ಕುಶಾಲನಗರ, ಫೆ. 3: ಈ ಸಾಲಿನ ಏಪ್ರಿಲ್ ತಿಂಗಳಿಂದ ಕುಶಾಲನಗರದ ವಾರದ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ನಿತ್ಯಸಂತೆ ಪ್ರಾರಂಭಿಸಲು ಚಿಂತನೆ ಹರಿಸಲಾಗು ವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ಕುಶಾಲನಗರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮತ್ತು ಸೋಮವಾರ ಪೇಟೆ ಉಪಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಲಾದ ಮುಚ್ಚಿದ ಹರಾಜುಕಟ್ಟೆ ಹಾಗೂ ಗೋದಾಮುಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸಕ್ತ ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯಲ್ಲಿ ಮೂಲಭೂತ ವ್ಯವಸ್ಥೆ ಕೊರತೆಯಿದ್ದು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿತ್ಯ ಸಂತೆಯನ್ನು ಆರ್‍ಎಂಸಿ ಆವರಣದಲ್ಲಿ ಪ್ರಾರಂಭಿಸುವ ಮೂಲಕ ರೈತರಿಗೆ ನೇರವಾಗಿ ತಮ್ಮ ಬೆಳೆಯನ್ನು ಮಾರಾಟ ಮಾಡುವ ಅವಕಾಶ ದೊರೆಯುವಂತೆ ಮಾಡಬಹುದು ಕುಶಾಲನಗರ, ಫೆ. 3: ಈ ಸಾಲಿನ ಏಪ್ರಿಲ್ ತಿಂಗಳಿಂದ ಕುಶಾಲನಗರದ ವಾರದ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಿ ನಿತ್ಯಸಂತೆ ಪ್ರಾರಂಭಿಸಲು ಚಿಂತನೆ ಹರಿಸಲಾಗು ವುದು ಎಂದು ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದ್ದಾರೆ. ಕುಶಾಲನಗರ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಮತ್ತು ಸೋಮವಾರ ಪೇಟೆ ಉಪಮಾರುಕಟ್ಟೆ ಪ್ರಾಂಗಣದಲ್ಲಿ ನಿರ್ಮಿಸಲಾದ ಮುಚ್ಚಿದ ಹರಾಜುಕಟ್ಟೆ ಹಾಗೂ ಗೋದಾಮುಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಸಕ್ತ ಕುಶಾಲನಗರ ಮಾರುಕಟ್ಟೆ ರಸ್ತೆಯಲ್ಲಿ ನಡೆಯುತ್ತಿರುವ ಸಂತೆಯಲ್ಲಿ ಮೂಲಭೂತ ವ್ಯವಸ್ಥೆ ಕೊರತೆಯಿದ್ದು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಿತ್ಯ ಸಂತೆಯನ್ನು ಆರ್‍ಎಂಸಿ ಆವರಣದಲ್ಲಿ ಪ್ರಾರಂಭಿಸುವ ಮೂಲಕ ರೈತರಿಗೆ ನೇರವಾಗಿ ತಮ್ಮ ಬೆಳೆಯನ್ನು ಮಾರಾಟ ಮಾಡುವ ಅವಕಾಶ ದೊರೆಯುವಂತೆ ಮಾಡಬಹುದು ಉತ್ತಮ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಎಸ್.ಶ್ರೀಧರ್, ಆವರಣದಲ್ಲಿ 1 ಸಾವಿರ ಮೆಟ್ರಿಕ್ ಟನ್ ಸಾಮಥ್ರ್ಯದ ಗೋಡಾನ್ ನಿರ್ಮಿಸಿದ್ದು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಿದೆ. ಒಟ್ಟು ಸುಮಾರು 4 ಕೋಟಿ ರೂ. ವ್ಯಯಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಎಂ.ಡಿ.ರಮೇಶ್, ಉಪಾಧ್ಯಕ್ಷ ಸಿ.ಪಿ.ವಿಜಯ (ಜತ್ತ), ಸದಸ್ಯರುಗಳಾದ ಎಸ್.ಡಿ.ತಮ್ಮಯ್ಯ, ಜಿ.ಎಂ.ಶಿವಮಣಿ, ಎ.ಜಿ.ವಿಜಯ, ಡಿ.ಎಸ್.ಪೊನ್ನಪ್ಪ, ಎಸ್.ಪಿ.ಸುಮಿತ್ರ, ಸಿ.ಎಸ್.ನಾಗರಾಜ, ಕೆ.ಕೆ.ಗೋಪಾಲ, ಬಿ.ಎ.ಮೊಣ್ಣಪ್ಪ, ಕೆ.ಬಿ.ರಾಮಚಂದ್ರ, ಕೆ.ಸಿ.ಶಶಿಭೀಮಯ್ಯ, ಕುಮಾರ್ ಮತ್ತಿತರರು ಇದ್ದರು.