ಮಡಿಕೇರಿ, ಫೆ. 9: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಹಮಾಲರು, ಗೃಹ ಕಾರ್ಮಿಕರು, ಟೈಲರ್, ಚಿಂದಿ ಆಯುವವರು, ಮೆಕ್ಯಾನಿಕ್, ಅಗಸರು ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಭಟ್ಟಿ ಕಾರ್ಮಿಕರು, ಹಾಗೂ ಖಾಸಗಿ ವಾಹನ ಚಾಲಕರಿಗೆ ಮಾರ್ಚ್ 1 ರಂದು ಸನ್ಮಾನ ಮಾಡಲು ಅರ್ಹ ಕಾರ್ಮಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಹಮಾಲರು, ಗೃಹ ಕಾರ್ಮಿಕರು, ಟೈಲರ್, ಚಿಂದಿ ಆಯುವವರು, ಮೆಕ್ಯಾನಿಕ್, ಅಗಸರು ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು ಮತ್ತು ಭಟ್ಟಿ ಕಾರ್ಮಿಕರು ಪ್ರಶಸ್ತಿಗಾಗಿ ನಿಗದಿತ ನಮೂನೆ 5ನ್ನು ತಾಲೂಕಿನಲ್ಲಿರುವ ಕಾರ್ಮಿಕ ನಿರೀಕ್ಷಕರ ಕಚೇರಿ ಮತ್ತು ಜಿಲ್ಲಾಮಟ್ಟದ ಕಾರ್ಮಿಕ ಅಧಿಕಾರಿ ಕಚೇರಿಗಳಲ್ಲಿ ಪಡೆದು ತಾ. 17 ರಂದು ಸಂಜೆ 5.30 ರೊಳಗೆ ಸಲ್ಲಿಸಲು ಕೋರಿದೆ.

ನಮೂನೆ 5 ರೊಂದಿಗೆ ಸಲ್ಲಿಸಬೇಕಾದ ದಾಖಲೆಗಳು: ವಿದ್ಯಾಭ್ಯಾಸದ ಬಗ್ಗೆ ಪ್ರಮಾಣ ಪತ್ರ, ಕಾರ್ಮಿಕರ ಬಳಿ ಇರುವ ಸ್ಮಾರ್ಟ್ ಕಾರ್ಡ್ ಅಥವಾ ಸ್ಮಾರ್ಟ್ ಕಾರ್ಡ್‍ಗಾಗಿ ಅರ್ಜಿ ಸಲ್ಲಿಸಿದ ದಿನಾಂಕ, ಸರ್ವಿಸ್ ಸರ್ಟಿಫಿಕೇಟ್ (ಕೆಲಸ ನಿರ್ವಹಿಸಿದ ಬಗ್ಗೆ), ಪೊಲೀಸ್ ಇಲಾಖೆಯಿಂದ ಸರ್ಟಿಫಿಕೇಟ್ (ಯಾವುದೇ ಪ್ರಕರಣ ಇರುವುದಿಲ್ಲ ಎಂಬ ಬಗ್ಗೆ), ವಿಷಯದ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರ ಇದ್ದಲ್ಲಿ ಲಗತ್ತಿಸುವುದು. ಜಾತಿ ಪ್ರಮಾಣ ಪತ್ರವನ್ನು ದಾಖಲೆಗಳೊಂದಿಗೆ ನಮೂನೆ 5ನ್ನು ತಾ. 17 ರಂದು ಸಂಜೆ 5.30 ರೊಳಗೆ ಸಲ್ಲಿಸಲು ಕೋರಿದೆ.

ಖಾಸಗಿ ವಾಹನ ಚಾಲಕರು ನಮೂನೆ 5 ರೊಂದಿಗೆ ಮೇಲೆ ನಮೂದಿಸಿದ ದಾಖಲೆಗಳೊಂದಿಗೆ ಚಾಲ್ತಿಯಲ್ಲಿರುವ ವಾಹನ ಚಾಲನಾ ಪರವಾನಗಿಯೊಂದಿಗೆ ಸಾಧಿಸಿದ ಸಾಧನೆ ಮತ್ತು ಯಾವುದಾದರೂ ಪ್ರಶಸ್ತಿ ಪಡೆದ ದಾಖಲೆಗಳನ್ನು ಲಗತ್ತಿಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.