ಸುಂಟಿಕೊಪ್ಪ, ಏ. 17: ಸುಂಟಿಕೊಪ್ಪ ವರ್ಕ್‍ಶಾಪ್ ಮಾಲೀಕರ ಸಂಘದ ವತಿಯಿಂದ ವೃತ್ತಿಬಾಂಧವರು ಕೊರೊನಾ ಲಾಕ್‍ಡೌನ್‍ನಿಂದ ಕೆಲಸವಿಲ್ಲದೆ ಮನೆಯಲ್ಲಿಯೇ ತಂಗಿರುವುದನ್ನು ಗಮನಿಸಿ ಕುಟುಂಬ ನಿರ್ವಹಣೆಗೆ ಕಷ್ಟಕರವಾಗಿದ್ದು, ಸಂಘದ ಪ್ರತಿ ಸದಸ್ಯರಿಗೆ 3,000 ರೂ ನೀಡಲಾಯಿತು.
ಈ ಸಂದರ್ಭದಲ್ಲಿ ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ವಿ.ಎ.ಸಂತೋಷ್ ಮಾತನಾಡಿ ಕಳೆದ 26 ದಿನಗಳಿಂದ ದೇಶವ್ಯಾಪಿ ಲಾಕ್‍ಡೌನ್ ನಡೆಯುತ್ತಿದ್ದು ವೃತ್ತಿಬಾಂಧವರು ನಮ್ಮ ಸಂಘದಲ್ಲಿ ಸದಸ್ಯರೇ ಉಳಿತಾಯ ಮಾಡಿದ ಹಣವನ್ನು ಇಂತಹ ಸಂಕಷ್ಟ ಸಂದರ್ಭದಲ್ಲಿ ನಮ್ಮ 22 ಸದಸ್ಯರಿಗೆ ತಲಾ 3 ಸಾವಿರ ರೂ ವಿನಂತೆ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅನೀಶ್, ಕಾರ್ಯದರ್ಶಿ ಬಿ.ಎಸ್. ರಮೇಶ್, ಖಜಾಂಜಿ ಕೆ.ಸಿ.ವಿನೋದ್, ಮಾಜಿ ಕಾರ್ಯದರ್ಶಿ ಪಿ.ಆರ್. ಸುನಿಲ್‍ಕುಮಾರ್ ಹಾಗೂ ಸಮಿತಿ ಸದಸ್ಯರು ಇದ್ದರು.