ಮಡಿಕೇರಿ. ಫೆ. 8: ಪ್ರಕೃತಿ ವಿಕೋಪಕ್ಕೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರು ಉತ್ಪಾದಿಸಿದ ಮಸಾಲೆ ಪದಾರ್ಥಗಳ ಮಾರಾಟ ಮಳಿಗೆ ಇದೀಗ ಬೆಂಗಳೂರಿನಲ್ಲಿಯೂ ಪ್ರಾರಂಭಗೊಳ್ಳುತ್ತಿದೆ.

ಇದೀಗ ಬೆಂಗಳೂರು ನಗರದ ಶೇಷಾದ್ರಿಪುರಂನ ಹೈಸ್ಕೂಲ್‍ನ ಎದುರು (ಮಂತ್ರಿ ಮಾಲ್ ಬಳಿ) ಕೂರ್ಗ್ ಫ್ಲೇವರ್ಸ್‍ನ ಉತ್ಪನ್ನಗಳ ಹೊಸತೊಂದು ಮಳಿಗೆಯು ತಾ. 9 ರಂದು (ಇಂದು) ಬೆಳಿಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ ಎಂದು ಪ್ರಾಜೆಕ್ಟ್ ಕೂರ್ಗ್ ಸಂಚಾಲಕ ಬಾಲಾಜಿ ಕಶ್ಯಪ್ ತಿಳಿಸಿದ್ದಾರೆ. ಕೊಡಗಿನ ಕಾಫಿ, ಜೇನು ಸೇರಿದಂತೆ ಕಾಲೂರು ಗ್ರಾಮದ ಮಹಿಳೆಯರು ತಮ್ಮೂರಿನ ಸುಸಜ್ಜಿತ ಘಟಕದಲ್ಲಿ ಉತ್ಪಾದಿಸಿದ ಮಸಾಲೆ ಪದಾರ್ಥಗಳು ಈ ಮಳಿಗೆಯಲ್ಲಿ ಖರೀದಿಗೆ ಲಭ್ಯವಿದೆ.