ಸೋಮವಾರಪೇಟೆ, ಫೆ. 9: ಸಮೀಪದ ಕಿರಗಂದೂರು ಗ್ರಾಮ ಪಂಚಾಯಿತಿ ವತಿಯಿಂದ ಕಿರಗಂದೂರು ಸರ್ಕಾರಿ ಶಾಲಾ ಸಭಾಂಗಣದಲ್ಲಿ ಮಕ್ಕಳ ಗ್ರಾಮ ಸಭೆ ನಡೆಯಿತು.
ಗ್ರಾಮ ಸಭೆಯಲ್ಲಿ ಹಾಜರಿದ್ದ ಮಕ್ಕಳು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಆಗಬೇಕಾದ ಹಲವಷ್ಟು ಪ್ರಗತಿ ಕಾರ್ಯಗಳ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದರು. ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ರಾಧಾ ಏಜಣ್ಣ, ಉಪಾಧ್ಯಕ್ಷ ಎನ್. ಗಣೇಶ್, ಸದಸ್ಯರಾದ ಪಿ.ಬಿ. ಪೊನ್ನಪ್ಪ, ಸುಜಾತ ಸೇರಿದಂತೆ ಪಂಚಾಯಿತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಅಭಿಷೇಕ್, ದೀಕ್ಷಿತ್, ಆಕಾಶ್, ಚೇತನ್, ಭವಿಷ್ಯತ್, ಪ್ರಣಾಮ್, ಜೀವನ್, ಹೇಮಂತ್ಕುಮಾರ್, ಸಂತೋಷ್ ಅವರುಗಳು ಚರ್ಚೆಯಲ್ಲಿ ಭಾಗವಹಿಸಿ, ವಿವಿಧ ಪ್ರಗತಿ ಕಾರ್ಯಗಳ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರು.