ಮಡಿಕೇರಿ, ಫೆ. 9: ಜಿಲ್ಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ಎಲ್ಲಾ ಅಗತ್ಯ ತುರ್ತು ಕ್ರಮಗಳನ್ನು ಕೈಗೊಳ್ಳಲು ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲೆಗೆ ಚೀನಾ ಹಾಗೂ ಇನ್ನಿತರ ಕೊರೊನಾ ಬಾಧಿತ ರಾಷ್ಟ್ರಗಳಿಂದ ಬರುವ ಪ್ರಯಾಣಿಕರು ಕೊರೊನಾ ವೈರಸ್ ಲಕ್ಷಣಗಳ ಬಗ್ಗೆ ಸ್ವಯಂ ಘೋಷಣಾ ನಮೂನೆಯಲ್ಲಿ ಮಾಹಿತಿ ನೀಡಬಹುದಾಗಿದೆ.

ಡಾ. ಶಿವಕುಮಾರ್ ಜಿಲ್ಲಾ ಸರ್ವೇಕ್ಷಣ ಅಧಿಕಾರಿ (9449843263), ಡಾ. ಗೋಪಿನಾಥ್, ತಾಲೂಕು ಆರೋಗ್ಯ ಅಧಿಕಾರಿ, ಮಡಿಕೇರಿ ತಾಲೂಕು (9449843203), ಡಾ. ಶ್ರೀನಿವಾಸ್, ತಾಲೂಕು ಆರೋಗ್ಯ ಅಧಿಕಾರಿ, ಸೋಮವಾರಪೇಟೆ ತಾಲೂಕು, (ಕುಶಾಲನಗರ), (9880996893), ಡಾ. ಯತಿರಾಜ್ ಹೆಚ್.ಆರ್. ತಾಲೂಕು ಆರೋಗ್ಯ ಅಧಿಕಾರಿ, ವೀರಾಜಪೇಟೆ ತಾಲೂಕು, (ಗೋಣಿಕೊಪ್ಪ), (9448448481) ನ್ನು ಸಂಪರ್ಕಿಸಿ ಅಧಿಕಾರಿಗಳ ಗಮನಕ್ಕೆ ಮಾಹಿತಿಯನ್ನು ನೀಡಲು ಕೋರಿದೆ. ಕೊರೊನಾ ವೈರಸ್ ಹರಡದಂತೆ ಆರೋಗ್ಯ ಇಲಾಖೆಗೆ ಸಹಕಾರ ನೀಡಲು ತಿಳಿಸಿದೆ.

ಸ್ವಯಂ ಘೋಷಣಾ ಮಾಹಿತಿಯನ್ನು ಯಾರಿಗೂ ಬಹಿರಂಗಪಡಿಸದೇ ಗೌಪ್ಯತೆ ಕಾಪಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ. ಮೋಹನ್ ತಿಳಿಸಿದ್ದಾರೆ.