ಮಡಿಕೇರಿ, ಫೆ. 9: ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬೆಳೆಸುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದ್ದು, ಜೀವನ ಪ್ರೀತಿಯನ್ನು ಕಲಿಸುವ ಶಿಕ್ಷಣ ಇಂದಿನ ಅಗತ್ಯವಾಗಿದೆ ಎಂದು ಮಡಿಕೇರಿಯ ಸಂತ ಜೋಸೇಫರ ಕಾಲೇಜಿನ ಉಪನ್ಯಾಸಕಿ, ಸಮರ್ಥ ಕನ್ನಡಿಗರು ಸಂಘಟನೆಯ ಜಿಲ್ಲಾ ಸಂಚಾಲಕಿ ಕೆ. ಜಯಲಕ್ಷ್ಮಿ ಹೇಳಿದ್ದಾರೆ.
ಕಡಗದಾಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಕೆ.ಜಯಲಕ್ಷ್ಮಿ, ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸುವುದೇ ಶಿಕ್ಷಣದ ಮುಖ್ಯ ಉದ್ದೇಶ. ಜೀವನ ಪ್ರೀತಿಯನ್ನು ಕಲಿಸದ ವಿದ್ಯೆ ಪ್ರಾಯೋಜನಕ್ಕೆಬಾರದು. ಈ ಹಂತದಲ್ಲಿ ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚಾಗಿರುವುದರಿಂದ ಶಿಕ್ಷಣ ಎನ್ನುವ ತ್ರಿಕೋನ ವ್ಯವಸ್ಥೆಯಲ್ಲಿ ಮಕ್ಕಳು ಸತ್ಪಥದಲ್ಲಿ ಸಾಗಲು ಶಿಕ್ಷಕರ ಜೊತೆ ಜೊತೆಗೆ ಪೆÇೀಷಕರೂ ಆದರ್ಶ ಪ್ರಾಯರಾಗಿರ ಬೇಕು ಎಂದು ಕಿವಿಮಾತು ಹೇಳಿದರು. ವಿದ್ಯೆಗಳಿಸಿದವರಿಗೆ ಎಲ್ಲೆಲ್ಲೂ ಸಲ್ಲುವ ಗೌರವವೇ ಬೇರೆ. ಅದಕ್ಕಾಗಿ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು ಎಂದು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಸಿರ್ ಹೇಳಿದರು. ಜೀವ ವಿಮಾ ನಿಗಮದ ‘ಭೀಮಾ ಸ್ಕೂಲ್ ಯೋಜನ’ದ ‘ಬೆಸ್ಟ್ ಸ್ಟೂಡೇಂಟ್ ಅವಾರ್ಡ್’ ಅನ್ನು ಒಂದನೇ ತರಗತಿಯಿoದ ಹತ್ತನೇ ತರಗತಿವರೆಗಿನ ಮಕ್ಕಳಿಗೆ ಜೀವ ವಿಮಾ ನಿಗಮದ ಉದ್ಯೋಗಿ ಮಂಜುನಾಥ್ ವಿತರಿಸಿ ಮಾತನಾಡಿ, ಜನ್ಮದಾತರನ್ನು ಎಂದಿಗೂ ತಿರಸ್ಕಾರದಿಂದ ನೋಡ ಬಾರದು ಎಂದರಲ್ಲದೇ, ಸರಕಾರ ದಿಂದ ಶಾಲೆಗೆ ದೊರೆಯತಕ್ಕಂತಹ ಅನುದಾನಗಳನ್ನು ಪಡೆದುಕೊಳ್ಳುವ ಮತ್ತು ಅದನ್ನು ಯೋಗ್ಯ ರೀತಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಅಭಿವೃದ್ಧಿ ಮಂಡಳಿ ಶ್ರಮಿಸಬೇಕು ಎಂದು ಕೋರಿದರು.
ಮಕ್ಕಳೇ ರಚಿಸಿ, ತಯಾರಿಸಿದ ಮಕ್ಕಳ ಕಥಾ ಹೊತ್ತಗೆಯನ್ನು ಕಾರ್ಯಕ್ರಮದ ಅತಿಥಿಗಳು ಅನಾವರಣಗೊಳಿಸಿದರು. ಫುಟ್ಬಾಲ್ನಲ್ಲಿ ರಾಷ್ಟ್ರಮಟ್ಟದ ಸಾಧನೆಗೈದ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಕಾವ್ಯಶ್ರೀಯನ್ನು ಸನ್ಮಾನಿಸಲಾಯಿತು
ಶಾಲಾ ಮಟ್ಟದಲ್ಲಿ, ತಾಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಡಿಕೇರಿ ನ್ಯಾಯಾಲಯದ ಉದ್ಯೋಗಿ ಭೋಜಪ್ಪ, ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷೆ ರತ್ನಾವತಿ ಶೇಷಪ್ಪ, ಸದಸ್ಯರಾದ ಶಿಫಾನತ್, ಸರಸ್ವತಿ, ರಾಧ ವೇದಿಕೆಯಲ್ಲಿದ್ದರು.
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ನೀಲಮ್ಮ ಸ್ವಾಗತಿಸಿದರು. ಪ್ರೌಢಶಾಲೆಯ ಮುಖ್ಯೋಪಾ ಧ್ಯಾಯಿನಿ ಗಂಗಮ್ಮ ವಂದಿಸಿದರು. ಶಿಕ್ಷಕಿ ಆರತಿ ಹೆದ್ದಾರಿಮನೆ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು.