ಗೋಣಿಕೊಪ್ಪ ವರದಿ, ಫೆ. 8 ; ಬೆಂಗಳೂರು ಕಲ್ಕೆರೆ ಎಂಬಲ್ಲಿ ನಡೆದ ತೆಪ್ಪ ದುರಂತದಲ್ಲಿ ಕೊಡಗಿನ ಕೊಂಗೇಪಂಡ ಸಚಿನ್ (29) ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಉದ್ಯೋಗದಲ್ಲಿದ್ದ ಸಚಿನ್ ಶುಕ್ರವಾರ ರಾತ್ರಿ ರಾಮಮೂರ್ತಿ ನಗರದಲ್ಲಿರುವ ಕಲ್ಕೆರೆಯಲ್ಲಿ ಸ್ನೇಹಿತ ಉಲ್ಲಾಸ್ ಜತೆಯಲ್ಲಿ ವಿಹಾರಕ್ಕೆ ತೆರಳಿದ್ದರು. ಶನಿವಾರ ಮುಂಜಾನೆ ತೆಪ್ಪದಲ್ಲಿ ವಿಹಾರ ಮಾಡುತ್ತಿದ್ದಾಗ ತೆಪ್ಪ ಮಗುಚಿಕೊಂಡು ಉಲ್ಲಾಸ್ ಈಜಿ ದಡ ಸೇರಿ, ಜೀವಪಾಯದಿಂದ ಪಾರಾಗಿದ್ದಾರೆ. ಸಚಿನ್ ನೀರಿನಲ್ಲಿ ಮುಳುಗಿದ್ದು, ಇನ್ನೂ ಕೂಡ ಪತ್ತೆಯಾಗಿಲ್ಲ.ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೆÇಲೀಸರು ಕಲ್ಕೆರೆ ಕೆರೆಯಲ್ಲಿ ಸಚಿನ್ಗಾಗಿ ಹುಡುಕಾಟ ನಡೆಸುತ್ತಿದ್ದು, ಪತ್ತೆ ಕಾರ್ಯ ಮುಂದುವರಿದಿದೆ. ಸಚಿನ್ ಮತ್ತು ಉಲ್ಲಾಸ್ ಇಬ್ಬರು ಗೆಳೆಯರಾಗಿದ್ದು, ಶುಕ್ರವಾರ ಕೆರೆಗೆ ತೆರಳಿದ್ದರು. ನಂತರ ತೆಪ್ಪದಲ್ಲಿ ತೆರಳಲು ಮುಂದಾಗಿದ್ದಾರೆ. ಏರಿಯಿಂದ 100 ಮೀಟರ್ ತೆರಳುತ್ತಿದ್ದಂತೆ ತೆಪ್ಪ ಆಯ ತಪ್ಪಿ ಇಬ್ಬರೂ ನೀರಿಗೆ ಬಿದ್ದಿದ್ದು, ಸಚಿನ್ ಮುಳುಗಿ ಹೋಗಿದ್ದಾನೆ ಎಂದು ಉಲ್ಲಾಸ್ ಮಾಹಿತಿ ನೀಡಿದ್ದಾರೆ. ಶೋಧ ಕಾರ್ಯ ಮುಂದುವರಿದಿದೆ.ಸಚಿನ್ ಹಾತೂರು ಗ್ರಾಮದವರಾಗಿದ್ದು, ತಂದೆ ಮಾಚಯ್ಯ ಕೆಎಸ್ಆರ್ಪಿ ಉಪ ನಿರೀಕ್ಷಕರಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಸುಶೀಲ, ಪತ್ನಿ ಆಶಿಕಾ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಉತ್ತಮ ಕ್ರೀಡಾಪಟುವಾಗಿರುವ ಸಚಿನ್ ರಾಜ್ಯ ಹಾಕಿ ತಂಡ ಪ್ರತಿನಿಧಿಸಿದ್ದಾರೆ. ಉತ್ತಮ ಕ್ರಿಕೆಟ್ ಆಟಗಾರ ಕೂಡ. ವಿಚಾರ ತಿಳಿದು ಹಾತೂರು ಗ್ರಾಮದಲ್ಲಿರುವ ಸಂಬಂದಿಕರು ಕೂಡ ತೆರಳಿದ್ದಾರೆ. -ಸುದ್ದಿಪುತ್ರ