ಸಿದ್ದಾಪುರ, ಫೆ 3: ಕೊಡುಙಲ್ಲೂರ್ ಭಗವತಿ ವೆಳಿಚ್ಚಾಪಾಡ್ ಸಂಘ ಕೊಡಗು ವತಿಯಿಂದ ನಡೆಸುವ 6 ನೇ ವರ್ಷದ ಕೊಡಗು ಜಿಲ್ಲಾ ಸಮಾವೇಶ ಹಾಗೂ ಕುಟುಂಬ ಸಂಗಮ ತಾ. 5 ರಂದು (ನಾಳೆ) ನೆಲ್ಯಹುದಿಕೇರಿಯ ಮುತ್ತಪ್ಪ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿ.ಎನ್. ಕಿಶನ್ ತಿಳಿಸಿದ್ದಾರೆ.
ತಾ. 5 ರಂದು ಬೆಳಗ್ಗೆ 9.30 ಗಂಟೆಗೆ ಕಾವೇರಿ ನದಿಯಿಂದ ತಾಲಪೊಲಿ ಮತ್ತು ಚಂಡೆ ಮೇಳದೊಂದಿಗೆ ಮುತ್ತಪ್ಪ ದೇವಾಲಯದವರೆಗೆ ಶೋಭಯಾತ್ರೆಯು ನಡೆಯಲಿದ್ದು ಮಹಿಳೆಯರು ಸೇರಿದಂತೆ ಭಗವತಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ನಂತರ 10.30 ಗಂಟೆಗೆ ಸಭೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮವನ್ನು ವಿದಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಉದ್ಘಾಟಿಸಲಿದ್ದು; ಮುಖ್ಯ ಭಾಷಣಕಾರರಾಗಿ ಅಯ್ಯಪ್ಪ ದೇವಾಲಯದ ಅರ್ಚಕ ಶಿವನ್ ಕೃಷ್ಣಗಿರಿ ಆಗಮಿಸಲಿದ್ದಾರೆ.
ಅತಿಥಿಗಳಾಗಿ ಎಸ್ಎನ್ಡಿಪಿ ಅಧ್ಯಕ್ಷ ವಿ.ಕೆ. ಲೋಕೇಶ್, ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ, ಕೇರಳದ ವೆಳಿಚ್ಚಪಾಡ್ ಸಂಘದ ರಾಜ್ಯಾಧ್ಯಕ್ಷೆ ಸುಭದ್ರ ವೆಳಿಚ್ಚಪಾಟ್, ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಬುಸ್ವಾಮಿ ಸೇರಿದಂತೆ ಸ್ಥಳೀಯ ಬೆಳೆಗಾರರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಕಿಶನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.