ಗೋಣಿಕೊಪ್ಪ ವರದಿ, ಫೆ. 8 ; ಇಲ್ಲಿನ ಪೊನ್ನಂಪೇಟೆ ರಸ್ತೆಯ ಸಮೀಪ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, 5-6 ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿಯಂತೆ ಗೋಣಿಕೊಪ್ಪ ಪೊಲೀಸರು ಕ್ರಮಕೈಗೊಂಡು ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಸಿದರು.
ಕೊಳೆತ ಸ್ಥಿತಿಯಲ್ಲಿ ಶವವಿತ್ತು. ಅಂದಾಜು 45-50 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳೀಯರಿಗೆ ವ್ಯಕ್ತಿಯ ಬಗ್ಗೆ ಮಾಹಿತಿ ಇಲ್ಲದ ಕಾರಣ, ಅಂತ್ಯಕ್ರಿಯೆ ನಡೆಸಲಾಯಿತು.