ಮಡಿಕೇರಿ, ಫೆ. 9: ಬೆಂಗಳೂರಿನ ಟಿ.ಎ.ಯು.ಆರ್.ಇ.ಎ.ಯೂ. ಎಕ್ಸ್ ಟೆಕ್ವಾಂಡೊ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಟೆಕ್ವಾಂಡೊ ಚಾಂಪಿಯನ್ ಶಿಪ್ನಲ್ಲಿ ಮಡಿಕೇರಿಯ ಮರ್ಕರ ಟೆಕ್ವಾಂಡೊ ಕ್ಲಬ್ನ ವಿದ್ಯಾರ್ಥಿಗಳು ಪುಂಸೆ ಹಾಗೂ ಕ್ಯುರೆಗಿ ವಿಭಾಗದಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದಿದ್ದಾರೆ.
ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿಗಳಾದ ಕರಣ್ ದಿವಾಕರ್ 2 ಚಿನ್ನ, ಎಂ.ಆರ್. ಮೃದುಲ್ ಚಿನ್ನ ಮತ್ತು ಬೆಳ್ಳಿ, ನಿಶುಂತ್ ಬೆಳ್ಳಿ ಮತ್ತು ಕಂಚು, ಆಯುಷ್ ಬೆಳ್ಳಿ ಮತ್ತು ಕಂಚು, ಮೌರ್ಯ ನಂಜಪ್ಪ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ.
ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ದಕ್ಷ ಸೋಮಯ್ಯಗೆ 2 ಬೆಳ್ಳಿ, ತಾನಿಫ್ ತಿಮ್ಮಯ್ಯ ಬೆಳ್ಳಿ ಮತ್ತು ಚಿನ್ನ, ಡರ್ಫ್ ಕರುಂಬಯ್ಯ 2 ಬೆಳ್ಳಿ, ಪ್ರಜ್ಞಾ ಬೆಳ್ಳಿ ಮತ್ತು ಕಂಚು, ಬಿ. ಮನಸ್ವಿ ಬೆಳ್ಳಿ ಮತ್ತು ಕಂಚು ಪದಕವನ್ನು ಪಡೆದಿಕೊಂಡಿದ್ದು, ಮೈಸೂರಿನ ಈಸ್ಟ್ ವೆಸ್ಟ್ ಶಾಲೆಯ ವಿದ್ಯಾರ್ಥಿನಿ ಚೇತನಶ್ರೀ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಮರ್ಕರ ಟೆಕ್ವಾಂಡೊ ಕ್ಲಬ್ನ ತರಬೇತುದಾರ ಕುಶಾಲ್ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.