ವೀರಾಜಪೇಟೆ, ಫೆ. 4: ವಾಹನಗಳ ಇಂಜಿನ್ ಮತ್ತು ಇತರ ಬಿಡಿಭಾಗಗಳನ್ನು ಅದಲು ಬದಲು ಮಾಡಿ ಮಾರಾಟ ಮಾಡುತ್ತಿದ್ದ ಚಾಲಾಕಿ ಕಳ್ಳರು ಪೊಲೀಸರ ಅತಿಥಿಗಳಾಗಿದ್ದಾರೆ.ವೀರಾಜಪೇಟೆ ಆರ್ಜಿ ಗ್ರಾಮದ ಲಘು ವಾಹನದ ಮೆಕ್ಯಾನಿಕ್ ಮಹೇಶ್ ವಿ.ಟಿ., ಪೆರುಂಬಾಡಿ ಗ್ರಾಮದ ಸುಧಾಕರ್ ಕೆ.ಎಂ. ಮತ್ತು ಸೈದಲವಿ ಎಂಬವರು ಅಕ್ರಮವಾಗಿ ವಾಹನದ ಇಂಜಿನ್ ಮತ್ತು ಇತರ ಬಿಡಿ ಭಾಗಗಳನ್ನು ಅದಲು ಬದಲು ಮಾಡಿ ಬಂಧನವಾದ ಆರೋಪಿಗಳು. ಜಿಲ್ಲಾ ಅಪರಾಧ ತನಿಖಾ ದಳದ ಕಚೇರಿಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ನಗರ ಪೊಲೀಸ್ ಸಿಬ್ಬಂದಿಗಳಿಗೆ ಆರ್ಜಿ ಗ್ರಾಮದಲ್ಲಿ ಗ್ಯಾರೇಜು ಹೊಂದಿರುವ ಮಹೇಶ್ ಎಂಬಾತ ವಾಹನಗಳ ಇಂಜಿನ್ ಸಂಖ್ಯೆಯನ್ನು ಅದಲು ಬದಲು ಮಾಡುವಲ್ಲಿ ನಿಸ್ಸೀಮನಾಗಿದ್ದ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.