ರಮವನ್ನು ಅಂಬಟ್ಟಿಯ ದರ್ಗಾ ಶರೀಫ್‍ನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಶೈಖ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ವಷರ್ಂಪ್ರತಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ಸಾಲಿನ ಉರೂಸ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲು ಅಂಬಟ್ಟಿ ಮುಸ್ಲಿಂ ಜಮಾಅತ್ ನಿರ್ಧರಿಸಿದೆ ಎಂದು ಹೇಳಿದರು.

ತಾ.7ರಂದು ಜುಮಾ ನಮಾಜಿನ ಬಳಿಕ ಅಲಂಕೃತ ದರ್ಗಾ ಶರೀಫ್‍ನ ಮಖಾಂ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂಬಟ್ಟಿ ಉರೂಸ್ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಸಾಮೂಹಿಕ ಪ್ರಾರ್ಥನೆಗೆ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ಶಂಷುದ್ದೀನ್ ಝಹ್‍ರಿ ಅವರು ನೇತೃತ್ವ ನೀಡಲಿದ್ದಾರೆ. ನಂತರ ಅಂಬಟ್ಟಿ ಜಮಾಅತ್ತಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಎ.ಎಚ್. ಶಾದುಲಿ ಅವರು ಧ್ವಜಾರೋಹಣ ನೆರವೇರಿಸುವುದರೊಂದಿಗೆ 5 ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರಕಲಿದೆ ಎಂದು ತಿಳಿಸಿದರು.

ಅಂದು ರಾತ್ರಿ 7.30 ಗಂಟೆಗೆ ಅಂಬಟ್ಟಿ ಮಸೀದಿಯ ಅಧೀನದಲ್ಲಿ ಜರುಗುವ ಸ್ವಲಾತ್ ವಾರ್ಷಿಕೋತ್ಸವ ಮತ್ತು ದಿಕ್ರ್ ದುಆ ಮಜ್ಲಿಸ್ ಕಾರ್ಯಕ್ರಮವಿರುತ್ತದೆ. ಈ ಕಾರ್ಯಕ್ರಮದ ನೇತೃತ್ವವನ್ನು ಕಣ್ಣೂರಿನ ಸೈಯದ್ ಸುಹೈಲ್ ತಂಙಳ್ ವಹಿಸಲಿದ್ದಾರೆ. ತಾ. 8ರಂದು ರಾತ್ರಿ ಜರುಗುವ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅಂಬಟ್ಟಿ ಜುಮಾ ಮಸೀದಿಯ ಖತೀಬರಾದ ಶಂಸುದ್ದೀನ್ ಝಹ್‍ರಿ ಅವರು ಧಾರ್ಮಿಕ ಮತ ಪ್ರವಚನ ನೀಡಲಿದ್ದಾರೆ. ತಾ.9ರಂದು ರಾತ್ರಿ ಧಾರ್ಮಿಕ ಉಧ್ಬೋದನೆ ಮತ್ತು ಖತಂ ದುಆ ಮಜಲಿಸ್ ನಡೆಯಲಿದೆ. ಹಿರಿಯ ಧಾರ್ಮಿಕ ವಿದ್ವಾಂಸರಾದ ಕಿಲ್ಲೂರು ಹಮೀದ್ ಫೈಝಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಜರುಗಲಿದೆ ಎಂದು ಅವರು ಮಾಹಿತಿ ನೀಡಿದರು.

ತಾ. 10ರಂದು ಮಧ್ಯಾಹ್ನ 2 ಗಂಟೆಗೆ ಅಂಬಟ್ಟಿ ಉರೂಸ್‍ನ ಪ್ರಮುಖ ಆಕರ್ಷಣೆಯಾಗಿ ಸಾರ್ವಜನಿಕ ಮಹಾ ಸಮ್ಮೇಳನ ಆಯೋಜಿಸಲಾಗಿದೆ. ವೀರಾಜಪೇಟೆಯ ಅನ್ವಾರುಲ್ ಹುದಾ ಕೇಂದ್ರದ ಪ್ರಾಂಶುಪಾಲರಾದ ಅಶ್ರಫ್ ಅಹ್ಸನಿ ಅವರು ಮಹಾಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲೆಯ ನಾಯಿಬ್ ಖಾಜ್ಹಿಗಳಾದ ಎಡಪಾಲದ ಮೊಹಮದ್ ಮುಸ್ಲಿಯಾರ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಧಾರ್ಮಿಕ ಮತ ಪಂಡಿತರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಾರ್ವಜನಿಕ ಮಹಾಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆ.ಆರ್. ನಗರದ ಶಾಸಕರಾದ ಸಾ.ರಾ. ಮಹೇಶ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ.ಎ. ಯಾಕೂಬ್, ಬಿಟ್ಟಂಗಾಲ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಾಬಾ ಬೆಳ್ಯಪ್ಪ, ಸದಸ್ಯರಾದ ಬಿ.ಆರ್. ದಿನೇಶ್, ಅಂಬಟ್ಟಿ ಜಮಾಅತ್ತಿನ ಕಾನೂನು ಸಲಹೆಗಾರರಾದ ಕೊಕ್ಕಂಡ ಅಪ್ಪಣ್ಣ, ವಕೀಲರಾದ ಆಟ್ರಂಗಡ ಲೋಹಿತ್, ರಾಜ್ಯ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜುಲ್ಫಿಕರ್, ಚಿಟ್ಟಡೆ ಜುಮಾ ಮಸೀದಿಯ ಖತೀಬರಾದ ಸೈಯದ್ ಅಹಮದ್ ಖಾಸಿಂ ಸಖಾಫಿ, ಅಂಬಟಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷರಾದ ಎ.ಎಚ್. ಶಾದುಲಿ, ಧಾರ್ಮಿಕ ಪ್ರಮುಖರಾದ ಹಾಕತ್ತೂರು ಅಬೂಬಕ್ಕರ್ ಹಾಜಿ, ಮೊದಲಾದವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮುಸ್ತಫಾ ಅವರು ಹೇಳಿದರು.

ಅಂದು ಮಧ್ಯಾಹ್ನದ ನಂತರ 4 ಗಂಟೆಗೆ ಸಾಂಪ್ರದಾಯಿಕ ಮೌಲಿದ್ ಪಾರಾಯಣ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ. ಅಲ್ಲದೆ ಅಂದು ರಾತ್ರಿ 8 ಗಂಟೆಗೆ ಧಾರ್ಮಿಕ ಮತಪ್ರವಚನ ಕಾರ್ಯಕ್ರಮ ಆಯೋಜಿಸಿದ್ದು, ಕೇರಳದ ಕುಟ್ಯಾಡಿಯ ವಿದ್ವಾಂಸರಾದ ಉಮ್ಮರ್ ಸಖಾಫಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಪ್ರತಿದಿನ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಹಿಳೆಯರಿಗೆ ಪ್ರತ್ಯೇಕ ಸಭಾಂಗಣವನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಮುಸ್ತಫಾ ತಿಳಿಸಿದರು.

ಗೋಷ್ಠಿಯಲ್ಲಿ ಅಂಬಟ್ಟಿ ಮುಸ್ಲಿಂ ಜಮಾಅತ್ತಿನ ಆಡಳಿತ ಮಂಡಳಿ ಅಧ್ಯಕ್ಷರಾದ ಎ.ಹೆಚ್. ಶಾದುಲಿ, ಉಪಾಧ್ಯಕ್ಷರಾದ ಕೆ.ಎ. ಯೂಸುಫ್ ಹಾಜರಿದ್ದರು.