ಹೆಬ್ಬಾಲೆ, ಫೆ. 4: ಸ್ಥಳೀಯ ಹೆಬ್ಬಾಲೆ-ಹಳಗೋಟೆ ವೀರ ಮಡಿವಾಳ ಸಂಘದ ವತಿಯಿಂದ ಶ್ರೀ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಹೆಚ್.ಎಸ್. ರಾಮಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಚಿದೇವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು. ಶಿಕ್ಷಕ ಎಚ್.ಕೆ. ಶ್ರೀನಿವಾಸ ಶೆಟ್ಟಿ ಮಾತನಾಡಿ,ಜಾತಿ ಪದ್ಧತಿ ವಿರುದ್ಧ ಅನೇಕ ಮಹನೀಯರು ಹೋರಾಡಿದ ಪರಿಣಾಮ ಸ್ವಲ್ಪ ಪ್ರಮಾಣದ ಯಶಸ್ಸು ಕಾಣಲಾಗಿದೆ ಎಂದರು. ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಬಸವರಾಜು ಮಾತನಾಡಿ, ಮಡಿವಾಳ ಮಾಚಿದೇವರು ಮಡಿವಾಳ ಸಮುದಾಯಕ್ಕೆ ಮಾತ್ರ ಸೀಮಿತರಲ್ಲ. ಎಲ್ಲ ಸಮುದಾಯ ಅವರ ಆದರ್ಶ ಪಾಲನೆ ಮಾಡಬೇಕು ಎಂದರು.

ಹೆಬ್ಬಾಲೆ ಹಳಗೋಟೆ ವೀರಮಡಿವಾಳ ಸಂಘದ ಅಧ್ಯಕ್ಷ ಹೆಚ್.ಸಿ. ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ಹೆಚ್.ಈ. ಮಂಜುನಾಥ್, ಖಜಾಂಚಿ ಹೆಚ್.ಎಸ್. ಶ್ಯಾಮಣ್ಣ, ನಿರ್ದೇಶಕರಾದ ಬಿ.ಬಿ. ಮಹಾದೇವ್, ಬಿ.ಬಿ. ಲೋಕೇಶ್, ಹೆಚ್.ಹೆಚ್.ನಾಗರಾಜು, ಹೆಚ್.ಪಿ. ಮಹಾದೇವ, ಮಲ್ಲೇಶ್, ಶಿವಣ್ಣ, ಶಾಂತರಾಜು, ರಂಗನಾಥಶೆಟ್ಟಿ, ಪುಟ್ಟಶೆಟ್ಟಿ, ಶಂಕರ್, ಸುರೇಶ್, ತಮ್ಮಯ್ಯ, ಅರ್ಚಕ ಚಂದ್ರು ಉಪಸ್ಥಿತರಿದ್ದರು. ಸಂಘದ ವತಿಯಿಂದ ಅನ್ನದಾನ ಏರ್ಪಡಿಸಲಾಗಿತ್ತು.