ಮಡಿಕೇರಿ, ಫೆ. 3; ಹಿಂದುತ್ವ, ಜಾತಿ, ಪೌರತ್ವ ಕಾಯ್ದೆಗಳ ಹೆಸರಿನಲ್ಲಿ ಯಾವದೇ ಕಾರಣಕ್ಕೂ ಭಾರತ ದೇಶದ ವಿಭಜನೆಗೆ ಅವಕಾಶ ನೀಡುವದಿಲ್ಲ ಎಂದು ಮುಸ್ಲಿಂ ಮಹಿಳಾ ನಾಯಕಿಯರು ಹೇಳಿದರು. ಯಾವದೇ ಕಾರಣಕ್ಕೂ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಅವಕಾಶ ನೀಡುವದಿಲ್ಲ. ದಾಖಲಾತಿಗಳನ್ನು ಸರಕಾರಕ್ಕೆ ನೀಡುವದಿಲ್ಲ ಎಂಬ ಘೋಷಣೆಗಳು ಮಹಿಳೆಯರಿಂದ ಕೇಳಿ ಬಂದಿತು.ವುಮೆನ್ ಇಂಡಿಯಾ ಮೂಮೆಂಟ್ ಮಹಿಳಾ ಸಂಘಟನೆ ವತಿಯಿಂದ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನಾ ಸಭೆ ಏರ್ಪಡಿಸಲಾಗಿತ್ತು. ಗಾಂಧಿ ಮೈದಾನದ ಗೌರಿ ಲಂಕೇಶ್ ವೇದಿಕೆಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವುಮೆನ್ ಇಂಡಿಯಾ ಮೂಮೆಂಟ್‍ನ ರಾಜ್ಯಾಧ್ಯಕ್ಷೆ ಶಾಹಿದಾ ತಸ್ಲಿಂ ಅವರು, ನಾವು ಹುಟ್ಟಿ ಬೆಳೆದ ನಾಡಿನಲ್ಲಿ ನಮ್ಮ ದಾಖಲೆಯನ್ನು ಏಕೆ ಕೊಡಬೇಕು, ನಮ್ಮ ಪೌರತ್ವ ಕೇಳುವ ಹಕ್ಕು ಯಾರಿಗೂ ಇಲ್ಲ, ಪೌರತ್ವ ನಮ್ಮ ಹಕ್ಕು ಎಂದು ಪ್ರತಿಪಾದಿಸಿದರು. 1971ಕ್ಕಿಂತ ಹಿಂದೆ ಬಂದಿರುವ 19 ಲಕ್ಷ ಮಂದಿಯಲ್ಲಿ (ಮೊದಲ ಪುಟದಿಂದ) ದಾಖಲೆ ಇಲ್ಲವೆಂದಾದರೆ ಅವರುಗಳು ನುಸುಳುಕೋರರಲ್ಲ. ಬದಲಿಗೆ ಕೊಡಗಿನಲ್ಲಿ ಪ್ರವಾಹ ಉಂಟಾದಂತೆ ಅವರುಗಳು ಕೂಡ ಬ್ರಹ್ಮಪುತ್ರ ಪ್ರವಾಹದಲ್ಲಿ ದಾಖಲೆ ಕಳೆದುಕೊಂಡ ವರಾಗಿದ್ದಾರೆ. ಬಡವರು, ಭೂಮಿ ಇಲ್ಲದವರು ದಾಖಲೆ ಎಲ್ಲಿಂದ ಒದಗಿಸುವದೆಂದು ಪ್ರಶ್ನಿಸಿದರು.

ಭಾರತ ಮಾರುತ್ತಾರೆ

ಈಗಿನ ಕೇಂದ್ರ ಸರಕಾರ ದೇಶವನ್ನು ಮಾರಾಟ ಮಾಡುವ ಹಂತಕ್ಕೆ ಬಂದಿದೆ ಎಂದು ಟೀಕಿಸಿದ ಅವರು, ಉತ್ತಮ ಬೆಲೆ ಸಿಕ್ಕಿದರೆ ದೇಶವನ್ನು ಮಾರಾಟ ಮಾಡಿ ಬಿಡುತ್ತಾರೆ. ಆ ನಿಟ್ಟಿನಲ್ಲಿ ಎನ್‍ಆರ್‍ಸಿ, ಸಿಎಎ, ಎನ್‍ಆರ್‍ಪಿ ಕಾಯ್ದೆಗಳನ್ನು ಸೃಷ್ಟಿಸಲಾಗುತ್ತಿದೆ. ಈ ಕಾಯ್ದೆ ಬಗ್ಗೆ ಜನಸಾಮಾನ್ಯರಿಗೆ ತಲಪಿಸುತ್ತೇವೆ, ಕಾಯ್ದೆಯನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಹೇಳಿದರು.

ಫ್ಯಾಸಿಸ್ಟ್‍ಗಳ ಕಪಿಮುಷ್ಟಿ

ಪೌರತ್ವ ಕಾಯ್ದೆ ಜಾರಿಗೊಳಿಸಿ ನಮ್ಮ ಮತದಾನದ ಹಕ್ಕು, ಸೌಲಭ್ಯಗಳನ್ನು, ಧಾರ್ಮಿಕ ಸ್ವಾತಂತ್ರ್ಯವನ್ನು ನಿಷೇಧಿಸುತ್ತಾರೆ. ಟಿಪ್ಪುಸುಲ್ತಾನ್ ಹಾಗೂ ಇಂದಿರಾ ಗಾಂಧಿ ಕೊಟ್ಟಂತಹ ಭೂಮಿಯ ಹಕ್ಕು ಕಸಿದುಕೊಂಡು; ಬ್ರಾಹ್ಮಣ್ಯರ ಫ್ಯಾಸಿಸ್ಟ್‍ಗಳ ಕಪಿಮುಷ್ಟಿ ಯಲ್ಲಿಟ್ಟುಕೊಳ್ಳುತ್ತಾರೆ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಸಿಎಎ ಸಂವಿಧಾನಕ್ಕೆ ಇಟ್ಟ ಉರುಳಾಗಿದ್ದು; ಇದನ್ನು ವಿರೋಧಿಸುವದಾಗಿ ಹೇಳಿದರು.

ಬೆದರಿಕೆಗೆ ಹೆದರುವದಿಲ್ಲ

ಎನ್‍ಆರ್‍ಸಿಯ ಪೂರ್ವಭಾವಿ ಸಿದ್ಧತೆ ಎನ್‍ಪಿಆರ್ ಆಗಿದೆ. ಈ ಸಂಬಂಧ ಮುಂದೊಂದು ದಿನ ದಾಖಲೆ ಕೇಳುತ್ತಾ ಅಧಿಕಾರಿಗಳು ಮನೆಗೆ ಬಂದಾಗ ಅವರಿಗೆ ದಾಖಲೆ ನೀಡದೆ ಮಾತನಾಡಿಸಿ ಕಳುಹಿಸಿ, ನಮ್ಮ ವಿದ್ಯುತ್, ಪಡಿತರ ಹಕ್ಕನ್ನು ಕೊಡುವದಿಲ್ಲ; ಯಾವದೇ ಬೆದರಿಕೆಗಳಿಗೆ ಹೆದರುವದಿಲ್ಲ. ಅಸಹಕಾರ ಚಳವಳಿ ಮೂಲಕ ನಮ್ಮ ಹಕ್ಕನ್ನು ಪಡೆದುಕೊಳ್ಳುತ್ತೇವೆ, ನಾವು ಅಲ್ಪಸಂಖ್ಯಾತರಲ್ಲ, ಕೋಟಿಗಟ್ಟಲೆ ಇದ್ದೇವೆ, ಯಾವದೇ ಅಡೆತಡೆಗಳನ್ನು ಎದುರಿಸಲು ಸಿದ್ದವೆಂದು ಪ್ರತಿಪಾದಿಸಿದರು.

ಮನೆ ಒಡೆಯಲು ಬಿಡುವದಿಲ್ಲ

ನ್ಯಾಷನಲ್ ವುಮೆನ್ ಫ್ರಂಟ್ ಅಧ್ಯಕ್ಷೆ ಝಾಕೀಯಾ ಹುರೇರ ಮಾತನಾಡಿ, ಅಂಬೇಡ್ಕರ್ ಕೊಟ್ಟ ಸಂವಿಧಾನ ಅದು ನಮ್ಮ ಕನ್ನಡಿಯಂತೆ. ಬಿಜೆಪಿ ಸರಕಾರ ಕನ್ನಡಿಯನ್ನು ನುಚ್ಚುನೂರು ಮಾಡುವ ಪ್ರಯತ್ನದಲ್ಲಿದೆ. ಧರ್ಮದ ಹೆಸರಿನಲ್ಲಿ ಬೇರ್ಪಡಿಸುವ ಸಂಚು ನಡೆಯುತ್ತಿದೆ. ನಮ್ಮ ಹಕ್ಕನ್ನು ಕಸಿಯುವ ಪ್ರಯತ್ನ ಆಗುತ್ತಿದೆ. ಭಾರತ ನಮ್ಮ ಮನೆ; ನಮ್ಮ ಮನೆಯನ್ನು ಒಡೆಯಲು ಬಿಡುವದಿಲ್ಲವೆಂದು ಹೇಳಿದರು. ಹಿಂದುತ್ವ, ಜಾತಿ, ಬೇಧದ ಹೆಸರಿನಲ್ಲಿ ಒಡೆಯುವ ಕೆಲಸ ಆಗುತ್ತಿದೆ. ನಾವು ಇಲ್ಲೇ ಹುಟ್ಟಿದವರು; ನಾವು ಯಾವದೇ ಪೌರತ್ವದ ದಾಖಲೆ ತೋರಿಸುವ ಅವಶ್ಯಕತೆ ಇಲ್ಲ. ಪ್ರವಾಹದಲ್ಲಿ ಬಡವರು ದಾಖಲೆ ಕಳೆದುಕೊಂಡಿದ್ದಾರೆ. ಈಗ ಎಲ್ಲಿಂದ ತರುವದೆಂದು ಪ್ರಶ್ನಿಸಿದರು.

ಒಡೆದು ಆಳುವ ನೀತಿ

ಬಿಜೆಪಿ ಸರಕಾರದ ಪೌರತ್ವ ಕಾಯ್ದೆಯಿಂದ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ; ಹಿಂದೂಗಳಿಗೂ ತೊಂದರೆ ಇದೆ. ಹಿಂದೂಗಳನ್ನು ಜಾತಿ ಆಧಾರದಲ್ಲಿ ಒಡೆದು ಹಾಕುವ, ಸಮಾನತೆ ತೆಗೆದುಹಾಕುವ ಪ್ರಯತ್ನ ಮಾಡಲಾಗುತ್ತಿದೆ. ಈ ರೀತಿಯ ಒಡೆದು ಆಳುವ ನೀತಿ ಬೇಡ; ಜಾತಿ, ಧರ್ಮದ ವಿಷಯದಲ್ಲಿ ರಾಜಕೀಯದ ಆಟ ಬೇಡ; ಹಿಂದೂ - ಮುಸ್ಲಿಂ ಎಂದು ಬೇರ್ಪಡಿಸಬೇಡಿ, ಇಂತಹ ಕಾರ್ಯವನ್ನು ಆರ್‍ಎಸ್‍ಎಸ್‍ನವರು ಮಾಡಬೇಡಿ; ನಾವೆಲ್ಲರೂ ಸಂತೋಷದಿಂದಿದ್ದೇವೆ ಎಂದು ಹೇಳಿದರು.

ಪ್ರೀತಿಯೊಂದೇ ಸಂಸ್ಕøತಿ

ಈಗಾಗಲೇ ರಫೆಲ್, ಆರ್‍ಬಿಐ ಹಗರಣದಲ್ಲಿ ದೇಶವನ್ನು ಲೂಟಿ ಮಾಡಿ ಆಗಿದೆ. ಇದೀಗ ನಮ್ಮ ಬ್ಯಾಂಕ್‍ನಲ್ಲಿರುವ; ನಾವು ಕಷ್ಟಪಟ್ಟು ದುಡಿದ ಹಣವನ್ನು ಕಸಿಯುವ ಪ್ರಯತ್ನ ಆಗುತ್ತಿದೆ. ಗೀತೆ, ಕುರಾನ್, ಬೈಬಲ್‍ಗಳಲ್ಲಿ ಶಾಂತಿಯನ್ನು ಪ್ರಸ್ತಾಪಿಸಲಾಗಿದೆ. ಆದರೆ ಯೋಗಿ ಆದಿತ್ಯನಾಥ್ ಮುಸ್ಲಿಮರ ಸಂಸ್ಕøತಿ ಬಗ್ಗೆ ಮಾತನಾಡುತ್ತಾರೆ. ನಮ್ಮ ದೇಶದಲ್ಲಿರುವದು ಒಂದೇ ಸಂಸ್ಕøತಿ. ಅದು ಪ್ರೀತಿ, ವಿಶ್ವಾಸದ ಸಂಸ್ಕøತಿ ಎಂದು ಪ್ರತಿಪಾದಿಸಿದರು. ನಾವು ಯಾವದೇ ಕಾರಣಕ್ಕೂ ದಾಖಲೆಗಳನ್ನು ಕೊಡುವದಿಲ್ಲ; ಪ್ರತಿಭಟನೆಯ ಬೆಂಕಿ ಹಚ್ಚಲು ನಾವು ಬೀದಿಗೆ ಬಂದಿಲ್ಲ. ಎನ್‍ಆರ್‍ಸಿ, ಸಿಎಎ, ಎನ್‍ಪಿಆರ್ ಎಂಬ ಬೆಂಕಿಯನ್ನು ನಂದಿಸಲು ಬಂದಿದ್ದೇವೆ ಎಂದು ಹೇಳಿದರು.

ನಮ್ಮ ಸಂಪಾದನೆಗೆ ದಾಖಲೆ

ಸಾಮಾಜಿಕ ಹೋರಾಟಗಾರ್ತಿ ಗ್ರಾ.ಪಂ. ಉಪಾಧ್ಯಕ್ಷೆ ಕುಸುಮಾ ಪಾಲೇಮಾಡ್ ಮಾತನಾಡಿ, ಪೌರತ್ವ ಕಾಯ್ದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರವಲ್ಲ ಹಿಂದುಳಿದ ವರ್ಗದವರಿಗೂ ತೊಂದರೆ ಇದೆ. ಅನ್ಯಾಯ ಆಗಲಿದೆ. ಎಲ್ಲ ಜನಾಂಗದವರೂ ಇದರ ವಿರುದ್ಧ ಹೋರಾಡಬೇಕೆಂದರು. ನರೇಂದ್ರ ಮೋದಿಯವರು ಮೂಲನಿವಾಸಿಗಳ ಮತ ಪಡೆದು ಪ್ರಧಾನಿಗಳಾಗಿದ್ದಾರೆ. ದೇಶದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುವ ಬದಲಿಗೆ ದೇಶವನ್ನು ಒಡೆಯುವ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ನಮಗೆ ಸ್ವಾತಂತ್ರ್ಯ ಸಿಕ್ಕಿದ್ದರೂ ಸ್ವಾತಂತ್ರ್ಯ ಸಿಕ್ಕಿದೆ ಎಂದು ಹೇಳಲಾಗುತ್ತಿಲ್ಲ ಎಂದು ಹೇಳಿದರು.

ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದಾಗ ಯಾವದೇ ಮುಸ್ಲಿಮರಿಗೆ ಇನ್ನೂ ಕೂಡ ಪರಿಹಾರ ಸಿಕ್ಕಿಲ್ಲ; ಯಾವದೇ ದಾಖಲೆ ಕೊಡಲು ಸಾಧ್ಯವಿಲ್ಲ. ನಮ್ಮ ಆಸ್ತಿ ಸಂಪಾದನೆಗೆ; ಸರಕಾರದ ಸೌಲಭ್ಯ ಪಡೆಯಲು ನಾವು ದಾಖಲೆ ಮಾಡಿಕೊಂಡಿದ್ದೇವೆ. ಅದನ್ನು ಯಾರಿಗೂ ಕೊಡುವದಿಲ್ಲ; ಯಾರೂ ಕೂಡ ದಾಖಲೆ ಕೊಡಬೇಡಿ ಎಂದು ಹೇಳಿದರು.

ತಂಟೆಗೆ ಬಂದರೆ ಬಿಡುವದಿಲ್ಲ

ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ; ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯರು ಮನೆಯಿಂದ ಹೊರಗೆ ಬರುವಂತೆ ಮಾಡಿದ್ದಾರೆ. ನಮಗೂ ಒಂದು ವೇದಿಕೆ ಸಿಕ್ಕಿದೆ. ಓರ್ವ ಮಹಿಳೆಯಿಂದ ಒಂದು ಮನೆ ಕಟ್ಟಲು ಸಾಧ್ಯ. ಪ್ರತಿಯೋರ್ವರು ಇದು ತಮ್ಮ ಜವಾಬ್ದಾರಿ ಎಂದು ತಿಳಿದು ಹೊರಗೆ ಬರಬೇಕೆಂದು ಹೇಳಿದರು. ಮೋದಿ ಹಾಗೂ ಅಮಿತ್ ಶಾ ಅವರುಗಳಿಗೆ ನಾವು ಹೆದರುವದಿಲ್ಲ. ಒಡೆದು ಆಳುವ ನೀತಿ ಬ್ರಿಟಿಷರ ಕಾಲದಲ್ಲಿತ್ತು. ಈಗ ಮತ್ತೆ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು. ಮಾತನಾಡಬಾರದು ಎಂದು ಹೇಳಿದ ಅವರು; ಆರ್‍ಎಸ್‍ಎಸ್‍ನವರು ಬುರ್ಖಾ ಹಾಕಿಕೊಂಡು ಏನೇನು ಮಾಡುತ್ತಿದ್ದಾರೆ ಎಂಬದನ್ನು ಮೊದಲು ನೋಡಿಕೊಳ್ಳಿ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಪುಟಾಣಿ ಮಕ್ಕಳು ಜಿಲ್ಲೆಯಲ್ಲಿ ಪ್ರವಾಹ ಬಂದಾಗ ಜಿಲ್ಲೆಯ ಶಾಸಕರುಗಳಿಗೆ ಪ್ರಧಾನಿ ಮೋದಿ ಏನು ಸಹಕಾರ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು; ಇಂತಹ ಪ್ರಧಾನಿ ನಮಗೆ ಬೇಕಾಗಿಲ್ಲ. ನಾವು ನಮ್ಮಂತೆಯೇ ಇರುವ; ಆದರೆ ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವದಿಲ್ಲ ಎಂದು ಹೇಳಿದರು.

ಬುರ್ಖಾ ನಮ್ಮ ಸಂಸ್ಕøತಿಯ ಹಕ್ಕು. ಇದರ ಬಗ್ಗೆ ಯಾರೂ ಕೂಡ ಪ್ರತಿಭಟನೆಯಲ್ಲಿ ಕಂಡುಬಂದರು. ‘ಸಾರೆ ಜಹಾಂಸೆ ಅಚ್ಚ’ ಸಾಮೂಹಿಕ ಗೀತೆಯೊಂದಿಗೆ ರಾಷ್ಟ್ರಧ್ವಜ ಹಿಡಿದಿದ್ದರು. ವೇದಿಕೆಯಲ್ಲಿ ಗಲ್ರ್ಫ್ ಇಂಡಿಯಾ ಅರ್ಗನೈಸೇಶನ್ ಅಧ್ಯಕ್ಷೆ ಉಮೈರ ಬಾನು, ವಿಮ್ ರಾಜ್ಯ ಕಾರ್ಯದರ್ಶಿ ನಾಗರತ್ನ, ವಿಮ್ ಜಿಲ್ಲಾಧ್ಯಕ್ಷ ನಫೀಸ ಅಡ್ಕಾರ್, ಎನ್‍ಡಬ್ಲ್ಯುಎಫ್ ಕಾರ್ಯದರ್ಶಿ ತಾಹಿರ ಇನ್ನಿತರರು ಇದ್ದರು.