ಮಡಿಕೇರಿ, ಏ. 17: ಯಾವದೇ ಸಾಲಗಾರರು ತುರ್ತು ಸಾಲ ಮರುಪಾವತಿಸುವಂತೆ ಡಿಸಿಸಿ ಬ್ಯಾಂಕ್ ಒತ್ತಾಯಿಸುತ್ತಿಲ್ಲವೆಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ತಾ. 17ರ ‘ಶಕ್ತಿ’ಯಲ್ಲಿ ಉಡೊತ್‍ಮೊಟ್ಟೆ ಕಾರ್ಮಿಕ ಸಂಘದಲ್ಲಿ ಬ್ಯಾಂಕ್ ಸಾಲ ಮರು ಪಾವತಿಗೆ ಬ್ಯಾಂಕ್‍ನಿಂದ ಒತ್ತಡ ಹೇರಲಾಗುತ್ತಿದೆ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಅವರು, ಸಾಲ ಮರುಪಾವತಿ ಅವಧಿ ಮುಂದೂಡಿಕೆ ಪ್ರಚಲಿತವಾಗಿರುವದರಿಂದ ಬ್ಯಾಂಕ್ ಯಾವ ಸಾಲಗಾರರಿಗೂ ಈ ಬಗ್ಗೆ ಒತ್ತಾಯ ಮಾಡುತ್ತಿಲ್ಲವೆಂದಿದ್ದಾರೆ.