ಮಡಿಕೇರಿ, ಫೆ. 8: ಒಂದೊಮ್ಮೆ ಆ ಒಂದೂರು ಎಂದು ಕರೆಸಿ ಕೊಳ್ಳುತ್ತಿದ್ದ.., ಕುಗ್ರಾಮವಾಗಿದ್ದ.., ಇಂದು ಅವಂದೂರು ಎಂದು ಕರೆಸಿಕೊಳ್ಳುತ್ತಿರುವ ಹಚ್ಚ - ಹಸಿರಿನ ಪರಿಸರದ ನಡುವೆ ಕಂಗೊಳಿಸುತ್ತಿರುವ ಗ್ರಾಮದಲ್ಲಿ ಅರೆಭಾಷೆ ಸಂಸ್ಕøತಿಯ ಕಂಪು ಪಸರಿಸಿತು. ಅರೆಭಾಷೆ ಸಂಸ್ಕøತಿಯಲ್ಲಿ ಅಡಕವಾಗಿರುವ ಕಿಡ್ಡಾಸ ಹಬ್ಬದ ಆಚರಣೆಯೊಂದಿಗೆ; ಆಚಾರ - ವಿಚಾರಗಳು, ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿ, ಐನ್ಮನೆಗಳ ಮಹತ್ವ, ಕಿಡ್ಡಾಸದ ಭೋಜನ ಹಾಗೂ ಸಾಂಸ್ಕøತಿಕ ಸಮ್ಮಿಳಿತಗಳೊಂದಿಗೆ ಅವಂದೂರಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ಪ್ರಥಮ ಕಾರ್ಯಕ್ರಮವಾಗಿ ‘ಅರೆಭಾಷೆ ಸಂಸ್ಕøತಿಲಿ ಕಿಡ್ಡಾಸ ಹಬ್ಬ’ ಕಾರ್ಯಕ್ರಮ ಅವಂದೂರಿನ ಪಟ್ಟಡ ದೊಡ್ಡಮನೆ ಆವರಣದಲ್ಲಿ ನಡೆಯಿತು. ಪಟ್ಟಡ ಕುಟುಂಬಸ್ಥರ ಜೀರ್ಣೊದ್ಧಾರ ಸಂಘ ಅವಂದೂರು ಗ್ರಾಮಸ್ಥರ ಸಹಕಾರದೊಂದಿಗೆ ನಡೆದ ಕಾರ್ಯ ಕ್ರಮದಲ್ಲಿ
(ಮೊದಲ ಪುಟದಿಂದ) ಅರೆಭಾಷೆ ಸಂಸ್ಕøತಿ ಅನಾವರಣ ಗೊಂಡಿತು.ಕೀಳರಿಮೆಯಿಂದ ಭಾಷೆ ಅವನತಿಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು, ಇಂಗ್ಲೀಷ್ ಹಾವಳಿಯಿಂದ ಅರೆಭಾಷೆ ಅವನತಿಯತ್ತ ಸಾಗುತ್ತಿದೆ. ನಮ್ಮಲ್ಲಿನ ಕೀಳರಿಮೆಯಿಂದ ಅರೆಭಾಷೆ ಅವನತಿಯಾಗುತ್ತಿದೆ. ಶಿಕ್ಷಣ ದೊರೆತಂತೆ ನಾವು ಬೇರೆ-ಬೇರೆ ಭಾಷೆಗಳನ್ನು ಕಲಿಯುತ್ತಿದ್ದು; ತಾಯಿ ಭಾಷೆಯನ್ನು ಮರೆಯುತ್ತಿರುವದು ದುರಂತ, ಮಾತೃ ಭಾಷೆಯಾದ ಅರೆಭಾಷೆಯ ಬಗ್ಗೆ ನಮಗೆ ಕೀಳರಿಮೆ ಇರಬಾರದು ಎಂದರು. ಇಂದು ಮೂಲಭೂತ ಸೌಕರ್ಯ ಎಲ್ಲರಿಗೂ ದೊರೆಯು ವಂತಾಗಿದೆ ಆದರೆ ಸಾಂಸ್ಕøತಿಕವಾಗಿ ನಾವು ದೂರ ಆಗುತ್ತಿದ್ದೇವೆ. ಅರೆಭಾಷೆ ಸಂಸ್ಕøತಿ, ಆಚಾರ, ವಿಚಾರಗಳಿಂದ ನಾವು ದೂರಾಗ ಬಾರದು ಎಂದು ತಿಳಿಸಿದರು.
ಅರೆಭಾಷೆ ಹಬ್ಬಗಳನ್ನು ಹೇಗೆ ಆಚರಿಸುತ್ತಿದ್ದೆವು ಎಂಬ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಬೇಕು. ಅಕಾಡೆಮಿಯ ವತಿಯಿಂದ ಹಬ್ಬಗಳ ಆಚರಣೆ ಮಾತ್ರವೆ ಮಾಡಿದರೆ ಸಾಲದು. ಅರೆಭಾಷೆ ಸಾಹಿತ್ಯ ಸಂಸ್ಕøತಿಯ ಬಗ್ಗೆ ಕಾರ್ಯಾಗಾರ, ವಿಚಾರಗೋಷ್ಠಿಗಳು, ವಿಚಾರ ಸಂಕಿರಣ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಭಾಷಾ ಬೆಳವಣಿಗೆಯನ್ನು ಮಾಡಬೇಕು ಎಂದರು. ಸರ್ಕಾರ ಕೂಡ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ ಎಂದು ಸೂಚಿಸಿದೆ. ನಾವೂ ಸಹ ನಮ್ಮ ಯೋಚನೆಯನ್ನು ಬದಲಾಯಿಸಿಕೊಳ್ಳಬೇಕು. ಮುಂದಿನ ಪೀಳಿಗೆಗಾಗಿ ಅರೆಭಾಷೆಯನ್ನು ಬೆಳೆಸುವ ಮತ್ತು ಉಳಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಅರೆಭಾಷಾ ರಂಗತರಬೇತಿ ಶಿಬಿರವನ್ನು ಸುಳ್ಯದಲ್ಲಿ ಆಯೋಜಿ¸ Àಲಾಗಿದೆ ಎಂದು ತಿಳಿಸಿದರು.
ರಂಗಭೂಮಿಯಿಂದ ನಾವು ಕಲಿಯುವುದು ಸಾಕಷ್ಟಿದೆ. ಅರೆಭಾಷೆಯಲ್ಲಿ ರಂಗಭೂಮಿ ಪರಂಪರೆ ನಡೆಯಬೇಕು. ನಮ್ಮ ಯುವಸಮೂಹ ಈ ಸಮುದಾಯದ ಆಚಾರ-ವಿಚಾರಗಳನ್ನು ಅರಿತು ಕೊಳ್ಳುವಂತಾಗಬೇಕು ಮುಂದಿನ ಜನಾಂಗಕ್ಕೆ ನಾವು ಕೊಂಡಿಯಾಗಿ ಕೆಲಸ ಮಾಡಬೇಕೆಂದರು. ಅಕಾಡೆಮಿ ಆರಂಭವಾಗಿ 7 ವರ್ಷಗಳಾಗುತ್ತಾ ಬಂದಿದೆ. ಅಕಾಡೆಮಿಗೆ 10 ವರ್ಷ ತುಂಬುವಷ್ಟರಲ್ಲಿ ಅರೆಭಾಷೆ ಜನಾಂಗದವರು ಎಲ್ಲಾ ಕ್ಷೇತ್ರದಲ್ಲೂ ಮುಂದಿರುವಂತಾಗಲಿ.
ನಾವಿಂದು ಡಿಜಿಟಲ್ ಯುಗದಲ್ಲಿದ್ದೇವೆ. ಸಾಮಾಜಿಕ ಮಾಧ್ಯಮಗಳ ಮೂಲಕವೂ ಅರೆಭಾಷಾ ಸಂಸ್ಕøತಿಯನ್ನು ಬೆಳೆಸುವ ಕಾರ್ಯವಾಗಬೇಕು. ಅರೆಭಾಷೆಯ ಬೆಳವಣಿಗೆಗೆ ಪೂರಕವಾಗಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಮೂಡಿಬರಲಿ ಎಂದು ಆಶಿಸಿದರು.
ಸಂಸ್ಕøತಿ ಉಳಿಸಿ ಬೆಳೆಸಿ
ಅರೆಭಾಷೆ ಸಂಸ್ಕøತಿಯ ಬಗ್ಗೆ ತಿಳಿಸಲು ಕಿಡ್ಡಾಸ ಹಬ್ಬ ಆಚರಣೆ ಅತಿ ಅಗತ್ಯ ಎಂದು ಜಿ.ಪಂ ಸದಸ್ಯೆ ಯಾಲದಾಳು ಪದ್ಮಾವತಿ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು; ಅರೆಭಾಷೆ ಸಂಸ್ಕøತಿ ವಿಶಿಷ್ಟತೆಯನ್ನು ಹೊಂದಿದೆ. ಈ ಸಂಸ್ಕೃತಿ ಬಗ್ಗೆ ತಿಳಿಸಲು ಕಿಡ್ಡಾಸ ಹಬ್ಬ ಆಚರಣೆ ಅತಿ ಅಗತ್ಯ ಎಂದರು. ಕಳೆದ ಬಾರಿಯೂ ಗಾಳೀಬೀಡಿನಲ್ಲಿ ಕಾರ್ಯಕ್ರಮ ನೆರವೇರಿತ್ತು ಎಂದು ಸ್ಮರಿಸಿದರು.
ಅರೆಭಾಷೆ ಸಮುದಾಯದ ಆಚರಣೆಗಳನ್ನು ಮುಂದುವರೆಸಿ ಕೊಂಡು ಹೋಗಲಿ. ಮುಂದಿನ ಪೀಳಿಗೆಗೆ ಈ ಸಾಂಸ್ಕøತಿಕತೆ, ಹಬ್ಬಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಲಿ. ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಅರೆಭಾಷೆ ಸಂಸ್ಕøತಿಯನ್ನು ಉಳಿಸಿ ಬೆಳೆಸಲಿ ಎಂದರು.
ಕಲಾವಿದರಿಗೆ ಸಾಂಸ್ಕøತಿಕ ಪರಿಕರ ವಿತರಿಸಿ ಮಾತನಾಡಿದ ಮಡಿಕೇರಿ ತಾ.ಪಂ. ಸದಸ್ಯ ಕೊಡಪಾಲು ಗಪ್ಪು ಗಣಪತಿ ಅವರು, ಒಂದು ಕಾಲದಲ್ಲಿ ಅವಂದೂರನ್ನು ಕುಗ್ರಾಮ ಎನ್ನುತ್ತಿದ್ದರು. ಆದರೆ ಇಂದು ಈ ಗ್ರಾಮ ಸಾಕಷ್ಟು ಅಭಿವೃದ್ಧಿ ಹೊಂದಿದೆ.
ನಾವು ಅರೆಭಾಷೆಯನ್ನು ಬೆಳೆಸುವುದರ ಜೊತೆಗೆ ಇದರ ಸಂಸ್ಕೃತಿ ಮತ್ತು ಪದ್ಧತಿ ಹಾಗೂ ಜನಾಂಗವನ್ನು ಬೆಳೆಸಬೇಕು. ಮೊಬೈಲ್ ಬಳಕೆ ಇಂದು ವ್ಯಾಪಕವಾಗಿದೆ. ಯುವಜನಾಂಗ ಇವೆಲ್ಲವನ್ನು ಬಿಟ್ಟು ಅರೆಭಾಷೆ ಸಂಸ್ಕøತಿ ಉಳಿಸಿ ಬೆಳೆಸಲಿ; ಭಾಷೆಯೊಂದಿಗೆ ನೆಂಟಸ್ತನ ಕೂಡ ಬೆಳೆಸಬೇಕೆಂದು ಹೇಳಿದರು.
ನಾವು ಭೂಮಿಯ ಮೇಲೆ ಬದುಕುತ್ತಿರುವುದಕ್ಕೆ ಮತ್ತು ಬೇಸಾಯ ಮಾಡಿ ಬೆಳೆ ಬೆಳೆಯುತ್ತಿರುವುದಕ್ಕೆ ಭೂಮಿ ತಾಯಿಗೆ ಪೂಜಿಸುತ್ತೇವೆ. ಭೂಮಿ ಇಲ್ಲದೆ ಏನೂ ಮಾಡಲಾಗದು. ಭೂಮಿಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭೂಮಿಯಲ್ಲಿ ನಾಟಿ ನೆಟ್ಟು ಕೆಲಸಮಾಡಬೇಕು. ಇದರಿಂದ ಭೂಮಿ ಹಸನಾಗಿರುತ್ತದೆ. ಭೂಮಿಯನ್ನು ನಂಬಿದರೆ ಎಂದೂ ನಷ್ಟವಿಲ್ಲ. ಈ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂದರು.
ತಾ.ಪಂ. ಸದಸ್ಯೆ ತುಂತಜ್ಜಿರ ಕುಮುದಾ ರಶ್ಮಿ ಅವರು, ಅರೆಭಾಷೆಯನ್ನು ಮಾತನಾಡುವ ಜನಾಂಗವು ಹೀಗೆ ಮುಂದುವರೆದು ಅದರ ಸಂಸ್ಕøತಿಯನ್ನು ಉಳಿಸಿ ದೇಶವ್ಯಾಪಿ ಬೆಳೆಸುವಂತಾಗಲಿ ಎಂದರು.
ಮದೆ ಗ್ರಾಮಪಂಚಾಯಿತಿ ಅಧ್ಯಕ್ಷ ಮುದ್ಯನ ಚಂದ್ರಶೇಖರ್ ಅವರು, ಎರಡು ವರ್ಷದ ಹಿಂದೆ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೆಸರುಗದ್ದೆ ಓಟವನ್ನು ನಡೆಸಲಾಗಿತ್ತು. ಇದೀಗೆ ಮತ್ತೆ ಕಿಡ್ಡಾಸ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಚಾರ ಎಂದರು. ಎಲ್ಲಾ ಭಾಷೆಯನ್ನು ಕಲಿಯುವುದರೊಂದಿಗೆ ಈ ಅರೆಭಾಷೆಯನ್ನೂ ಸಹ ಉಳಿಸಿಬೆಳೆಸಿಕೊಳ್ಳುವ ಕಾರ್ಯವಾಗ ಬೇಕು ಎಂದರು.
ಕಾರ್ಯಕ್ರಮದಲ್ಲಿ ಮದೆ ಗ್ರಾಮಪಂಚಾಯತ್ ಸದಸ್ಯರಾದ ಕಾಳೇರಮ್ಮನ ಅಶೋಕ ಅಯ್ಯಣ್ಣ, ಸವಿತಾ ಆಚಾರ್ಯ, ಪಟ್ಟಡ ಕುಟುಂಬದ ಪಟ್ಟೆದಾರರಾದ ಪಟ್ಟಡ ಕಾವೇರಪ್ಪ, ಪ್ರಚಾರ ಸಮಿತಿಯ ಪಟ್ಟಡ ಪ್ರಭಾಕರ್, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚೊಕ್ಕಾಡಿ ಪ್ರೇಮ ರಾಘವಯ್ಯ, ಸ್ಮಿತಾ ಅಮೃತ್ರಾಜ್, ಸೇರಿದಂತೆ ಇತರರು ಇದ್ದರು.
ಕಡ್ಯದ ಪಾರ್ವತಿ ಮತ್ತು ತಂಡದವರು ಪ್ರಾರ್ಥನೆ ನೆರವೇರಿಸಿದರು, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯೆ ಬೈತಡ್ಕ ಜಾನಕಿ ಸ್ವಾಗತ ಗೀತೆಯನ್ನು ಹಾಡಿದರು. ಧನಂಜಯ ಅಗೋಳಿಕಜೆ ಸ್ವಾಗತಿಸಿದರು, ಪಟ್ಟಡ ರೀನಾ ದೀಪಕ್ ವಂದಿಸಿದರು, ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕಿಡ್ಡಾಸ ಹಬ್ಬದ ಸಂಪ್ರದಾಯದಂತೆ ಭೂತಾಯಿಗೆ ಎಣ್ಣೆ ಸುರಿದು ಪೂಜೆ ಸಲ್ಲಿಸಲಾಯಿತು.
- ಕುಡೆಕಲ್ ಸಂತೋಷ್, ಚಿತ್ರ: ದುಗ್ಗಳ ಸದಾನಂದ