ಸುಂಟಿಕೊಪ್ಪ, ಫೆ. 9: ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ಮೇಲಿನ ಗೌಡ ಸಮಾಜದಲ್ಲಿ 13ನೇ ವರ್ಷದ ವಧು-ವರರ ಸಂದರ್ಶನ ಕಾರ್ಯಕ್ರಮ ನಡೆಯಿತು.
ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಮಾತನಾಡಿ, ನಮ್ಮ ಧರ್ಮ, ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಂದರ್ಶನ ಕಾರ್ಯಕ್ರಮ ಪರಿಣಾಮಕಾರಿಯಾಗಲಿದೆ ಎಂದರು.
ಗೋಣಿಕೊಪ್ಪ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಉಷಾಲತಾ ಮಾತನಾಡಿ, ಯುವ ಜನಾಂಗ ತಮ್ಮ ಸವಾಲುಗಳನ್ನು ಎದುರಿಸಬೇಕಾದರೆ ಕೌಶಲ್ಯವನ್ನು ಕರಗತಗೊಳಿಸಬೇಕು.ಆ ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಬದುಕು ಸಾಧನೆಯತ್ತ ಮುನ್ನಡೆಯಲಿದೆ ಎಂದು ಹೇಳಿದರು.
ಕೊಡಗು ಅರೆಭಾಷೆ ಸಾಹಿತ್ಯ ಸಂಸ್ಕøತಿ ಅಕಾಡೆಮಿ ಸದಸ್ಯೆ ಬೈತಡ್ಕ ಜಾನಕಿ ಮಾತನಾಡಿ, ಇಂತಹ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಉತ್ತಮ ವೈವಾಹಿಕ ಸಂಬಂಧಗಳು ಏರ್ಪಡಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬೈತಡ್ಕ ಬೆಳ್ಯಪ್ಪ, ಜಂಟಿ ಕಾರ್ಯದರ್ಶಿ ಕುದುಪಜೆ ಶಾರದಾ, ಖಜಾಂಚಿ ಪೊನ್ನಚ್ಚನ ಸೋಮಣ್ಣ, ನಿರ್ದೇಶಕರಾದ ಕೂಡಕಂಡಿ ಉಮಾವತಿ, ಸೂದನ ಮೋಹಿನಿ, ಪಟ್ಟಡ ದೇವಯ್ಯ,ಪಾಣತಲೆ ಬಿದ್ದಪ್ಪ, ಅತ್ಯಾಡಿ ಕೃಷ್ಣಪ್ಪ, ಹೊಸೊಕ್ಲು ಪೊನ್ನಪ್ಪ, ಕರ್ಣಯ್ಯನ ಕಾಳಪ್ಪ ಇತರರು ಇದ್ದರು.
ಕುದುಪಜೆ ಶಾರದಾ ಬಸಪ್ಪ ಪ್ರಾರ್ಥಿಸಿ, ಕೆ.ಸಿ.ವಿಶ್ವನಾಥ್ ಸ್ವಾಗತಿಸಿ, ಪಟ್ಟಡ ಶಿವಕುಮಾರ್ ನಿರೂಪಿಸಿ, ವಂದಿಸಿದರು. ವಧು-ವರರ ಸಂದರ್ಶನ ಕಾರ್ಯಕ್ರಮದಲ್ಲಿ ಸುಮಾರು 80ಕ್ಕಿಂತಲೂ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು.