ಗೋಣಿಕೊಪ್ಪ ವರದಿ, ಫೆ. 4 : ರೆಡ್ ರಿಬ್ಬನ್ ಸಂಸ್ಥೆ, ಗೋಣಿಕೊಪ್ಪ ಕಾವೇರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ತಾ. 6 ರಂದು ಕಾವೇರಿ ಕಾಲೇಜು ಸಭಾಂಗಣದಲ್ಲಿ ರಕ್ತದಾನ ಮತ್ತು ಏಡ್ಸ್ ಜಾಗೃತಿ ಶಿಬಿರ ಆಯೋಜಿಸಲಾಗಿದೆ.

ಬೆಳಿಗ್ಗೆ 10 ಗಂಟೆಯಿಂದ ರಕ್ತದಾನ ಆರಂಭವಾಗಲಿದ್ದು, ಸಾರ್ವಜನಿಕರು ಕೂಡ ರಕ್ತದಾನದಲ್ಲಿ ಪಾಲ್ಗೊಳ್ಳ ಬಹುದು. ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಡಾ. ಕೆ. ಪಿ.ಕರುಂಬಯ್ಯ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರ ಆಪ್ತ ಸಮಾಲೋಚಕ ಎನ್. ಸಿ. ಚಂದ್ರಶೇಖರ್, ಪ್ರಾಂಶುಪಾಲ ಕೆ. ಶ್ರೀನಿವಾಸ್, ಕಾರ್ಯಕ್ರಮ ಸಂಚಾಲಕ ಎಸ್. ಪ್ರಸಾದ್‍ರಾವ್ ಉಪಸ್ಥಿತಲಿ ರುವರು ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.