ಸೋಮವಾರಪೇಟೆ,ಫೆ.9: ಇಲ್ಲಿನ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಶನಿವಾರಸಂತೆ ಹೋಬಳಿ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಟಿ.ಆರ್. ಪುರುಷೋತ್ತಮ್ ನೇಮಕ ಗೊಂಡಿದ್ದಾರೆ.

ಬ್ಯಾಂಕ್‍ನ ಸಭಾಂಗಣದಲ್ಲಿ ನಡೆದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಅಧ್ಯಕ್ಷರನ್ನಾಗಿ ಟಿ.ಆರ್. ಪುರುಷೋತ್ತಮ್ ಹಾಗೂ ಉಪಾಧ್ಯಕ್ಷರನ್ನಾಗಿ ಬಿ.ಜಿ. ಪೂವಮ್ಮ ಅವರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಮೊದಲು ಅಧ್ಯಕ್ಷ ಸ್ಥಾನಕ್ಕೆ ಪುರುಷೋತ್ತಮ್ ಮತ್ತು ಎಂ.ಟಿ. ದಾಮೋದರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪೂವಮ್ಮ ಮತ್ತು ಭಗವಾನ್ ಅವರುಗಳು ನಾಮಪತ್ರ ಸಲ್ಲಿಸಿದ್ದರು. ಕೊನೆ ಕ್ಷಣದಲ್ಲಿ ಭಗವಾನ್ ಮತ್ತು ದಾಮೋಧರ್ ನಾಮಪತ್ರ ವಾಪಸ್ ಪಡೆದ ಹಿನ್ನೆಲೆ ಅವಿರೋಧ ಆಯ್ಕೆ ನಡೆಯಿತು.

ಉಳಿದಂತೆ ಕೆ.ಆರ್. ಕೊಮಾರಪ್ಪ, ಕೆ.ಎ. ಲೋಕೇಶ್, ಶಿವಕುಮಾರ್, ಜನಾರ್ಧನ ಪ್ರಭು, ಡಿ.ಡಿ. ಪೊನ್ನಪ್ಪ, ಕೆ.ಬಿ. ಕವಿತ, ಪಿ.ಸಿ. ಬೇಲಯ್ಯ, ಬಿ.ಕೆ. ಪ್ರಶಾಂತ್, ಬಿ.ಎನ್. ಮಂಜುನಾಥ್, ಬಿ.ಬಿ. ಸತೀಶ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರೆ, ಸರ್ಕಾರದ ನಾಮನಿರ್ದೇಶಿತ ಸದಸ್ಯರಾಗಿ ಕೊಡ್ಲಿಪೇಟೆಯ ಮೋಕ್ಷಿತ್ ರಾಜ್ ಅವರನ್ನು ನೇಮಕಗೊಳಿಸಲಾಗಿದೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿಯಾಗಿದ್ದ ಮೋಹನ್ ಅವರು ನಡೆಸಿದರು. ಬ್ಯಾಂಕಿನ ವ್ಯವಸ್ಥಾಪಕ ಶಿವಕುಮಾರ್ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.