ಮಡಿಕೇರಿ, ಫೆ. 8: ತಾಳತ್‍ಮನೆಯ ಪುರಾತನ ಲಿಂಗರೂಪಿ ಶ್ರೀದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ದೇವರಿಗೆ ಗಣಪತಿ ಹೋಮ, ಪ್ರೋಕ್ತಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ, ಅಂಕುರ ಪೂಜೆ ಶ್ರದ್ಧಾಭಕ್ತಿಯಿಂದ ಜರುಗಿತು.

ಮಧ್ಯಾಹ್ನ ಮಹಾಪೂಜೆ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಂಜೆ ಸುಳ್ಯದ ಧರ್ಮಾರಣ್ಯದ ಶ್ರೀ ಗುರು ಗಣಪತಿ ಭಕ್ತಜನ ಭಜನಾ ಮಂಡಳಿಯಿಂದ ಭಜನೆ, ಅರಂತೋಡು ಮಲ್ಲಿಕಾರ್ಜುನಾ ದೇವಸ್ಥಾನದ ಪ್ರಧಾನ ಅರ್ಚಕ ಕೇಶವಮೂರ್ತಿ ಉಪನ್ಯಾಸ ನೀಡಿದರು.

ರಾತ್ರಿ ಮೈಸೂರಿನ ಸುಮಂತ್ ವಸಿಷ್ಠ ಹಾಗೂ ಚಂದ್ರಕಲಾ ಮೂರ್ತಿ ಮತ್ತು ಅನ್ವಿತ್ ತಂಡದವರಿಂದ ‘ಭಕ್ತಿ ರಸಸಂಜೆ’ ಸಾಂಸ್ಕøತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಇಂದಿನ ಪೂಜಾ ವಿಧಿ ವಿಧಾನ

ಶ್ರೀದುರ್ಗಾ ಭಗವತಿ ದೇವಾಲಯದಲ್ಲಿ ಫೆ. 9 ರಂದು (ಇಂದು) ಬೆಳಿಗ್ಗೆ 6 ಗಂಟೆಯಿಂದ ಗಣಪತಿ ಹೋಮ, ಶಾಂತಿ ಹೋಮ, ದಹನ ಪ್ರಾಯಶ್ಚಿತ ತ್ರಿಕಾಲಪೂಜೆ ಜರುಗಲಿದ್ದು, ಮಧ್ಯಾಹ್ನ 12 ಗಂಟೆಗೆ ಅಂಕುರ ಪೂಜೆ, ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ರಿಂದ ಹೋಮ ಕಲಶಾಭಿಷೇಕ, ಅನುಜ್ಞಾ ಕಲಶಪೂಜೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಗೆ ಬೆಳ್ತಂಗಡಿಯ ಕರಾಯ ಶ್ರೀಕೃಷ್ಣ ಭಜನಾ ಮಂಡಳಿಯಿಂದ ಭಜನೆ, ಸಂಜೆ 6 ಗಂಟೆಗೆ ಪುತ್ತೂರಿನ ಶ್ರೀಕೃಷ್ಣ ಉಪಾಧ್ಯಾಯ ಅವರಿಂದ ಉಪನ್ಯಾಸ ನಡೆಯಲಿದ್ದು, ಬೆಂಗಳೂರಿನ ಹೇಮಂತ ಮತ್ತು ಹೇರಂಭ ಸಹೋದರರ ಕೊಳಲು ವಾದನದ ಮೂಲಕ ಭಕ್ತಿಸುಧೆ ಹರಿಯಲಿದೆ.