ಚೆಟ್ಟಳ್ಳಿ, ಫೆ. 8: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಚೆಟ್ಟಳ್ಳಿಯ ಜೋಮಾಲೆ ಪೊಮ್ಮಕ್ಕಡ ಕೂಟದ ಸಂಯುಕ್ತ ಆಶ್ರಯದಲ್ಲಿ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ‘ರೈತಂಡ ಬದ್‍ಕ್‍ಲ್ ಮಣ್ಣ್- ಪೊನ್ನ್’ ಎಂಬ ಕೃಷಿ ಆಧಾರಿತ ವಿಚಾರಗೋಷ್ಠಿ ಕಾರ್ಯಕ್ರಮ ನಡೆಯಿತು. ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ವಸ್ತುಪ್ರದರ್ಶನವನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಹಿರಿಯ ಸಾಹಿತಿ, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಾಚರಣಿಯಂಡ ಪಿ. ಅಪ್ಪಣ್ಣ ಉದ್ಘಾಟಿಸಿದರು. ರೈತನ ಬದುಕಲ್ಲಿ ಮಹತ್ತರವಾದ ಕೃಷಿಗೆ ಸಂಬಂಧಿಸಿದ ಕಾರ್ಯ ಕ್ರಮವನ್ನು ನಡೆಸಬೇಕು. ಆ ಮೂಲಕ ರೈತರÀನ್ನು ಸಂಘಟಿಸಬೇಕೆಂಬದು ಈ ಕಾರ್ಯಕ್ರಮದ ಉದ್ದೇಶವೆಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹೇಳಿದರು. ದೇಶದಲ್ಲಿ ಶೇ. 70 ರಷ್ಟು ರೈತರು ಕೃಷಿಯನ್ನೇ ನಂಬಿದ್ದು ಸಂಬಂಧಪಟ್ಟ ಇಲಾಖೆಗಳ ಮಾರ್ಗ ದರ್ಶನದೊಂದಿಗೆ ಅಭಿವೃದ್ಧಿಯತ್ತ ಸಾಗಬೇಕು ಎಂದು ಬಾಚರಣಿಯಂಡ ಪಿ. ಅಪ್ಪಣ್ಣ ಹೇಳಿದರು.
ಪ್ರತಿಯೊಬ್ಬರು ತಮ್ಮ ಮನೆಗಳಲ್ಲಿ ಹುಟ್ಟಿನಿಂದಲೇ ಮಕ್ಕಳಿಗೆ ಕೊಡವ ಭಾಷೆಯನ್ನು ಕಲಿಸುವುದರ ಜೊತೆಗೆ ಕೊಡವ ಸಂಸ್ಕøತಿ, ಆಚಾರ ವಿಚಾರವನ್ನು ಉಳಿಸಿ ಬೆಳೆಸುವಂತಾಗ ಬೇಕೆಂದು ಬಲ್ಲಾರಂಡ ಮಣಿಉತ್ತಪ್ಪ ನುಡಿದರು.
ಬದಲಾವಣೆ ಕಂಡ ಕೃಷಿ ಬದ್‍ಕ್ ವಿಚಾರವಾಗಿ (ಮೊದಲ ಪುಟದಿಂದ) ಮಡಿಕೇರಿ ಕೊಡವ ಸಮಾಜದ ಜಂಟಿಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ವಿಚಾರ ಮಂಡನೆ ಮಾಡಿದರು. ಮುಖ್ಯ ತಿಥಿಗಳಾಗಿ ಚೆಟ್ಟಳ್ಳಿ ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾಚಂಗಪ್ಪ, ನಿವೃತ್ತ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ, ಹಿರಿಯರಾದ ಕೊಂಗೇಟಿರ ಕುಸುವi ಪೊನ್ನಪ್ಪ, ಕಾಫಿ ಬೆಳೆಗಾರರಾದ ಐಚೆಟ್ಟಿರ ಉಮೇಶ್‍ಮಾಚಯ್ಯ ಭಾಗವಹಿಸಿದ್ದರು. ವಿವಿಧ ಪೊಮ್ಮಕ್ಕಡ ತಂಡದಿಂದ ಕೊಡವ ನೃತ್ಯ ಪ್ರದರ್ಶನ ನಡೆಯಿತು.
ಜೋಮಾಲೆ ಪೊಮ್ಮಕ್ಕಡ ತಂಡ ಪ್ರಾರ್ಥಿಸಿ, ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಗಿರೀಶ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯನ್ನಾಡಿದರು.
ಜೋಮಾಲೆ ಪೊಮ್ಮಕ್ಕಡ ಕೂಟದ ಕಾರ್ಯದರ್ಶಿ ಐಚೆಟ್ಟಿರ ಸುನಿತ ಮಾಚಯ್ಯ ಜೋಮಾಲೆ ಪೊಮ್ಮಕ್ಕಡ ಕೂಟ ನಡೆದುಬಂದ ಬಗ್ಗೆ ವಿವರಿಸಿದರು. ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯ ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು. ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ವಂದಿಸಿದರು.
ಕಾರ್ಯಕ್ರಮದ ಅಂಗವಾಗಿ ಪತ್ರಕರ್ತ ಪುತ್ತರಿರ ಕರುಣ್‍ಕಾಳಯ್ಯ ಹಾಗೂ ಪಳಂಗಂಡ ಗೀತಾಸುಬ್ಬಯ್ಯ ಅವರ ಸಂಗ್ರಹದ ಪುರಾತನ ವಸ್ತುಗಳ ಪ್ರದರ್ಶನ, ಮಹಿಳೆಯರು ತಯಾರಿಸಿದ ತಿಂಡಿತಿನಿಸುಗಳ ಪ್ರದರ್ಶನ ಮಾರಾಟ, ಆಧುನಿಕ ಯಂತ್ರೋಪಕರಣಗಳ ಪ್ರದರ್ಶನ ಮಾರಾಟ, ಸಿರಿಧಾನ್ಯ, ಹೂಗಿಡಗಳ ಮಾರಾಟ, ಅಕಾಡೆಮಿ ವತಿಯಿಂದ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಯಿತು.
ವಿಚಾರಗೋಷ್ಠಿ: ಅರಣ್ಯ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ವಿಚಾರದ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಚೆಪ್ಪುಡಿರ ಜಿ. ಕುಶಾಲಪ್ಪ, ಕಾಫಿ ಸಿಪ್ಪೆಯಲ್ಲಿ ಮಲ್ನಾಡ್ ಗೊಬ್ಬರ ತಯಾರಿ ಬಗ್ಗೆ ಬೆಂಗಳೂರು ದೇಸೀ ಸಂಸ್ಥೆಯ, ರಾಜ್ಯ ನೋಡಲ್ ಅಧಿಕಾರಿ ಡಾ. ಜಿ.ಆರ್. ಪೊನ್ನೋಬಲಿಸ್ವಾಮಿ, ಮಣ್ಣು ಪರೀಕ್ಷೆ-ಸಂರಕ್ಷಣೆ ಬಗ್ಗೆ ಸೋಮವಾರಪೇಟೆ ಸಹಾಯಕ ಕೃಷಿ ನಿರ್ದೇಶಕ ಡಾ. ರಾಜಶೇಖರ್ ಹೆಚ್.ಎಸ್, ಕೊಡಗಿನ ಕರಿಮೆಣಸು ಪೋಷಣೆ ಮತ್ತು ಸಂರಕ್ಷಣೆ ಕುರಿತು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞ ಡಾ. ಕಾಡ್ಯಮಾಡ ಎ. ದೇವಯ್ಯ, ಹೂಬೆಳೆಯ ಮೂಲಕ ಮಹಿಳೆಯರಲ್ಲಿ ಆರ್ಥಿಕಮಟ್ಟ ಸುಧಾರಣೆ ಬಗ್ಗೆ ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ಪ್ರಾಧ್ಯಾಪಕಿ ಡಾ. ಮಂಡೇಪಂಡ ಕಾವೇರಿ ವಿಚಾರ ಮಂಡನೆ ಮಾಡಿದರು.
-ಕರುಣ್ ಕಾಳಯ್ಯ