ಸೋಮವಾರಪೇಟೆ, ಫೆ. 9: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿಯ ಶೇ. 5 ಅನುದಾನದಡಿ ರೂ. 1.51 ಲಕ್ಷ ವೆಚ್ಚದಲ್ಲಿ, ವಿಶೇಷಚೇತನ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 26 ಮಂದಿ ವಿಶೇಷಚೇತನ ಫಲಾನುಭವಿಗಳಿಗೆ ಸೋಲಾರ್ ದೀಪ, ಮೂವರಿಗೆ ಗಾಲಿ ಕುರ್ಚಿಯನ್ನು ವಿತರಿಸಲಾಯಿತು.
ಈ ಸಂದರ್ಭ ಪಂಚಾಯಿತಿ ಅಧ್ಯಕ್ಷೆ ರಾಧಾ ಏಜಣ್ಣ, ಉಪಾಧ್ಯಕ್ಷ ಎನ್. ಗಣೇಶ್, ಸದಸ್ಯರಾದ ಗಿರೀಶ್ ಪೊನ್ನಪ್ಪ, ಎಸ್.ಬಿ. ಸುರೇಂದ್ರ, ಪಿ.ಬಿ. ಪೊನ್ನಪ್ಪ, ಗೌರಿ, ಸುನು ಕಿಶೋರ್ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.