ಮಡಿಕೇರಿ, ಫೆ. 9: ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ತಾ.10 ರಂದು (ಇಂದು) ಬೆಳಗ್ಗೆ 6 ರಿಂದ ಗಣಪತಿ ಹೋಮ, ತತ್ವಕಲಶಾಭಿಷೇಕ, ಅನುಜ್ಞಾ ಕಲಶಾಭಿಷೇಕ, ತ್ರಿಕಾಲ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.
ಮಧ್ಯಾಹ್ನ 12 ಗಂಟೆಗೆ ಅಂಕುರ ಪೂಜೆ, ಮಹಾಪೂಜೆ ನಂತರ ಅನ್ನಸಂತರ್ಪಣೆ. ಸಂಜೆ 5 ಗಂಟೆಗೆ ಕಾಸರಗೋಡಿನ ಅಣ್ಣಪ್ಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದಿಂದ ‘ನಾಟ್ಯ ಭಜನೆ’ ಜರುಗಲಿದೆ.
ಸಂಜೆ 6 ಗಂಟೆಗೆ ಕಾರ್ಕಳದ ಉಪನ್ಯಾಸಕರಾದ ಆದರ್ಶ ಗೋಖಲೆ ಅವರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಸಂಜೆ 7 ಗಂಟೆಗೆ ಅನುಜ್ಞಾಬಲಿ ಕ್ಷೇತ್ರ ಪಾಲನಲ್ಲಿ ಅನುಜ್ಞಾ ಪ್ರಾರ್ಥನೆ, ಬಿಂಬಶುದ್ಧಿ, ಕಲಶಪೂಜೆ, ಅಂಕುರ ಪೂಜೆ, ಮಹಾಪೂಜೆ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ. ಮಡಿಕೇರಿಯ ಶ್ರೀಚೌಡೇಶ್ವರಿ ದೇವಾಂಗ ಮಹಿಳಾ ಸಂಘದಿಂದ ‘ಶ್ರೀ ಚೌಡೇಶ್ವರಿ ವೈಭವ ನೃತ್ಯ ರೂಪಕ’ ನಡೆಯಲಿದೆ.