ಮಡಿಕೇರಿ, ಫೆ. 3: ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಡಿಕೇರಿ ಇವರು ಕಚೇರಿಯಲ್ಲಿರುವ ಹಳೆಯ ಅನುಪಯುಕ್ತ ವಸ್ತುಗಳನ್ನು ಬಹಿರಂಗ ಹರಾಜು ಮಾಡಲಾಗುತ್ತಿದೆ. ತಾ. 17 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಹರಾಜಿನಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಬಿಡ್ಡುದಾರರು ಒಂದು ಸಾವಿರ ರೂ.ಗಳ ಮುಂಗಡ ಠೇವಣಿಯನ್ನು ಇಡಬೇಕು. ಯಶಸ್ವಿ ಬಿಡ್ಡುದಾರರು ಸ್ಥಳದಲ್ಲೇ ಹಣವನ್ನು ಪಾವತಿಸಿ, ವಸ್ತುಗಳನ್ನು ತಮ್ಮ ವೆಚ್ಚದಲ್ಲೇ ತೆಗೆದುಕೊಂಡು ಹೋಗಬೇಕು. ಹರಾಜು ಒಪ್ಪುವ ಇಲ್ಲವೇ ತಿರಸ್ಕರಿಸುವ ಅಧಿಕಾರ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಇದ್ದು, ಹೆಚ್ಚಿನ ಮಾಹಿತಿಗೆ ಇಲಾಖೆಯ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.