ಕಿರಣಸೂರ್ಯ ನಿರ್ದೇಶನದ ಪ್ರಥಮ ಕನ್ನಡ ಚಲನಚಿತ್ರ ‘‘ಎಲ್ಲಿಗೆ ಪಯಣ ಯಾವುದೋ ದಾರಿ’’ ಇದೀಗ ವೀರಾಜಪೇಟೆ ಪರಿಸರದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ವೀರಾಜಪೇಟೆಯ ಛಾಯಾಗ್ರಾಹಕ ಗೌತಮ್ ಮನು ಅವರು ಚಿತ್ರೀಕರಣ ಮಾಡುತ್ತಿದ್ದು, ಕಳೆದ 20 ದಿನಗಳಿಂದ ಈ ಚಿತ್ರೀಕರಣ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದು ಇವರ ನಾಲ್ಕನೇಯ ಚಿತ್ರ.

ತಾರಂಗಣದಲ್ಲಿ ಹೊಸ ಮುಖ ಗಳಿಗೆ ಮಣೆ ಹಾಕಿರುವ ನಿರ್ದೇಶ ಕರು ಎಲ್ಲ ಪಾತ್ರಗಳಿಗೆ ಜೀವ ತುಂಬುವಂತಹ ಪಾತ್ರಗಳು ವೀಕ್ಷಕನಿಗೆ ದೊರೆಯಬೇಕು ವೀಕ್ಷಕನ ಮನದಲ್ಲಿ ನೆಲೆ ಊರು ವಂತಿರಬೇಕು ಎಂಬ ಉದ್ದೇಶ ಹೊಂದಿದ್ದಾರೆ. 10 ಕ್ಕಿಂತ ಹೆಚ್ಚು ಚಲನಚಿತ್ರಗಳಿಗೆ ಸಹ ನಿರ್ದೇಶಕ ರಾಗಿ ಕಾರ್ಯನಿರ್ವಹಿಸಿರುವ ನಿರ್ದೇಶಕ ಕಿರಣ್ ಸೂರ್ಯ ಪ್ರಪ್ರಥಮವಾಗಿ ನಿರ್ದೇಶಕರಾಗಿ ಕಾರ್ಯನಿರ್ವಹಿಸು ತ್ತಿದ್ದಾರೆ. ಚಿತ್ರಕಥೆ ಸಂಭಾಷಣೆಯನ್ನು ಕಿರಣ್ ಅವರು ಸ್ವತಃ ಬರೆದಿದ್ದಾರೆ. ಸುದರ್ಶನ ಬ್ಯಾನರ್‍ನಲ್ಲಿ ನಿರ್ಮಾಣವಾಗುತ್ತಿರುವ ಚಲನಚಿತ್ರಕ್ಕೆ ಸ್ಥಿರ ಛಾಯಾಚಿತ್ರಗ್ರಾಹಕ ರಾಗಿ ಶರತ್‍ಜಗನ್‍ದಾಸ್ ಅರ್. ಎಸ್. ಗಣೇಶ್ ನಾರಾಯಣ್ ಅವರ ಸಂಗೀತವಿದ್ದು, ಚಲನಚಿತ್ರವನ್ನು ನಂದೀಶ್ ಗೌಡ ಮತ್ತು ಜಿತಿನ್ ಜಿ. ಪಾಟೇಲ್ ಅವರು ನಿರ್ಮಿಸುತ್ತಿ ದ್ದಾರೆ. ಚಲನಚಿತ್ರದಲ್ಲಿ ಅಭಿಮನ್ಯು ಕಾಶೀನಾಥ್, ಸ್ಪೂರ್ತಿ ಉಡಿಮನೆ, ವಿಜಯಶ್ರೀ ಕಲ್ಬುರ್ಗಿ ,ಶೋಭನ್ ಬಾಬು, ಅಶ್ವಿನಿ ರಾವ್ ಮತ್ತು ಕಿಶೋರ್ ನರಸಿಂಹಯ್ಯ ಅವರುಗಳು ಅಭಿನಯಿಸುತಿದ್ದಾರೆ. ಎಂದು ಹೇಳಿದರು.

ಅಭಿಮನ್ಯು ಕಾಶಿನಾಥ್‍ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಬಾಜಿ. 12 ಎ,ಎಂ ಮಧ್ಯರಾತ್ರಿ, ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿದ ಅಭಿಮನ್ಯು ಕಾಶಿನಾಥ್ ಅವರು ಕನ್ನಡ ಚಲನಚಿತ್ರ ರಂಗದ ಖ್ಯಾತ ನಿದೆರ್Éೀಶಕ ಮತ್ತು ಹಾಸ್ಯ ನಟ ನೀರ್ಮಾಪಕದಿವಂಗತ ಕಾಶೀನಾಥ್ ಅವರ ಪುತ್ರ.

ಮೂಲತಃ ಚಿಕ್ಕಮಗಳೂರಿನವ ರಾದ ಸ್ಫೂರ್ತಿ ಬಾಲ್ಯದಿಂದ ನಾಟಕ, ನಾಟ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಪ್ರಥಮ ಬಾರಿಗೆ ಕ್ಯಾಮರ ಎದುರಿಸು ತ್ತಿದ್ದಾರೆ.

-ಕೆ. ಕೆ. ಎಸ್.,

ವೀರಾಜಪೇಟೆ