ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ !
ನವದೆಹಲಿ, ಫೆ. 8: ಅಷ್ಟೇನೂ ಹುರುಪಿನ ಮತದಾನ ನಡೆಯದ ದೆಹಲಿ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಮತ್ತೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರುವ ಲಕ್ಷಣಗಳು ದಟ್ಟವಾಗಿದೆ. 70 ಶಾಸಕರ ಸಂಖ್ಯಾಬಲದ ದೆಹಲಿ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು 36 ಶಾಸಕರ ಸರಳ ಬಹುಮತ ಅಗತ್ಯವಿದ್ದು, ಈ ಬಾರಿಯೂ ಆಮ್ ಆದ್ಮಿ ಪಕ್ಷ ಬಹುಮತ ಪಡೆಯಲಿದೆ. ಬಿಜೆಪಿ ಕಳೆದ ಬಾರಿಗಿಂತ ಸುಧಾರಣೆ ಕಾಣುವ ಸಾಧ್ಯತೆ ಇದ್ದು 20 ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಲಿದ್ದಾರೆ ಎನ್ನುತ್ತಿದೆ ಎಕ್ಸಿಟ್ ಪೆÇೀಲ್ ಸರ್ವೆ. ಕಾಂಗ್ರೆಸ್ ಪಕ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು 2 ಕ್ಕಿಂತ ಹೆಚ್ಚು ಶಾಸಕರು ಆಯ್ಕೆಯಾಗುವುದೂ ಕಷ್ಟ ಎನ್ನುವ ಸ್ಥಿತಿ ಎದುರಿಸುತ್ತಿದೆ.
ದೆಹಲಿಯಲ್ಲಿ ಶೇ. 54 ರಷ್ಟು ಮತದಾನ
ನವದೆಹಲಿ, ಫೆ. 8: ದೆಹಲಿ ವಿಧಾನಸಭೆ ಚುನಾವಣೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಂಜೆ 6 ಗಂಟೆಗಳವರೆಗೆ ಶೇ. 54 ಮತದಾನವಾಗಿದೆ. ಕಳೆದ 2015 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಶೇ. 67.12 ರಷ್ಟು ಮತದಾನ ನಡೆದಿತ್ತು. ಒಟ್ಟು 13,571 ಮತಕೇಂದ್ರಗಳಲ್ಲಿ 13,571 ಮತಗಟ್ಟೆಗಳಿದ್ದು 1 ಲಕ್ಷದ 024 ಅಧಿಕಾರಿಗಳು ಮತಗಟ್ಟೆಗಳಲ್ಲಿ ಸೇವಾನಿರತರಾಗಿದ್ದಾರೆ. ಒಟ್ಟು 1 ಕೋಟಿಯ 47 ಲಕ್ಷದ 86 ಸಾವಿರದ 382 ದಾಖಲಾದ ಮತದಾರರಿದ್ದು ಅವರಲ್ಲಿ 66 ಲಕ್ಷದ 80 ಸಾವಿರದ 277 ಮಹಿಳೆಯರು ಮತ್ತು 81 ಲಕ್ಷದ 5 ಸಾವಿರದ 236 ಪುರುಷ ಮತದಾರರಾಗಿದ್ದಾರೆ. ಈ ಬಾರಿ 672 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ.
ಮಂಗಳೂರು ರೈಲಿನಲ್ಲಿ ದರೋಡೆ
ಕೋಯಿಕ್ಕೋಡ್, ಫೆ. 8: ಮಂಗಳೂರಿಗೆ ತೆರಳುತ್ತಿದ್ದ ಎರಡು ಪ್ರತ್ಯೇಕ ರೈಲುಗಳಲ್ಲಿ ಎರಡು ಕುಟುಂಬಗಳಿಂದ ಬರೊಬ್ಬರಿ ರೂ. 20 ಲಕ್ಷ ಮೌಲ್ಯದ ವಜ್ರದ ಚಿನ್ನಾಭರಣ, ನಗದು ದರೋಡೆ ಮಾಡಲಾಗಿದೆ. ಚೆನ್ನೈ-ಮಂಗಳೂರು ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ಹಾಗೂ ತಿರುವನಂತಪುರಂ-ಮಂಗಳೂರು ಮಲ್ಬಾರ್ ಎಕ್ಸ್‍ಪ್ರೆಸ್ ರೈಲುಗಳ ಹವಾನಿಯಂತ್ರಿತ ಬೋಗಿಗಳಲ್ಲಿ ಈ ದರೋಡೆ ಪ್ರಕರಣ ನಡೆದಿದೆ. ಚೆನ್ನೈ-ಮಂಗಳೂರು ರೈಲಿನ ಘಟನೆ ತಿರುಪುರ್-ತಿರೂರಿನಲ್ಲಿ ನಡೆದಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. 54 ವರ್ಷದ ಮಹಿಳಾ ಪ್ರಯಾಣಿಕರಾದ ಪೆÇನ್ನಿಮಾರನ್ ಅವರ ದೂರಿನ ಪ್ರಕಾರ 15 ಲಕ್ಷ ರೂಪಾಯಿ ಮೌಲ್ಯದ ವಜ್ರ, ಚಿನ್ನದ ಭರಣಗಳಿದ್ದ ಬ್ಯಾಗ್, 22,000 ರೂಪಾಯಿ ನಗದು ಕಳ್ಳತನವಾಗಿದೆ. ತಕ್ಷಣೆವೇ ಎಚ್ಚೆತ್ತ ಕುಟುಂಬ ಸದಸ್ಯರು ಪೆÇಲೀಸ್ ಹಾಗೂ ಆರ್ ಪಿಎಫ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಮುಂದಿನ ನಿಲ್ದಾಣದಲ್ಲಿಯೇ ಪೆÇಲೀಸರು ಕುಟುಂಬದಿಂದ ಹೇಳಿಕೆಗಳನ್ನು ಪಡೆದಿದ್ದಾರೆ.
ಮಹಿಳಾ ಸೇನಾಧಿಕಾರಿಗಳ ಅಸಮಾಧಾನ
ನವದೆಹಲಿ, ಫೆ. 8: ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮಿಷನ್ ನೀತಿ ರೂಪಿಸುವುದಕ್ಕೆ ತಡ ಮಾಡುತ್ತಿರುವ ಕೇಂದ್ರ ಸರ್ಕಾರದ ನಡೆ ಬಗ್ಗೆ ಮಹಿಳಾ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಿಳಾ ಅಧಿಕಾರಿಗಳು ತಮ್ಮ ಧೈರ್ಯ ಸಾಹಸಗಳನ್ನು ಸಾಬೀತುಪಡಿಸಿದ್ದಾರೆ. ಸತತ 30 ವರ್ಷಗಳ ಸೇನೆಯಲ್ಲಿ ಸತ್ವ ಪರೀಕ್ಷೆ ಎದುರಿಸಿದ್ದಾರೆ. ಸೈನಿಕರು/ ಪುರುಷರು ಮಹಿಳಾ ಅಧಿಕಾರಿಗಳ ಕಮಾಂಡ್‍ನ್ನು ನಿರಾಕರಿಸಿರುವ ಉದಾಹರಣೆಗಳಿಲ್ಲ ಎಂದು ಮಹಿಳಾ ಅಧಿಕಾರಿಗಳು ಲಿಖಿತ ರೂಪದಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸೇನೆಯಲ್ಲಿ ಮಹಿಳೆಯರಿಗೆ ಪರ್ಮನೆಂಟ್ ಕಮಿಷನ್ (ಪಿಸಿ) ನೀಡಬೇಕೆಂದು ಆಗ್ರಹಿಸಿ ಮಹಿಳಾ ಅಧಿಕಾರಿಗಳ ಪರವಾಗಿ ಹಿರಿಯ ಅಡ್ವೊಕೇಟ್ ಐಶ್ವರ್ಯಾ ಭಾಟಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದರ ಭಾಗವಾಗಿ ಮಹಿಳಾ ಅಧಿಕಾರಿಗಳು ಲಿಖಿತ ರೂಪದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾ. 10 ರಂದು ಖಾತೆ ಹಂಚಿಕೆ
ಬೆಂಗಳೂರು, ಫೆ. 8: ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಶಾಸಕರಿಗೆ ಖಾತೆ ಹಂಚಿಕೆ ನಡೆಸಬೇಕೆನ್ನುವ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ತಾ. 10 ರಂದು ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಹೇಳಿದ್ದಾರೆ. ಎಲ್ಲವೂ ಸಿದ್ದವಿದೆ ಆದರೆ ಇಂದು ಎರಡನೇ ಶನಿವಾರದ ರಜೆ ಇರುವ ಕಾರಣ ಸೋಮವಾರ ಬೆಳಿಗ್ಗೆ ನಾವು ಖಾತೆಗಳನ್ನು ನೀಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು. ಕಾಂಗ್ರೆಸ್-ಜೆಡಿ(ಎಸ್) ಮೈತ್ರಿಕೂಟದ ಸರ್ಕಾರ ಉರುಳಿಸಲು ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಹಾಯ ಮಾಡಿದ 10 ಶಾಸಕರಿಗೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಗಿದೆ. ಗುರುವಾರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಹತ್ತು ಮಂದಿಗೆ ಶನಿವಾರಕ್ಕೆ ಮುನ್ನ ಖಾತೆ ಹಂಚಿಕೆ, ಮಾಡುವುದಾಗಿ ಯಡಿಯೂರಪ್ಪ ಈ ಮುನ್ನ ಮಾಹಿತಿ ನೀಡಿದ್ದರು.